ಬೆಂಗಳೂರು –
ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ಘೋಷಣೆ ಮಾಡಿ ದ್ದಾರೆ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತ್ರತ್ವದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೊರೈಸಿದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಎರಡು ವರ್ಷಗಳ ವಿಶೇಷ ಸಾಧನಾ ಸಮಾವೇಶ ವನ್ನು ಹಮ್ಮಿಕೊಳ್ಳಲಾಗಿತ್ತು.

ವಿಧಾನ ಸೌಧ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಒಂದು ವಿಶೇಷವಾದ ಕಾರ್ಯಕ್ರಮಕ್ಕೆ ಚಾಲನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದರು..ಈ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ಆರಂಭದಿಂದ ನಡೆದು ಕೊಂಡು ಬಂದ ಹೋರಾಟವನ್ನು ಪಕ್ಷವನ್ನು ಕಟ್ಟಿದ ವಿಚಾರವನ್ನು ಹೀಗೆ ಎಲ್ಲವನ್ನೂ ನೆನಪು ಮಾಡಿಕೊ ಳ್ಳುತ್ತಾ ನನಗೆ ವಯಸ್ಸಾಗಿದ್ದರೂ ಕೂಡಾ ನನಗೆ ಮುಖ್ಯಮಂತ್ರಿಯಾಗಲು ಅನುಕೂಲ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರಿಗೂ ತುಂಬಾ ಧನ್ಯವಾದಗಳು ಎನ್ನುತ್ತಾ ನಾನು ಮುಖ್ಯ ಮಂತ್ರಿ ಆದಾಗೆಲ್ಲ ನನಗೆ ಅಗ್ನಿ ಪರೀಕ್ಷೆಗಳು ಕಾಡುತ್ತಿವೆ ಎನ್ನುತ್ತಾ ಕೊನೆಯದಾಗಿ ಕಣ್ಣೀರು ಹಾಕುತ್ತಾ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲು ನಿರ್ಧರಿಸಿದ್ದೇನೆ. ನಿಮ್ಮೇಲ್ಲರ ಅನುಮತಿಯನ್ನು ಪಡೆದುಕೊಂಡು ಊಟದ ನಂತರ ನಾವೆಲ್ಲರೂ ಸೇರಿಕೊಂಡು ರಾಜಭವನಕ್ಕೆ ಹೋಗಿ ರಾಜ್ಯಪಾಲರ ಬಳಿ ಹೋಗಿ ರಾಜಿನಾಮೆಯನ್ನು ಕೊಡಲಿದ್ದೇನೆ ಎಲ್ಲರೂ ಸೇರಿಕೊಂಡು ಕೆಲಸವನ್ನು ಮಾಡೊಣ ಎಂದು ಹೇಳುತ್ತಾ ಮುಖ್ಯಮಂತ್ರಿ ಯಡಿಯೂರಪ್ಪ ಮಾತನ್ನು ಮುಗಿಸಿದರು.