ಬೆಂಗಳೂರು –
ರಾಜ್ಯದಲ್ಲಿ ಹೊಸ 12 ಪೊಲೀಸ್ ಠಾಣೆಗಳ ಘೋಷಣೆ – ಬಜೆಟ್ ನಲ್ಲಿ ಘೋಷಣೆ ಮಾಡಿದ CM……ಯಾವ ಯಾವ ಜಿಲ್ಲೆಗಳಲ್ಲಿ ಹೊಸ ಠಾಣೆ ಆರಂಭ ಗೊತ್ತಾ ಸಂಪೂರ್ಣ ಮಾಹಿತಿ…..
ರಾಜ್ಯದಲ್ಲಿ ಮತ್ತೆ 12 ಹೊಸ ಪೊಲೀಸ್ ಠಾಣೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಕರ್ನಾಟಕ ಬಜೆಟ್ 2026 ರಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ ಮಾಡುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಕರ್ನಾಟಕದ 11 ಜಿಲ್ಲೆಗಳಲ್ಲಿ ಹೊಸದಾಗಿ ಪೊಲೀಸ್ ಠಾಣೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 2 ಕಡೆ ಹೊಸ ಠಾಣೆ ಬರಲಿದ್ದು ಉಳಿದಂತೆ ದಾವಣಗೆರೆ ಕೋಲಾರ ಸೇರಿ 11 ಜಿಲ್ಲೆಯ ವಿವಿಧೆಡೆ ಹೊಸ ಠಾಣೆ ತಲೆ ಎತ್ತಲಿವೆ ಎಂದರು ಇನ್ನೂ ಭದ್ರತಾ ದೃಷ್ಟಿ ಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.ಇದರೊಂದಿಗೆ ಹೊಸ ಪೊಲೀಸ್ ಠಾಣೆ ಆರಂಭ ಕುರಿತಂತೆ ಸಾಕಷ್ಟು ಪ್ರಮಾಣ ದಲ್ಲಿ ಹಲವು ದಿನಗಳಿಂದ ಬೇಡಿಕೆಯನ್ನು ಈಡೇರಿಸಿದ್ದಾರೆ
ಶೀಘ್ರದಲ್ಲೇ ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭವಾಗಲಿದ್ದು ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವ ಘೋಷಣೆಯನ್ನು ಮಾಡಿದ್ದಾರೆ.12 ಜಿಲ್ಲೆಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಈ ಪೊಲೀಸ್ ಠಾಣೆಗಳು ನಿರ್ಮಾಣವಾಗಲಿವೆ.
1 ದಕ್ಷಿಣ ಕನ್ನಡ ಮಾಣಿ ಪೊಲೀಸ್ ಠಾಣೆ
2 ದಕ್ಷಿಣ ಕನ್ನಡ ಸಜಿಪನಡು ಪೊಲೀಸ್ ಠಾಣೆ
3 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ
4 ಬೆಳಗಾವಿ ಯರಗಟ್ಟಿ ಪೊಲೀಸ್ ಠಾಣೆ
5 ಯಾದಗಿರಿ ಕಕ್ಕೇರಾ ಪೊಲೀಸ್ ಠಾಣೆ
6 ಚಿತ್ರದುರ್ಗ ಹಿರಿಯೂರು ಸಂಚಾರ ಪೊಲೀಸ್ ಠಾಣೆ
7 ದಾವಣಗೆರೆ ಆನಗೋಡು ಪೊಲೀಸ್ ಠಾಣೆ
8 ಹಾವೇರಿ ತಿಳುವಳ್ಳಿ ಪೊಲೀಸ್ ಠಾಣೆ
9 ಮೈಸೂರು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
10 ವಿಜಯಪುರ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ
11 ಕೋಲಾರ ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ
12 ಚಾಮರಾಜನಗರ ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



