This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಯವಲೋಕಕ್ಕೇ ಕೈಬಿಸಿ ಕರೆಯುತ್ತಿವೆ ಮ್ಯಾನ್ ಹೋಲ್ – ತೆಗ್ಗು ದಿಬ್ಬಗಳು – ಅಧಿಕಾರಿಗಳಿಗೆ ಕಾಣುತ್ತಿಲ್ಲ

WhatsApp Group Join Now
Telegram Group Join Now

ಹುಬ್ಬಳ್ಳಿ ಧಾರವಾಡ –

ತ್ವರಿತವಾಗಿ ಸಂಚರಿಸಲು ತ್ವರಿತ ಸುಗಮ ಸಂಚಾರದ ಉದ್ದೇಶವನ್ನಿಟ್ಟುಕೊಂಡು ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಬಿಆರ್ ಟಿಎಸ್ ರಸ್ತೆಯನ್ನು ಮಾಡಿದ್ದಾರೆ. ಕೋಟ್ ಕೋಟಿ ರೂಪಾಯಿ ಖರ್ಚು ಮಾಡಿ ಯಾವುದೇ ಮುಂದಾಲೋಚನೆ ಇಲ್ಲದೇ ಯೋಜನೆ ಇಲ್ಲದೇ ಬೇಕಾ ಬಿಟ್ಟಿಯಾಗಿ ರಸ್ತೆಯನ್ನು ಮಾಡಿದ್ದಾರೆ. ಹೆಸರಿಗೆ ಮಾತ್ರ ಅವಳಿ ನಗರದ ಮಧ್ಯೆದ ರಸ್ತೆಯಾಗಿದ್ದು ಈಗಾಗಲೇ ಈ ಒಂದು ರಸ್ತೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಬಲಿಯಾಗಿದ್ದಾರೆ. ಇದಕ್ಕೇ ಅವೈಜ್ಞಾನಿಕ ಕಾಮಗಾರಿ. ಇದು ಒಂದೆಡೆಯಾದ್ರೆ ಇದಕ್ಕೇ ಮತ್ತೊಂದು ಸಾಕ್ಷಿ ರಸ್ತೆ ಮಧ್ಯೆದಲ್ಲಿ ಯಮಲೋಕಕ್ಕೇ ಕೈಬಿಸಿ ಕರೆಯುತ್ತಿವೆ ಎಂಬಂತೆ ಕಂಡು ಬರುತ್ತಿರುವ ಮ್ಯಾನ್ ಹೋಲ್ ಗಳು.

ಅವಳಿ ನಗರದ ರಸ್ತೆ ಮಧ್ಯೆದಲ್ಲಿ ಮತ್ತು ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿಗಳಿಗೆ ಮ್ಯಾನ್ ಹೋಲ್ ಗಳಿವೆ. ಸಾಮಾನ್ಯವಾಗಿ ಈ ಮ್ಯಾನ್ ಹೋಲ್ ಗಳನ್ನು ಯಾರಿಗೂ ಯಾವುದೇ ತೊಂದರೆಯಾಗದಂತೆ ರಸ್ತೆ ಪಕ್ಕದಲ್ಲಿ ಮಾಡಬೇಕು. ಆದರೆ ಹುಬ್ಬಳ್ಳಿ ಧಾರವಾಡದಲ್ಲಿ ಅಳವಡಿಸಿದ್ದನ್ನು ನೋಡಿದ್ರೆ ಭಯವಾಗುತ್ತಿದೆ.

ಒಮ್ಮೇ ನೋಡಿ ಮುಚ್ಚಳಗಳು ಹೀಗೆ ‘ಪ್ರಾಣ ಇಂಗುವ ಗುಂಡಿ’ಗಳಾಗಿವೆ! ರಸ್ತೆಯ ಮಧ್ಯೆ ಮತ್ತು ಪಕ್ಕದಲ್ಲಿ ಒಂದರಿಂದ ಒಂದೂವರೆ ಅಡಿ ಆಳಕ್ಕೆ ಬಹುತೇಕ ಮುಚ್ಚಳಗಳನ್ನು ಅಳವಡಿಸಿದ್ದರೆ, ಹಲವೆಡೆ ಅಷ್ಟೇ ಅಡಿ ಎತ್ತರದಲ್ಲಿ ಮತ್ತಷ್ಟು ಮುಚ್ಚಳಗಳನ್ನು ಅಳವಡಿಸಲಾಗಿದೆ.ಸಾರ್ವಜನಿಕರ ಸುರಕ್ಷೆಯ ಯಾವ ಲೆಕ್ಕವೂ ಇಲ್ಲದೇ ಬೇಕಾ ಬಿಟ್ಟಿಯಾದ ಕಾಮಗಾರಿಗೆ ಜೀವಂತ ಜ್ವಲಂತ ಮಾದರಿ ಇದಾಗಿದೆ.ಅವಳಿ ನಗರದ ಮಧ್ಯೆದ ಬಿಆರ್ ಟಿಎಸ್ ರಸ್ತೆಯಲ್ಲಿ ಇಲ್ಲವೇ ಇನ್ನಿತರ ರಸ್ತೆಯಲ್ಲಿ ಅಪ್ಪಿ ತಪ್ಪಿ ನೋಡಲಾರದೇ ನಾವೇನಾದರೂ ಹೋಗುತ್ತಿದ್ದರೆ ಈ ಮ್ಯಾನ್ ಹೋಲ್ ಗಳು ನಮ್ಮನ್ನು ಬಲಿ ತಗೆದುಕೊಳ್ಳುತ್ತವೆ. ತೆಗ್ಗು ಮಾಡಿದ್ದಾರೆ ಇಲ್ಲವೇ ಒಂದು ಅಡಿಯಷ್ಟು ಎತ್ತರದಲ್ಲಿ ಮುಚ್ಚಳ ಅಳವಡಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರು ಮಗುಚಿ ಬೀಳಬಹುದು.ಇಲ್ಲವೇ ಕಾರುಗಳು ಬೇರೆ ವಾಹನಗಳು ಸಹಿತ ಇದಕ್ಕೇ ಸಿಲುಕಿಕೊಂಡು ಅಪಘಾತಗಳಾಗುವ ಅವಕಾಶವಿರುತ್ತದೆ. ನೋಡಲಾರದೇ ನಾವೇನಾದರೂ ಅಪ್ಪಿತಪ್ಪಿ ಎತ್ತರದ ಮ್ಯಾನ್ ಹೋಲ್ ಗೆ ಹಾಯಿಸಿದರೆ ಇಲ್ಲವೇ ತೆಗ್ಗಿಗೆ ಬಿದ್ದರೇ ನಮ್ಮ ಬೆಲೆ ಬಾಳುವ ವಾಹನಗಳ ಟೈಯರ್ ಗಳಾಗಲಿ ಇಲ್ಲವೇ ಬೇರೆ ಯಾವುದಾದರೊಂದು ಅನಾಹುತವಾಗೊದು ಗ್ಯಾರಂಟಿ. ಬೆನ್ನು ಮೂಳೆಗೆ ಏಟಾಗಿ, ಮಲಗಲೂ ಆಗದೇ ಒದ್ದಾಡಿದ್ದಕ್ಕೆ.. ಯಾರು ಹೊಣೆ..‌ ಬೇಕಾ ಬಿಟ್ಟಿಯಾಗಿ ಹೀಗೆ ಕಾಮಗಾರಿ ಮಾಡಿ ಹೀಗೆಯೆ ಮುಗಿಸುವ ಗುತ್ತಿಗೆದಾರ ಅದನ್ನು ಪರಿಶೀಲನೆ ಮಾಡದೇ ಪಾಸ್ ಮಾಡುವ ‘ಲೋಕೋಪಯೋಗಿ’ ಇಂಜಿನಿಯರ್ ಇಂಥಹ ವ್ಯವಸ್ಥೆಯ ನಡುವೆ ಗುತ್ತಿಗೆದಾರ ಮಾಡಿದ್ದೇ ಆಟ ನೋಡಿದ್ದೇ ನೋಟ ಇವೆರಡರ ನಡುವೆ ಭಯದಿಂದ ರಸ್ತೆಯಲ್ಲಿ ಜೀವವನ್ನು ಕೈಯಲ್ಲಿಟ್ಟುಕೊಂಡು ಪ್ರಯಾಣಿಸುವ ಸಾರ್ವಜನಿಕರ ಪರದಾಟ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ.

ಇನ್ನೂ ಈ ಒಂದು ಎಡವಟ್ಟು ಕಾಮಗಾರಿ ವಿರುದ್ದ ಹಿರಿಯ ಪತ್ರಕರ್ತ ಉಪನ್ಯಾಸಕರ ಹರ್ಷವರ್ಧನ ಶೀಲವಂತರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಪೊಟೊ ದೊಂದಿಗೆ ಅವಳಿ ನಗರದಲ್ಲಿನ ಅವೈಜ್ಞಾನಿಕವಾದ ಸಾವೀನ ಮ್ಯಾನ್ ಹೋಲ್ ಚಿತ್ರಣವನ್ನು ಬರೆದಿದ್ದಾರೆ. ಧಾರವಾಡದಲ್ಲಿ ಬಹುತೇಕ ಕಡೆ ಒಳಚರಂಡಿಗಳ ಮ್ಯಾನ್ ಹೋಲ್ ಗೆ ಅಳವಡಿಸಿದ ಮುಚ್ಚಳಗಳು ಹೀಗೆ ‘ಪ್ರಾಣ ಇಂಗಿಸುವ ಗುಂಡಿ’ಗಳಾಗಿವೆ! ಸರ್ಕಾರ ಇದಕ್ಕಾಗಿ ವ್ಯಯಿಸುವ ತುಂಡು ಗುತ್ತಿಗೆ ಬಾಬತ್ತು?! ನನ್ನಂತಹ ಶ್ರೀ ಸಾಮಾನ್ಯ ತೆರುವ ಕರ ಬೆಲೆ?! ಏನಿದು? ಎಂದು ಪ್ರಶ್ನಿಸಿದ್ದಾರೆ.ಶಾಸ್ತ್ರೀಯವಾಗಿ ಓದಿ ಬಂದವನಿಗೆ ಇಷ್ಟೂ ಕಾಣದೇ? ಸಾಮಾನ್ಯ ಜ್ಞಾನವಿರುವ ಜನತಾ ಜನಾರ್ದನನಿಗೆ ಕಂಡಷ್ಟೂ ಈ ಎರಡು ಪ್ರಾತಿನಿಧಿಕ ಮುಚ್ಚಳ ಇಲ್ಲಿ ಲಗತ್ತಿಸಿರುವೆ.ಹಲವೆಡೆ ಮುಚ್ಚಳ ಮುರಿದು ಹೋಗಿ, ತೆಂಗಿನ ಗರಿ, ನಾಲ್ಕು ಕಲ್ಲು ಜೋಡಿಸಿಟ್ಟು ತಿಂಗಳುಗಳೇ ಉರುಳಿವೆ ಎಂದಿದ್ದಾರೆ.


ಇಂತಹ ಜೀವ ಇಂಗುವ ಗುಂಡಿ, ಹಂಪ್ ಗಳ ಕುರಿತು ಇನ್ನಾದರೂ ಅಧಿಕಾರಿಗಳು ಎಚ್ಚೇತ್ತುಕೊಳ್ಳಬೇಕಿದೆ ಏಕೆಂದರೆ ಅವರ ಕುಟುಂಬಗಳಿಗೆ ಆ ಜೀವಗಳು ಅಮೂಲ್ಯ.ಒಟ್ಟಾರೆ ಹುಬ್ಬಳ್ಳಿ ಧಾರವಾಡ ಮಧ್ಯದ ಬಿಆರ್ ಟಿಎಸ್ ರಸ್ತೆಯಲ್ಲಿನ ಮತ್ತು ಇನ್ನಿತರ ರಸ್ತೆಯಲ್ಲಿ ಮಧ್ಯದಲ್ಲಿರುವ ಹಂಪ್ ಗಳ ಬಗ್ಗೆ ಸಾರ್ವಜನಿಕರೇ ಸ್ವಲ್ಪು ಎಚ್ಚರವಿರಲಿ ,


Google News

 

 

WhatsApp Group Join Now
Telegram Group Join Now
Suddi Sante Desk