ಬೆಂಗಳೂರು –

ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ ಶಿಕ್ಷಕರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಹೀಗಾಗಿ ಈ ಒಂದು ವಿಚಾರ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಶಿಕ್ಷಣ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದ್ದಾರೆ.ಸಂಘದ ನಿರಂತರ ಪ್ರಯತ್ನದಿಂದಾಗಿ ಲಾಕ್ ಡೌನ್ ಇರುವ 11 ಜಿಲ್ಲೆಗಳ ಶಿಕ್ಷಕರಿಗೆ ಮನೆ ಯಿಂದಲೇ ಕೆಲಸ ಮಾಡುವ ಆದೇಶ ನೀಡಿದ್ದಕ್ಕಾಗಿ ಹಾಗೇ ಲಾಕ್ ಡೌನ್ ನಲ್ಲಿ ಸಿಲುಕಿಕೊಂಡ ಶಿಕ್ಷಕರಿಗೆ ಒಂದು ವಾರ ಅವಕಾಶ ನೀಡಿದ್ದಾರೆ ಇದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು.

ಸಂಘದ ಮನವಿಗೆ ಸ್ಪಂದಿಸಿದ ಅವರಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಹೇಳಿದ್ದಾರೆ.ಇದು ಸ್ವಾಗತ ಸರ್ ಆದರೆ ಇದನ್ನು ಸರ್ವೆ ಸಾಮಾನ್ಯವಾಗಿ ಎಲ್ಲರೂ ನಿರೀಕ್ಷೆ ಮಾಡಿದ್ದರು ಆದರೆ ಹನ್ನೊಂದು ಜಿಲ್ಲೆಗಳ ಶಿಕ್ಷಕರ ಪರಸ್ಥಿತಿ ಇದಾದರೆ ಇನ್ನೂ ಉಳಿದ ರಾಜ್ಯದ ಶಿಕ್ಷಕರ ಪರವಾಗಿ ನಿಮ್ಮ ಧ್ವನಿ ಎನು ಸಾರ್ ಉಳಿದ ಶಿಕ್ಷಕರು ನಿಮ್ಮದ ಸಂಘದ ಸದಸ್ಯರು ಅಲ್ವಾ ಇದನ್ನು ನೀವು ಗಂಭೀರವಾಗಿ ತಗೆದು ಕೊಂಡು ಧ್ವನಿ ಎತ್ತಬೇಕಾಗಿತ್ತು ಆದರೆ ಇದೇ ಒಂದು ವಿಚಾರವನ್ನು ಮುಂದಿಟ್ಟುಕೊಂಡು ನೀವು ಇದೇ ಸಂಘದ ದೊಡ್ಡ ಸಾಧನೆ ಎಂದುಕೊಂಡು ಶಿಕ್ಷಣ ಸಚಿವರಿಗೆ ಸಂಘದ ಪರವಾಗಿ ಧನ್ಯವಾದಗಳನ್ನು ಹೇಳಿದ್ದು ಸರಿನಾ ಇದನ್ನು ನಿಮ್ಮ ಸಂಘದ ಶಿಕ್ಷಕರೇ ಕೇಳತಾ ಇದ್ದಾರೆ. ಒಮ್ಮೇ ನಿಮ್ಮನ್ನು ನೀವು ಶಿಕ್ಷಕರು ಹೇಳುವ ಮುಂಚೆ ವಿಚಾರ ಮಾಡಿಕೊಳ್ಳಿ ಆತ್ಮಾವ ಲೋಕನ ಮಾಡಿಕೊಳ್ಳಿ ಒಂದು ಶಿಕ್ಷಕರ ಸಂಘಟನೆ ಅಂದರೆ ಸಂಘಟನೆಯ ಸದಸ್ಯರಾಗಿರುವ ಸರ್ವ ಶಿಕ್ಷಕರ ಪರವಾಗಿ ನಿಮ್ಮ ಧ್ವನಿ ಇರಬೇಕೆ ಹೊರತು ಅರ್ಧ ಶಿಕ್ಷಕರ ಪರವಾಗಿ ಇಲ್ಲವೇ ಮತ್ತೊಂದು ಗುಂಪಿನ ಪರವಾಗಿ ಇರಬಾರದು.ಚುನಾವಣೆಯ ಸಮಯದಲ್ಲಿ ನಿವೇ ನಮ್ಮ ನಾಯಕರು ಎಂದು ಕೊಂಡು ಹೆಮ್ಮೆಯಿಂದ ಓಡಾಡಿಕೊಂಡು ನಮ್ಮವ ರು ಎಂದುಕೊಂಡು ಅವರಿವರಿಗೆ ಹೇಳಿಕೊಂಡು ನಿಮಗೆ ಮತ ಹಾಕಿ ಆಯ್ಕೆ ಮಾಡಿರುತ್ತಾರೆ ರಾಜ್ಯ ಸಂಘಟನೆಯ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಯನ್ನಾಗಿ ಮಾಡುತ್ತಾರೆ ಹೀಗಿರುವಾಗ ನೀವು ಕೆಲ ವೊಂದಿಷ್ಟು ಶಿಕ್ಷಕರ ಪರವಾಗಿ ಧ್ವನಿ ಎತ್ತಿದರೆ ಹೇಗೆ ಸರಿನಾ.ಇನ್ನೂ ಪ್ರಮುಖವಾಗಿ ಇನ್ನೂಳಿದ ಜಿಲ್ಲೆಗ ಳಲ್ಲಿ ನಾಳೆಯಿಂದ ಶಾಲೆಗಳಿಗೆ ಶಿಕ್ಷಕರು ಹೋಗಬೇ ಕು ಅದರಲ್ಲೂ ಮಹಿಳಾ ಶಿಕ್ಷಕರು ಹೇಗೆ ಶಾಲೆಗಳಿಗೆ ಹೋಗಬೇಕು ಒಮ್ಮೆ ಹೇಳಿ ಏನಾದರೂ ಅನುಕೂಲ ಮಾಡಿದ್ದಿರಾ ನೂರಾರು ಕಿಲೋ ಮೀಟರ್ ಗಳ ಪ್ರಯಾಣ ಹೇಗೆ ಮಾಡಬೇಕು ಇನ್ನೂ ಇವರು ಕೂಡಾ ಸಂಘಕ್ಕೆ ಸದಸ್ಯತ್ವ ಹಣವನ್ನು ಕೊಟ್ಟಿದ್ದಾರೆ ಈ ಒಂದು ವಿಚಾರದಲ್ಲಿ ಅವರಿಗೆ ಸಧ್ಯದ ಪರಸ್ಥಿತಿ ಯಲ್ಲಿ ಏನು ಧ್ವನಿ ಎತ್ತಿದ್ದಿರಿ ಇದೇಲ್ಲವನ್ನು ಒಮ್ಮೆ ವಿಚಾರ ಮಾಡಿ ಸಾರ್ ಹನ್ನೊಂದು ಜಿಲ್ಲೆಗಳ ಶಿಕ್ಷಕರ ಪರವಾಗಿ ಯಾವುದೇ ಒಂದು ಸಂದೇಶ ಬಂದಿದೆ ಅಂದುಕೊಂಡು ಸಂಘಟನೆಯಿಂದ ದೊಡ್ಡದಾಗಿ ಧನ್ಯವಾದಗಳನ್ನು ಹೇಳಿದರೆ ಇದನ್ನು ನೋಡಿದ ಸಂಘಟನೆಯ ಉಳಿದ ಶಿಕ್ಷಕರಿಗೆ ನೋವಾಗೊದಿ ಲ್ಲವೇ ಒಮ್ಮೇ ವಿಚಾರ ಮಾಡಿ ನೋಡಿ ಇದು ರಾಜ್ಯದ ಶಿಕ್ಷಕರ ಪರವಾಗಿ ನೋವಿನ ಸಂದೇಶ ಈಗಲಾದರೂ ಮತ್ತೊಂದು ಆದೇಶ ಮಾಡಿಸಿ ಬಸ್ ಇಲ್ಲದೇ ಮಳೆಯ ನಡುವೆ ಶಾಲೆಗಳಿಗೆ ಹೋಗಲು ಪರದಾಡುತ್ತಿರುವ ಶಿಕ್ಷಕರಿಗೆ ನೆಮ್ಮದಿಯ ಸುದ್ದಿ ನೀಡಿ ಆ ಒಂದು ನಿರೀಕ್ಷೆಯಲ್ಲಿ ಶಿಕ್ಷಕರಿದ್ದಾರೆ.