ಬೆಂಗಳೂರು –
ಅವಧಿ ಮುಗಿಯುತ್ತಾ ಬಂದರು 7ನೇ ವೇತನ ಆಯೋಗದ ಮಾತೆ ಇಲ್ಲ – ಮೌನವಾಗಿದ್ದಾರೆ CM,ಆಯೋಗದ ಅಧ್ಯಕ್ಷರು…..ಮಾಡತೀರಾ ಇಲ್ಲ ಅದನ್ನಾದರೂ ಹೇಳಿ ಹೌದು
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರ ಣೆಗಾಗಿ ರಚನೆ ಮಾಡಿರುವ 7ನೇ ವೇತನ ಆಯೋಗದ ಅವಧಿ ಮಾರ್ಚ್ 15 ಕ್ಕೆ ಮುಕ್ತಾಯವಾಗಲಿದೆ.ಈ ಹಿಂದೆ ರಚನೆಗೊಂ ಡಿರುವ ಡಾ ಸುಧಾಕರ ನೇತ್ರತ್ವದಲ್ಲಿ ರಚನೆ ಗೊಂಡಿರುವ ಈ ಒಂದು ಆಯೋಗದಿಂದ ವರದಿ ಕೂಡಾ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಸಿದ್ದಗೊಂಡಿದೆ.ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲು ಸಿದ್ದವಾಗಿದ್ದರೂ ಕೂಡಾ ಅದ್ಯಾಕೋ ಏನೋ ರಾಜ್ಯ ಸರ್ಕಾರ ಗ್ಯಾರಂಟಿಯಲ್ಲಿ ಇದನ್ನು ಸ್ವೀಕಾರ ಮಾಡಿದರೆ ಇದೊಂದು ದೊಡ್ಡ ಆರ್ಥಿಕ ವಾಗಿ ಬಾರವಾಗಲಿ ಎಂದುಕೊಂಡು ಮುಂದು ಡೂತ್ತಲೆ ಬರುತ್ತಿದೆ.
ಹೀಗಿರುವಾಗ ಸಧ್ಯ ಮಾರ್ಚ್ 15 ಕ್ಕೆ ಈ ಒಂದು ಆಯೋಗದ ಅವಧಿ ಎರಡನೇಯ ಬಾರಿಗೆ ವಿಸ್ತರಣೆ ಮಾಡಿದ್ದು ಮುಕ್ತಾಯವಾಲಿದೆ. ಇನ್ನೇನು ಒಂದೇ ವಾರ ಅವಧಿ ಮುಕ್ತಾಯಕ್ಕೆ ಸಮಯವಿದ್ದರೂ ಕೂಡಾ ಈವರೆಗೆ 7ನೇ ವೇತನ ಆಯೋಗದಿಂದ ವರದಿ ಸ್ವೀಕಾರದ ಮಾತುಗಳು ಜಾರಿಗೆ ತರುವ ಆದೇಶಗಳು ಕೇಳಿ ಬರುತ್ತಿಲ್ಲ ಕಾಣುತ್ತಿಲ್ಲ.ಹೀಗಿರುವಾಗ ಈಗಾಗಲೇ ಆತಂಕ ದಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಆತಂಕ ಎದುರಾಗಿದೆ.
ಈ ಒಂದು ವಿಚಾರ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಈಗಾಗಲೇ ರಾಜ್ಯದ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ ಮನವಿಯನ್ನು ಕೂಡಾ ನೀಡಿದ್ದಾರೆ.ಇದರ ನಂತರ ಬಜೆಟ್ ನಲ್ಲಾದರೂ 7ನೇ ವೇತನಕ್ಕೆ ಏನಾದರೂ ಅನು ದಾನ ಸಿಗುತ್ತದೆ ಎಂದುಕೊಂಡಿದ್ದ ಸರ್ಕಾರಿ ನೌಕರರಿಗೆ ಮಹಾ ಸಮ್ಮೇಳನ ಕೂಡಾ ನಿರಾಸೆ ಯನ್ನುಂಟು ಮಾಡಿದ್ದು
ಸಧ್ಯ ವೇತನ ಆಯೋಗದ ಅವಧಿ ಮುಗಿಯುತ್ತಾ ಬಂದಿದ್ದು ಈ ಕುರಿತಂತೆ ಮುಖ್ಯಮಂತ್ರಿ ಮೌನ. ವಾಗಿದ್ದು ಇತ್ತ 7ನೇ ವೇತನ ಆಯೋಗದ ಅಧ್ಯಕ್ಷರು ಕೂಡಾ ಶಾಂತವಾಗಿದ್ದಾರೆ ಇನ್ನೇನು ಒಂದು ಕಡೆಗೆ ಆಯೋಗದ ಅವಧಿ ಮುಕ್ತಾಯಕ್ಕೆ ಒಂದು ವಾರ ಮತ್ತೊಂದು ಕಡೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲು ಒಂದು ವಾರ ಹೀಗಿರುವಾಗ
ಈ ಕೂಡಲೇ ಈ ಒಂದು ಆಯೋಗದಿಂದ ವರದಿಯನ್ನು ತರಿಸಿಕೊಂಡು ಮುಖ್ಯಮಂತ್ರಿಯ ವರು ಜಾರಿಗೆ ತಗೆದುಕೊಂಡು ಬಂದು ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಲಿ ಎಂಬ ದೊಡ್ಡ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……