ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ವಲಯ ಆಯುಕ್ತರ ಕಾರಬಾರ್ – ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ರೆಡ್ಡಿಯವರ ಕಾರಬಾರ್….. ಹೀಗೂ ಮಾಡಬಹುದಾ…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಏನೇಲ್ಲಾ ಮಾಡಿದ್ರು ನಮ್ಮನ್ನು ಯಾರು ಕೇಳೊರಿಲ್ಲ ನಮಗೆ ಯಾರು ಹೇಳೊರಿಲ್ಲ ಎನ್ನುವ ಮೂಡ್ ನಲ್ಲಿ ದ್ದಾರೆ.ಪಾಲಿಕೆಯಲ್ಲಿ ಖಡಕ್ ಆಯುಕ್ತರಿದ್ದರೂ ಕೂಡಾ ಅವರಿಗೆ ಗೊತ್ತಿಲ್ಲದಂತೆ ಕೆಲ ಅಧಿಕಾರಿ ಗಳು ಸಿಬ್ಬಂದಿಗಳು ಏನೇನು ಮಾಡ್ತಾ ಇದ್ದು ಇದಕ್ಕೆ ಸಾಕ್ಷಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ತಿರುಗಾಡುತ್ತಿರುವ ಬಳ್ಳಾರಿ ಮಹಾನಗರ ಪಾಲಿಕೆಯ ವಲಯ ಆಯುಕ್ತರ ಬೋರ್ಡ್ ಇರುವ ಕಾರು.
ಹೌದು ಬಳ್ಳಾರಿಯ ಮಹಾನಗರ ಪಾಲಿಕೆಯಲ್ಲಿ ವಲಯ ಆಯುಕ್ತರಾಗಿದ್ದ ಪ್ರಹ್ಲಾದ್ ರೆಡ್ಡಿ ಯವರು ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ವರ್ಗಾವಣೆಯಾಗಿ ಸಧ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 3 ರಲ್ಲಿ ವಲಯ ಆಯುಕ್ತರಾಗಿದ್ದು ಇಲ್ಲೂ ಬಂದ ಮೇಲೂ ಇನ್ನೂ ತಮ್ಮದೇ ಕಾರಿನ ಮೇಲೆ ಇನ್ನೂ ಬಳ್ಳಾರಿ ಮಹಾನಗರ ಪಾಲಿಕೆಯ ಬೋರ್ಡ್ ಇರುವ ಕಾರು ತಿರುಗಾಡುತ್ತಿದೆ.
ಹೌದು ಅಲ್ಲಿಂದ ಇಲ್ಲಿಗೆ ಬಂದ ಮೇಲೂ ಇನ್ನೂ ಕೂಡಾ ಅಲ್ಲಿರುವ ಬೋರ್ಡ್ ನ್ನೆ ಹಾಕಿಕೊಂಡು ರೆಡ್ಡಿಯವರು ತಿರುಗಾಡುತ್ತಿದ್ದಾರೆ.ಈ ಒಂದು ಕಾರನ್ನು ನೋಡಿದ ಪ್ರತಿಯೊಬ್ಬರು ಬಳ್ಳಾರಿ ಮಹಾನಗರ ಪಾಲಿಕೆಯ ಕಾರು ಇಲ್ಲಿ ಯಾಕೇ ಎಂಬ ಮಾತುಗಳನ್ನು ಮಾತನಾಡುತ್ತಿದ್ದು ಕಾರನ್ನು ನೋಡಿದ ಪ್ರತಿಯೊಬ್ಬರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ಇಲ್ಲದಂತಾಗಿದೆ.
ಹೀಗಾಗಿ ಇದೊಂದು ದೊಡ್ಡ ಸಂಶಯವನ್ನು ಹುಟ್ಟುಹಾಕಿದ್ದು ಇವರ ಕಾರ್ ಬಾರ್ ಗೆ ಯಾರು ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದೆ.ಕಾರನ್ನು ನೋಡಿದ ಪ್ರತಿಯೊಬ್ಬರು ಈ ಕಾರ್ ಇಲ್ಲಿ ಯಾಕೆ ಎಂಬ ಮಾತುಗಳನ್ನು ಪ್ರಶ್ನೆಗಳನ್ನು ಕೇಳುತ್ತಿದ್ದು ಒಮ್ಮೆ ನೋಡಿದರೆ ವೆಯಕ್ತಿಕ ಕಾರಿನ ಮೇಲೆ ಹೀಗೆ ಹಾಕಿಕೊಂಡು ತಿರುಗಾಡಲು ಬರೊದಿಲ್ಲ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ
ಸಧ್ಯ ಪಾಲಿಕೆಯಲ್ಲಿ ಖಡಕ್ ಆಯುಕ್ತರಾಗಿ ಕೆಲಸವನ್ನು ಮಾಡುತ್ತಿರುವ ಡಾ ಈಶ್ವರ ಉಳ್ಳಾಗಡ್ಡಿಯವರು ಇನ್ನಾದರೂ ಇದನ್ನು ನೋಡಿದ ಮೇಲೆ ರೆಡ್ಡಿಯವರ ಕಾರಬಾರ್ ಗೆ ಕಡಿವಾಣ ಹಾಕುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..






















