ಗುಡ್ಡ ಕುಸಿತ ಪ್ರದೇಶದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡ ಅಂಕೋಲಾ ಪೊಲೀಸರು – ಎಸ್ಪಿ ಯವರ ಮಾರ್ಗದರ್ಶನದಲ್ಲಿ ಹತ್ತಾರು ಕೆಲಸಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ ಇನ್ಸ್ಪೆಕರ್ ಶ್ರೀಕಾಂತ ತೋಟಗಿ ನೇತ್ರತ್ವ ಜನಸ್ನೇಹಿ ಪೊಲೀಸ್ ಠಾಣೆ…..

Suddi Sante Desk
ಗುಡ್ಡ ಕುಸಿತ ಪ್ರದೇಶದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡ ಅಂಕೋಲಾ ಪೊಲೀಸರು – ಎಸ್ಪಿ ಯವರ ಮಾರ್ಗದರ್ಶನದಲ್ಲಿ ಹತ್ತಾರು ಕೆಲಸಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ ಇನ್ಸ್ಪೆಕರ್ ಶ್ರೀಕಾಂತ ತೋಟಗಿ ನೇತ್ರತ್ವ ಜನಸ್ನೇಹಿ ಪೊಲೀಸ್ ಠಾಣೆ…..

ಅಂಕೋಲಾ

ಗುಡ್ಡ ಕುಸಿತ ಪ್ರದೇಶದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡ ಅಂಕೋಲಾ ಪೊಲೀಸರು – ಎಸ್ಪಿ ಯವರ ಮಾರ್ಗದರ್ಶನದಲ್ಲಿ ಹತ್ತಾರು ಕೆಲಸ ಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ ಇನ್ಸ್ಪೆಕರ್ ಶ್ರೀಕಾಂತ ತೋಟಗಿ ನೇತ್ರತ್ವ ಜನಸ್ನೇಹಿ ಪೊಲೀಸ್ ಠಾಣೆ ಹೌದು

ಸಾಮಾನ್ಯವಾಗಿ ಪೊಲೀಸರು ಎಂದರೇ ಅವರು ಹಾಗೇ ಹೀಗೆ ಎನ್ನುವರರೇ ಹೆಚ್ಚು ಹೀಗಿರುವಾಗ ಬಿಡುವಿಲ್ಲದ ಕೆಲಸ ಕರ್ತವ್ಯದ ನಡುವೆಯೂ ಕೂಡಾ ನಾವು ನೆಮ್ಮದಿಯಾಗಿರಬೇಕು ಎಂದರೆ ಪೊಲೀಸರು ಒಂದು ಕಾರಣ ಎಂಬ ಮಾತಿಗೆ ಅಂಕೋಲಾ ಪೊಲೀಸರೇ ಸಾಕ್ಷಿಯಾಗಿದ್ದಾರೆ.

ಹೌದು ಕೇವಲ ಕರ್ತವ್ಯ ಎಂದುಕೊಂಡು ತಾವಾಯಿತು ತಮ್ಮ ಕೆಲಸವಾಯಿತು ಎಂದು ಕೊಳ್ಳದ ಅಂಕೋಲಾ ಪೊಲೀಸರು ಎಸ್ಪಿ ಎಮ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ಒಳ್ಳೇಯ ಕೆಲಸಗಳನ್ನು ಮಾಡಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕರ್ ಶ್ರೀಕಾಂತ ತೋಟಗಿ ಅವರ ನೇತ್ರತ್ವದಲ್ಲಿ ಗುಡ್ಡ ಕುಸಿತಗೊಂಡ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಮಾಡಿದರು

ಸಧ್ಯ ಎಲ್ಲಿ ನೋಡಿದಲ್ಲಿ ಬಿಟ್ಟು ಬಿಡಲಾರದೇ ಮಳೆರಾಯ ಅಬ್ಬರಿಸುತ್ತಿದ್ದು ಹೀಗಿರುವಾಗ ಅಂಕೋಲ ಪೊಲೀಸರು ಹೆದ್ದಾರಿ ಮೇಲೆ ಅದರಲ್ಲೂ ಈ ಒಂದು ಪ್ರದೇಶದಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಸಮಸ್ಯೆ ಆಗಬಾರದೆಂಬ ಕಾರಣಕ್ಕಾಗಿ ಕೆಲವೊಂದಿಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಯಾಣ ಮಾಡುವಾಗ ಕೈಗೊಳ್ಳಬಹುದಾದ ಸೂಚನೆಗಳನ್ನು ಒಳ ಗೊಂಡಿರುವ 12 ಸೂಚನಾ ಫಲಕಗಳನ್ನು,

ಹಲವಾರು ಬ್ಯಾರಿಕೇಡ್ ಗಳನ್ನು ಅದರಲ್ಲೂ ಸಿಮೇಂಟ್ ಬ್ಯಾರಿಕೇಡ್ ಗಳನ್ನು ಹೆದ್ದಾರಿಯಲ್ಲಿ ಅಳವಡಿಸಲಾಗಿದೆ.ಇದರೊಂದಿಗೆ ಮಳೆಯ ನಡುವೆ ಅನುಕೂಲವಾಗಲೆಂಬ ಕಾರಣಕ್ಕಾಗಿ
ಬ್ಲೀಂಕರ್ಸ್ ಗಳನ್ನು ಹಾಕಿ ನಿರಂತರವಾದ ಮಳೆಗೆ ಹಾಳಾಗಿದ್ದ ರಸ್ತೆಯನ್ನು ಸಣ್ಣಪುಟ್ಟ ದಲ್ಲಿ ರಿಪೇರಿ ಮಾಡಿದ್ದಾರೆ ಇದರೊಂದಿಗೆ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಅಂಕೋಲಾ ಪೊಲೀಸರು ಒಂದಿಷ್ಟು ಜನಸ್ನೇಹಿಯಾಗಿರುವ ಕೆಲಸಗಳನ್ನು ಮಾಡಿ

ಜಿಲ್ಲೆಯ ಮತ್ತು ರಾಜ್ಯದ ಗಮನ ಸೆಳೆದಿದ್ದಾರೆ. ಠಾಣೆಯ ಇನಸ್ಪೇಕ್ಟರ್ ಶ್ರೀಕಾಂತ್ ತೋಟಗಿ ಯವರ ನೇತ್ರತ್ವದಲ್ಲಿ ಟೀಮ್ ಹತ್ತಾರು ಕೆಲಸಗ ಳನ್ನು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಅಂಕೋಲಾ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.