ಬೆಂಗಳೂರು –
ರಾಜ್ಯದ ಶಿಕ್ಷಕರ ಧ್ವನಿಯಾಗಿ ಶಿಕ್ಷಕರ ಸಂಘಟನೆ ಮತ್ತು ಅದಕ್ಕೆ ನಾಯಕರು ಇದ್ದಾರೆ ಒಂದೊಂದು ಸಂಘಟನೆ ಒಂದೊಂದು ನಾಯಕರು ಇದ್ದಿದ್ದು ಇನ್ನೂ ಕಳೆದ ಕೆಲ ದಿನಗಳಿಂದ ವರ್ಗಾವಣೆ ಸೇರಿದಂತೆ ಹಲವಾರು ವಿಚಾರ ದಲ್ಲಿ ನಾಡಿನ ಶಿಕ್ಷಕರಿಗೆ ಮೇಲಿಂದ ಮೇಲೆ ಅನ್ಯಾಯ ಆಗುತ್ತಿದ್ದು ಹೀಗಾಗಿ ಶಿಕ್ಷಕರು ಕೆಲವೊಂದಿಷ್ಟು ಪ್ರಶ್ನೆ ಗಳನ್ನು ಕೇಳಿದ್ದಾರೆ
ರಾಜ್ಯ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ಸೋಜಿಗದ ವಿಷಯ?
?ರಾಜ್ಯದ ಹಿಂಬಡ್ತಿ ಅನ್ಯಾಯಕ್ಕೋಳಗಾದ ಎಲ್ಲಾ ಶಿಕ್ಷಕರು ದಿನಾನೂ ಗೋಳಿಡುವದು ರಾಜ್ಯದ ಎರಡೂ ಸಂಘಟನೆಯ ನಾಯಕರಿಗೆ ಕೇಳಿಸುತ್ತಿಲ್ಲವೆ
?ಸ್ವಾಮಿ ನಿಮ್ಮ ನಿಮ್ಮ ಪ್ರತಿಷ್ಠೆಗೋಸ್ಕರ ಶಿಕ್ಷಕರನ್ನು ಬಲಿಪಶುಮಾಡಬೇಡಿ.2006ರಲ್ಲಿ NPS ಜಾರಿ ಆಗಿದೆ. 2016 ರಲ್ಲಿ C&R ಜಾರಿ ಮಾಡಿ ಎಲ್ಲರನ್ನು ಹಿಂಬಡ್ತಿ ಕೊಡಿಸಿದ್ದಾರೆ.
?ಅಲ್ಲಿಂದ ಇಲ್ಲಿಯವರೆಗೂ ಕೇವಲ ಮನವಿ ಕೊಡು ವದರ ಮುಖಾಂತರ ಶಿಕ್ಷಕರನ್ನು ನಂಬಿಸುತ್ತಾ ಬಂದಿದ್ದೀರಿ. ಇನ್ನಾದರೂ ಎಲ್ಲಾ ಬಿಟ್ಟು ಹೋರಾಟ ಕೈಗೊಳ್ಳುವ ಮಾತು ಎರಡೂ ಸಂಘಟನೆ ನಾಯಕರಿಂದ ಬರುತ್ತಿಲ್ಲ ಅಂದ್ರೆ ಏನು ಇದರರ್ಥ?.
?ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಾದರೂ C&R ನಿಯಮ ತಿದ್ದುಪಡಿ ಮಾಡಿ PST ಶಿಕ್ಷಕರಿಗೆ ನ್ಯಾಯ ಒದಗಿಸುತ್ತಿರಿ ಅಂದ್ರೆ 15000 GPT ನೇಮಕಾತಿಗೆ ತಯಾರಿ ನಡೆದಿದೆ.
?ಹಾಗಾದರೆ ಬೆಂಗಳೂರಿನಲ್ಲಿ ಶಿಕ್ಷಕರ ಸಮಸ್ಯೆಯ ಕುರಿತು ಕರೆದ ಸಭೆಯಲ್ಲಿ ತಾವು ಹೇಳಿದ ಹಾಗೆ 21 ದಿನದ ಗಡುವು ಮುಗಿದು ಹೋಗಿದೆ. ನೀವು ಯಾಕೆ ಹೋರಾಟಕ್ಕೆ ಕರೆ ಕೊಡಬಾರದು ಅಂತ ಹೇಳಿ?.