ದಾಸರಹಳ್ಳಿ –
ಸುಂದರ್ ಲಾಲ್ ಬಹುಗುಣ ಅವರ ಅಪ್ಪಿಕೊ ಚಳುವಳಿ ರಾಜ್ಯದಲ್ಲಿ ಮತ್ತೊಮ್ಮೆ ಕಂಡು ಬಂದಿದೆ. ಹೌದು ಅದು ಶಾಲಾ ವಿದ್ಯಾರ್ಥಿಗಳ ಮೂಲಕ. ಬೆಂಗಳೂರಿನ ಅಬ್ಬಿಗೆರೆಯಿಂದ ಚಿಕ್ಕಬಾಣಾವರ ನಡುವಿನ ಮುಖ್ಯ ರಸ್ತೆ ವಿಸ್ತರಣೆಗಾಗಿ ಮರಗಳನ್ನು ಕಡಿಯಲಾಗುತ್ತಿದೆ.ಇದನ್ನು ವಿರೋಧಿಸಿ ಹಾಗೇ ಕಡಿಯಬಾರದು ಎಂದು ಅಬ್ಬಿಗೆರೆ ಶಾಲಾ ವಿದ್ಯಾರ್ಥಿ ಗಳು ಮರಗಳನ್ನು ತಬ್ಬಿಕೊಳ್ಳುವ ಮೂಲಕ (ಅಪ್ಪಿಕೊ ಚಳವಳಿ) ಪ್ರತಿಭಟನೆ ನಡೆಸಿದರು.
ಹೌದು ಬಿಬಿಎಂಪಿಯ ಶೆಟ್ಟಿಹಳ್ಳಿ ವಾರ್ಡ್‌ನ ವ್ಯಾಪ್ತಿ ಯಲ್ಲಿರುವ ಅಬ್ಬಿಗೆರೆ ಸರ್ಕಾರಿ ಶಾಲೆಯ ಆವರಣ ದಲ್ಲಿನ ಮರಗಳನ್ನು ಕಡಿಯಲು ಬಿಬಿಎಂಪಿ ಸಿಬ್ಬಂದಿ ಮುಂದಾದಾಗ ಮರಗಳನ್ನು ಅಪ್ಪಿಕೊಂಡ ವಿದ್ಯಾರ್ಥಿಗಳು ಅವುಗಳನ್ನು ಕಡಿಯದಂತೆ ತಡೆದರು.
ಶಾಲಾ ಮಕ್ಕಳಿಗಾಗಿ ಮೀಸಲಿಟ್ಟಿರುವ ಮೈದಾನ ವನ್ನು ಯಾವುದೇ ಕಾರಣಕ್ಕೂ ರಸ್ತೆ ಅಭಿವೃದ್ಧಿಗೆ ಬಳಸಬಾರದು ಎಂದು ಒತ್ತಾಯಿಸಿದರು.ಶಾಲೆ ಆವರಣದಲ್ಲಿ ನೂರಾರು ಮರಗಳಿವೆ.ನಮ್ಮ ಹಿರಿಯ ವಿದ್ಯಾರ್ಥಿಗಳು ಮೈಲು ದೂರದಿಂದ ನೀರು ಹೊತ್ತು ತಂದು ಇವುಗಳನ್ನು ಬೆಳೆಸಿದ್ದಾರೆ.ಈಗ ರಸ್ತೆ ವಿಸ್ತರಣೆಗಾಗಿ ಅವುಗಳನ್ನು ಕಡಿಯದಂತೆ ಅಧಿಕಾರಿ ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಬೇಕು ಎಂದು ವಿದ್ಯಾರ್ಥಿ ಗಳು ಮನವಿ ಮಾಡಿದರು ಇದರೊಂದಿಗೆ ಸುಂದರ್ ಲಾಲ್ ಬಹುಗುಣ ಅವರ ಹೋರಾಟವನ್ನು ನೆನಪಿ ಸಿದರು.
ಇನ್ನೂ ಪ್ರಮುಖವಾಗಿ ಶಾಲಾ ಆವರಣದಲ್ಲಿರುವ ಮರಗಳನ್ನು ತೆರವುಗೊಳಿಸುವ ಕುರಿತು ಶಿಕ್ಷಣ ಇಲಾಖೆಯಾಗಲಿ ಅಥವಾ ಅರಣ್ಯ ಇಲಾಖೆ ಯಾಗಲಿ ಯಾವುದೇ ಸೂಚನೆ ಅಥವಾ ನೋಟಿಸ್ ನೀಡಿಲ್ಲ ಎಂದು ಶಿಕ್ಷಕರು ತಿಳಿಸಿದರು.ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನೆ ನೀಡಲಿಲ್ಲ ಎಂದು ಅಸಮ ಧಾನ ವ್ಯಕ್ತಪಡಿಸಿದರು.