ಬೆಂಗಳೂರು –
CM ಭೇಟಿಯಾದ 7ನೇ ವೇತನ ಆಯೋಗದ ಟೀಮ್ – 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ನೇತ್ರತ್ವದಲ್ಲಿ ಮುಖ್ಯಮಂತ್ರಿಯವ ರನ್ನು ಭೇಟಿಯಾಗಿ ಚರ್ಚಿಸಿದ್ದೇನು ಗೊತ್ತಾ ಕಂಪ್ಲೇಟ್ ಮಾಹಿತಿ.
ಹೌದು ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ. ಈಗಾಗಲೇ ಈ ಒಂದು ಸಮಿತಿ ಕೂಡಾ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸಂಪೂರ್ಣ ವಾದ ಮಾಹಿತಿಯನ್ನು ಪಡೆದು ಕೊಂಡು ವರದಿಯನ್ನು ಸಿದ್ಧತೆ ಮಾಡುತ್ತಿದ್ದು
ಇವೆಲ್ಲದರ ನಡುವೆ ರಾಜ್ಯದಲ್ಲಿ ಹೊಸದಾಗಿ ರಾಜ್ಯ ಸರ್ಕಾರ ರಚನೆಗೊಂಡ ನಂತರ ಮತ್ತೆ ಸಮಿತಿಗೆ ವರದಿ ನೀಡಲು 6 ತಿಂಗಳು ಕಾಲ ಸಮಯ ವನ್ನು ನೀಡಿದ್ದು ಹೀಗಾಗಿ ಸದ್ಯ ಸಮಿತಿ ಕೂಡಾ ಸಂಪೂರ್ಣುವಾಗಿ ವರದಿಯನ್ನು ಸಿದ್ಧತೆ ಮಾಡುತ್ತಿದ್ದು ಈ ನಡುವೆ 7ನೇ ವೇತನ ಆಯೋ ಗದ ಟೀಮ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆಯನ್ನು ಮಾಡಿದರು.
ಹೌದು ಬೆಂಗಳೂರಿನ ನಿವಾಸದಲ್ಲಿ ಭೇಟಿ ಯಾದ ನಿಯೋಗವು 7ನೇ ವೇತನ ಆಯೋಗದ ವರದಿ ಸೇರಿದಂತೆ ಹಲವು ವಿಚಾರ ಗಳ ಕುರಿತು ಮಹತ್ವದ ಚರ್ಚೆಯನ್ನು ಮಾಡಿದರು
7 ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರ ನಿಯೋಗವು ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿತು.ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿಗಳಾದ ಪಿ.ಸಿ. ಜಾಫರ್, ಡಾ: ಎಂ.ಟಿ. ರೇಜು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..