ಬಾಗಲಕೋಟೆ –
ಕಾಳಿನ ವ್ಯಾಪಾರಿಗೆ ಅಡ್ಡಗಟ್ಟಿ ಹಣ ವಸೂಲಿಗೆ ಇಳಿದಿದ್ದ ಮೂವರು ಪತ್ರಕರ್ತರನ್ನು ಬಂಧನ ಮಾಡಿದ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ. ಹಣಕ್ಕೆ ಬೇಡಿಕೆಯಿಟ್ಟ ಪತ್ರಕರ್ತರನ್ನು ಸೆರೆ ಹಿಡಿದ ಮುಧೋಳ ಪೊಲೀಸರು ಬಂಧನ ಮಾಡಿ ನಂತರ ಜೈಲಿಗೆ ಕಳಿಸಿದ್ದಾರೆ.ಅಮರ್ ಅಪ್ಪಾಸಾಹೇಬ್ ಸನದಿ, ಜಾನ್ಸನ್ ಕುಮಾರ್ ಮಾರುತಿ ಕರಿಯಪ್ಪ ಗೋಳ ಹಾಗೂ ಚೇತನ ದಾವನೆ ಬಂಧಿತರಾಗಿದ್ದಾರೆ

ಮೂವರು ಪಕ್ಕದ ಬೆಳಗಾವಿ ಜಿಲ್ಲೆಯ ಮೂಲದವ್ರು ಜುಲೈ ೮ ರಂದು ಹಸೀನಾ ಎನ್ನುವರು ಮುಧೋಳ ಸಂತೆಯಲ್ಲಿ ಗೋಧಿ,ಜೋಳ ಮಾರಿ ಹಿಂದಿರುಗು ತ್ತಿದ್ರು.ಎರ್ಟಿಗಾ ಕಾರಿನಲ್ಲಿ ಬಂದ ಮೂವರು ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ರು.ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರನ್ನು ನೀಡಿದ್ದರು. ಮಹಿಳೆ ಯರ ದೂರಿನನ್ವಯ ಮೂವರನ್ನು ಬಂಧಿಸಿದ್ದಾರೆ ಮುಧೋಳ ಪೊಲೀಸರು.ಸಧ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಮೂವರು ಜೈಲಿನಲ್ಲಿದ್ದಾರೆ.





















