ಬಾಗಲಕೋಟೆ –
ಸುರೇಶ ನಿಂಗಪ್ಪ ಸೊನ್ನದ ಎಂದು ಹೆಸರು ಹೇಳಿದ ರೆ ಕೇಳಿದರೆ ಸಾಕು ಇಡಿ ಬಾಗಲಕೋಟೆ ಜಿಲ್ಲೆ ಹೇಳೊದು ಇವರೊಬ್ಬರು ಮಹಾನ್ ಶಿಕ್ಷಣ ಪ್ರೇಮಿ ತುಂಬಾ ಕಷ್ಟದಲ್ಲಿ ಬೆಳೆದು ಶಿಕ್ಷಕರಾಗಿ ಆ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾಲದಂತೆ ತಂದೆಯವರ ಹೆಸರಿನಲ್ಲಿ ಸ್ವಂತ ಊರಿನಲ್ಲಿ ಒಂದು ಉತ್ತಮ ಗುಣ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ,ಬಹಳ ಅಪರೂ ಪದ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದವರು.ಅಲ್ಲದೇ ಬಡ ಮಕ್ಕಳಿಗೆ,ದೀನ ದಲಿತರಿಗೆ,ಹಿಂದುಳಿದ ವರ್ಗ ದ ಮಕ್ಕಳಿಗೆ ಅಪಾರವಾಗಿ ಸಹಾಯಹಸ್ತ ಮಾಡು ವಂತಹ ಮಹಾನ್ ವ್ಯಕ್ತಿ ಅವರು ಹೀಗೆ ಎಲ್ಲರೂ ಹೇಳುವ ಮಾತು ಈ ಒರ್ವ ಮಹಾನ್ ಸಾಧಕ ಮಹಾನ್ ಶಿಕ್ಷಕ ಸಾಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸುರೇಶ್ ಅವರು ಇಂದು ಇನ್ನಿಲ್ಲ ಎಂಬ ಸುದ್ದಿ ಕೇಳಿ ನಂಬ ಲಾಗುತ್ತಿಲ್ಲ.ಹೌದು ಇದು ಅತ್ಯಂತ ದುಃಖಕರ ಸಂಗತಿಯಾಗಿದೆ.ಬಾಗಲಕೋಟೆ ಸಾರ್ವ ಜನಿಕ ಶಿಕ್ಷಣ ಇಲಾಖೆ ಒಬ್ಬ ಕ್ರಿಯಾಶೀಲ ಅತ್ಯುತ್ತಮ ಶಿಕ್ಷಕನನ್ನು ಕಳೆದುಕೊಂಡು ಇಂದು ಬಡವಾಗಿದೆ.
ತಮ್ಮ ತಂದೆಯವರ ಹೆಸರಿನಲ್ಲಿ ಸ್ವಂತ ಊರಿನಲ್ಲಿ ಒಂದು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ,ಬಹಳ ಅಪರೂಪದ ಶಿಕ್ಷಣ ಸಂಸ್ಥೆಯನ್ನು ಬೆಳೆಸಿ ಬಡ ಮಕ್ಕಳಿಗೆ,ದೀನ ದಲಿತರಿಗೆ,ಹಿಂದುಳಿದ ವರ್ಗದ ಮಕ್ಕಳಿಗೆ ಅಪಾರವಾಗಿ ಸಹಾಯಹಸ್ತ ಮಾಡುವಂತಹ ಶಿಕ್ಷಣ ಸಂಸ್ಥೆ ಎಂಬ ಹೆಸರಿಗೆ ಪಾತ್ರ ವಾಗಿದೆ.ಅದೆಷ್ಟೋ ಬಡ ಪ್ರತಿಭಾವಂತ ಮಕ್ಕಳಿಗೆ ಫೀ ನೀಡಿ,ಶಿಕ್ಷಣ ಧಾರೆ ಎರೆದು ನವೋದಯ, ಸೈನಿ ಕ ಶಾಲೆಗಳಲ್ಲಿ ಆಯ್ಕೆ ಮಾಡಿಸಿದ ಅಪರೂಪದ ಸಂಸ್ಥೆ ಇದಾಗಿದೆ.ಸಾಲದಂತೆ ಶಿಕ್ಷಣ ಇಲಾಖೆಯ ಅದೆಷ್ಟೋ ಕಾರ್ಯಕ್ರಮಗಳಿಗೆ ಲಕ್ಷಾಂತರ ದಾನ ವನ್ನು ನೀಡುವುದರ ಮೂಲಕ ತಮ್ಮ ಸೇವೆಯನ್ನು ಮಾಡಿದ ಸಾಕಷ್ಟು ಉದಾಹರಣೆಗಳಿವೆ.
ಇಂತಹ ಒಬ್ಬ ಅತ್ಯುತ್ತಮ ಶಿಕ್ಷಕ ದಾನ ಚಿಂತಾಮಣಿ ಯನ್ನು ಇಲಾಖೆ ಕಳೆದುಕೊಂಡಿದ್ದು ಬಹುದೊಡ್ಡ ನಷ್ಟ.ಇನ್ನೂ ಮೃತರಾದ ಈ ಒಂದು ಮಹಾನ್ ಶಿಕ್ಷಕ ನಿಗೆ ಪ್ರೇಮಿಗೆ ಇನ್ನೂ ಮೃತರಾದ ಶಿಕ್ಷಕರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ ಹನಮಂತ ಬೂದಿಹಾಳ ಇನ್ನೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗ ಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜು ಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯ ಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜು ಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜು ಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂ ಬಿಕಾ ಭಟ್.ನಾಗರತ್ನ,ಲಕ್ಷ್ಮೀದೇವಮ್ಮ, ಎಂ ವಿ, ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗ ಡಿ ,ಜಗದೀಶ್ ಬೋಳಸೂರ, ಅಶೋಕ ಸಜ್ಜನ, ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾ ರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ.