ಬೆಂಗಳೂರು –
ಒಂದು ಕಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋ ನಾ ಮಹಾಮಾರಿ ಹೆಚ್ಚಾಗುತ್ತಿದೆ.ಇತ್ತ ಇದರ ನಡುವೆ ನಮ್ಮ ಶಿಕ್ಷಕರಿಗೆ ತಾಪತ್ರಯ ತಪ್ಪುತ್ತಿಲ್ಲ. ಈಗಾಗಲೇ ಶಾಲೆಗಳಿಗೆ ರಜೆಯನ್ನು ನೀಡಲಾಗಿದೆ ಆದರೆ ಶಿಕ್ಷಕ ರಿಗೆ ಮಾತ್ರ ರಜೆನೂ ಇಲ್ಲ ಸುಮ್ಮನೇ ಶಾಲೆಗಳಿಗೆ ಹೊಗೋದು ಏನಾದರೂ ಕೆಲಸ ಕಾರ್ಯಗಳಿದ್ದರೆ ಮಾಡಿ ಕುಳಿತುಕೊಂಡು ಮನೆಗೆ ಬರೋದು ಇನ್ನೂ ಸಾರಿಗೆ ನೌಕರರ ಪ್ರತಿಭಟನೆ ನಡೆಯುತ್ತಿದ್ದು ಹೀಗಾ ಗಿ ಬಸ್ ಸಂಚಾರ ಬಂದ್ ಆಗಿದ್ದು ಹೀಗಾಗಿ ಪ್ರತಿದಿ ನ ಶಿಕ್ಷಕರು ಏನೇಲ್ಲಾ ತೊಂದರೆ ನೋವುಗಳನ್ನು ಅನುಭವಿಸುತ್ತಾ ಶಾಲೆಗಳಿಗೆ ಹೋಗುತ್ತಿದ್ದಾರೆ ಎನ್ನೊದಕ್ಕೆ ಪ್ರತಿ ದಿನ ಶಿಕ್ಷಕರು ಅನುಭವಿಸುತ್ತಿರುವ ಘಟನೆಗಳೇ ನಮ್ಮ ಮುಂದೆ ಕಂಡು ಬರುತ್ತವೆ.
ಇಂಥಹ ಪರಸ್ಥಿತಿಯ ನಡುವೆ ಶಾಲೆಗಳಿಗೆ ರಜೆ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳಿಗೆ ಇಲ್ಲವೇ ಸಚಿವರಿ ಗೆ ರಜೆಯನ್ನು ಮಂಜೂರು ಮಾಡಿಸಿದ್ದರೆ ಅದಕ್ಕೊಂ ದು ಅರ್ಥ ಬರುತ್ತಿತ್ತು ರಾಜ್ಯ ಅಧ್ಯಕ್ಷರು ಎಂದು ಆಯ್ಕೆ ಮಾಡಿದ್ದಕ್ಕೆ ಸಾರ್ಥಕವಾಗುತ್ತಿತ್ತು ಆದರೆ ಈವರೆಗೆ ಮಾತ್ರ ಯಾವುದು ಆಗುತ್ತಿಲ್ಲ. ಹೇಳಿದಂತೆ ಮೂರು ದಿನಗಳಲ್ಲಿ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದವರು ಮೂರು ತಿಂಗಳಾದರೂ ಈವರೆಗೆ ಮಾತ್ರ ಅದು ಆಗಿಲ್ಲ.
ಇನ್ನೂ ಸಧ್ಯ ಕೋವಿಡ್ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ರಜೆಯನ್ನು ನೀಡಲಾಗಿದ್ದು ಶಿಕ್ಷಕರಿಗೆ ಯಾವುದೇ ಕೆಲಸ ಕಾರ್ಯಗಳಿಲ್ಲದೇ ಬೇಜರಗೊಂ ಡಿದ್ದಾರೆ. ಬಸ್ ಇಲ್ಲದಿದ್ದರೂ ಕೂಡಾ ಟೆಂಪೂದಲ್ಲಿ ಸಿಕ್ಕಸಿಕ್ಕ ವಾಹನಗಳಲ್ಲಿ ಪ್ರಯಾಣಿಸುವ ಅನಿವಾ ರ್ಯತೆ ನಮ್ಮ ಶಿಕ್ಷಕರಿಗೆ ಸಧ್ಯ ಬಂದಿದೆ.
ಅದರಲ್ಲೂ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಕೂಡಾ ಇಂದು ಸಾಮಾನ್ಯರಂತೆ ಟೆಂಪೂ ದಲ್ಲಿ ಶಾಲೆಗೆ ತೆರಳಿದರು. ಅತ್ತ ಆ ರಾಜ್ಯಾಧ್ಯಕ್ಷರು ಎಸಿ ಕಾರಿನಲ್ಲಿ ಪ್ರಯಾಣಿಸು ತ್ತಿದ್ದಾರೆ.ಹೀಗಾಗಿ ಇವೆಲ್ಲದರ ನಡುವೆ ನೋವು ಕಷ್ಟ ವನ್ನು ಆಲಿಸಬೇಕಾದ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರು ಎಲ್ಲಿ ದ್ದಾರೋ ಸಧ್ಯ ನಮ್ಮ ಶಿಕ್ಷಕರು ಅನುಭವಿಸುತ್ತಿರುವ ನೋವುಗಳು ಕಾಣುತ್ತಿಲ್ಲವೇನು ಎಂಬ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಶಿಕ್ಷಕರು ಕೇಳುತ್ತಿದ್ದಾ ರೆ.
ಇನ್ನಾದರೂ ಎಚ್ಚೆತ್ತುಕೊಂಡು ಕೂಡಲೇ ಒಂದು ಕಡೆ ಮಹಾಮಾರಿಯ ಆರ್ಭಟ ಮತ್ತೊಂದೆಡೆ ಸಾರಿಗೆ ಸಂಚಾರ ಸಮಸ್ಯೆ ಇವೆರಡರ ನಡುವೆ ಎನೇಲ್ಲಾ ನೋವುಗಳನ್ನು ಅನುಭವಿಸುತ್ತಿರುವ ಶಿಕ್ಷಕರ ನೋ ವಿಗೆ ಇನ್ನಾದರೂ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು