ಲಿಂಗಸುಗೂರು –
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾ ಧಿಕಾರಿಗೆ ಮನವಿ ಸಲ್ಲಿಸಿದರು.ಶೈಕ್ಷಣಿಕ ಅದಾಲತ್‌ನಲ್ಲಿ ಬಾಕಿ ಉಳಿದ ಶಿಕ್ಷಕರ ಕಾರ್ಯ ಪೂರ್ಣಗೊಳಿಸಬೇಕು ಶಿಕ್ಷಕರು ಕಾಲಮಿತಿಯ ಬಡ್ತಿಗಾಗಿ ಕೊಡುವ ಅರ್ಜಿ ಪರಿಗಣಿಸಿ ಉಪ ನಿರ್ದೇಶಕರ ಆದೇಶ ಸಿಆರ್ ಫಾರಂ ಇಲ್ಲದೆ ಮಂಜೂರು ಮಾಡಬೇಕು.ಶಿಶು ಪಾಲನೆ,ಗಳಿಕೆ, ವೈದ್ಯಕೀಯ ರಜೆ ಪಡೆಯಲು ಬರುವ ಶಿಕ್ಷಕರಿಗೆ ಬಿಇಒ ಇಲ್ಲದ ಸಂದರ್ಭದಲ್ಲಿ ಸ್ಥಾನಿಕ ಅಧಿಕಾರಿಗಳು ಮಂಜೂ ರಾತಿ ನೀಡಬೇಕು. ಶಿಕ್ಷಕರ ಬಾಕಿ ಇರುವ ಮೆಡಿಕಲ್ ಬಿಲ್ ಪಾವತಿಸಬೇಕು.ಕೋವಿಡ್ ಹಾಗೂ ಇತರೆ ಕಾರಣಗಳಿಂದ ಮರಣ ಹೊಂದಿರುವ ಶಿಕ್ಷಕರಿಗೆ ಇಲಾಖೆಯಿಂದ ದೊರೆ ಯಬೇಕಾದ ಸೌಲಭ್ಯಗಳು ಆ ಕುಟುಂಬಗಳಿಗೆ ಒದಗಿ ಸಬೇಕು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸಂಗಯ್ಯ ಗಣಚಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ನಾಯಕ,ಜಗದೀಶ ಸೇರಿದಂತೆ ಇತರರಿ ದ್ದರು.