7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಆರಂಭಗೊಂಡ ಚಟುವಟಿಕೆಗಳು ಸರ್ಕಾರಿ ನೌಕರರ ಮುಖದಲ್ಲಿ ಮೂಡಿತು ಮಂದಹಾಸ

Suddi Sante Desk
7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಆರಂಭಗೊಂಡ ಚಟುವಟಿಕೆಗಳು ಸರ್ಕಾರಿ ನೌಕರರ ಮುಖದಲ್ಲಿ ಮೂಡಿತು ಮಂದಹಾಸ

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಗಾಗಿ 7ನೇ ವೇತನ ಆಯೋಗ್ಕೆ ಅಧ್ಯಕ್ಷರನ್ನಾಗಿ ಸುಧಾಕರ್ ರಾವ್ ರವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ಇತ್ತ  7ನೇ ವೇತನ ಆಯೋಗ ವಿಚಾರ ಕುರಿತಂತೆ ಕೆಲವೊಂದಿಷ್ಟು ಮಾಹಿತಿ ಕಲೆಹಾಕಲು ಆರಂಭ ಮಾಡಿದ್ದಾರೆ.

ಹೌದು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ ರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ಈಗಾಗಲೇ ಹೇಳಿದ್ದು ಘೋಷಣೆ ಮಾಡಿದ್ದಾರೆ.

 

 

ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ಬೆನ್ನಲ್ಲೇ ಇತ್ತ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ಏನೇನು ಮಾಡಬಹುದು ಈ ಒಂದು ವಿಚಾರ ಕುರಿತಂತೆ ಬೇಕಾಗಿರುವ ಎಲ್ಲಾ ದಾಖಲೆಗಳ ಪಟ್ಟಿ ಯನ್ನು ಅಧ್ಯಕ್ಷರು ಮಾಡಿಕೊಳ್ಳಲು ಮುಂದಾಗಿ ದ್ದಾರೆ.ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯ ದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗಿದೆ.

ಹೀಗಾಗಿ  ಸಾಕಷ್ಟು ದಿನಗಳಿಂದ ಸರ್ಕಾರಿ ನೌಕರರಿಂದ ಒತ್ತಾಯಗಳಿದ್ದವು ಇದರಂತೆ ವೇತನ ಪರಿಷ್ಕರಣೆ ಹಾಗೂ ಸೌಲಭ್ಯಗಳ ವಿಸ್ತರಣೆಗೆ 7ನೇ ವೇತನ ಆಯೋಗ ರಚಿಸ ಲಾಗಿದೆ ನವೆಂಬರ್ ಅಂತ್ಯದ ಒಳಗೆ ವೇತನ ಆಯೋಗ ರಚನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು ಹೀಗಾಗಿ ಅತ್ತ ಮುಖ್ಯ ಮಂತ್ರಿ ಸೂಚನೆಯಂತೆ ಇತ್ತ ಅಧ್ಯಕ್ಷರು ತಮ್ಮ ಚಟುವಟಿಕೆಗಳನ್ನು ಆರಂಭ ಮಾಡಿದ್ದಾರೆ.

7ನೇ ವೇತನ ಆಯೋಗಕ್ಕೆ ಅಧ್ಯಕ್ಷರ ನೇಮಕದ ಬೆನ್ನಲ್ಲೇ ಸಧ್ಯ ಆರಂಭಗೊಂಡಿವೆ ಚಟುವಟಿ ಕೆಗಳು ಇದಕ್ಕೆ ಬೇಕಾದ ಎಲ್ಲಾ ಮಾಹಿತಿ ಶೇಖರಣೆ ಕಾರ್ಯ ಆರಂಭಕ್ಕೆ ಕೈಹಾಕಿದ್ದಾರೆ ಸುಧಾಕರ್ ರವರು ಈ ಒಂದು ಕಾರ್ಯ ದಿಂದ ರಾಜ್ಯದ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸವು ಮೂಡಿದೆ.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.