ಧಾರವಾಡ –
ಸಾಕ್ಷ್ಯ ನಾಶ ಪ್ರಕರಣದಲ್ಲೂ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿದೆ. ಹೌದು ಇಂದು ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ ಆದರೂ ಕೂಡಾ ಬಿಡುಗಡೆ ಭಾಗ್ಯ ಇನ್ನೂ ಸಿಕ್ಕಿಲ್ಲ ಜಿಲ್ಲಾ ಪಂಚಾಯತ ಸದಸ್ಯ ಯೊಗೀಶಗೌಡ ಕೊಲೆ ಪ್ರಕರಣದ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜಾಮೀನು ದೊರೆತಿದ್ದು ಈ ಒಂದು ಪ್ರತಿ ಬಾರದ ಹಿನ್ನೆಲೆಯಲ್ಲಿ ಇಂದು ಕೂಡಾ ಜೈಲಿನಿಂದ ಬಂಧನದ ಮುಕ್ತಿ ಸಿಗಲಿಲ್ಲ

ಕಳೆದ ಒಂದು ವಾರದ ಹಿಂದಷ್ಟೇ 302 ಕೊಲೆ ಪ್ರಕರಣ ಕೆಸ್ ನಲ್ಲಿ ಜಾಮೀನು ದೊರಕಿತ್ತು.ಈಗ ಮತ್ತೊಂದು ಪ್ರಕರಣದಲ್ಲಿ ಕೂಡಾ ಇಂದು ಜಾಮೀನು ಸಿಕ್ಕಿದೆ.ಆದರೂ ಈ ಒಂದು ಆದೇಶ ಪ್ರತಿ ಬಾರದ ಹಿನ್ನೆಲೆಯಲ್ಲಿ ಇನ್ನೂ ಬಿಡುಗಡೆ ಯಾಗಿಲ್ಲ ಹೀಗಾಗಿ ಇವತ್ತು ಸಂಜೆ ಬೆಳಗಾವಿ ಯ ಹಿಂಡಲಗಾ ಕಾರಾಗೃಹದಲ್ಲಿದ್ದ ವಿನಯ ಕುಲಕರ್ಣಿ ಹೊರಗೆ ಬರತಾರೆ ಎಂದುಕೊಂಡಿದ್ದ ಅವರ ಅಭಿಮಾನಿಗಳು ಆಪ್ತರು ಕುಟುಂಬದವರು ಇವರನ್ನು ಸ್ವಾಗತ ಮಾಡಿಕೊಳ್ಳಲು ಬೆಳಗಾವಿಗೆ ಹೊಗಲು ಸಿದ್ದರಾಗಿದ್ದರು.ಆದರೆ ತಾಂತ್ರಿಕ ಸಮಸ್ಯೆ ಯಿಂದಾಗಿ ಜಾಮೀನು ಪ್ರತಿ ಬದಲಿಗೆ ಬೇರೆ ಏನೋ ಕಳಿಸಿದ್ದಾರೆ ಹೀಗಾಗಿ ಬಿಡುಗಡೆ ವಿಳಂಬ ಆಗಲಿದೆ.

ಕಳೆದ 9 ತಿಂಗಳಿನಿಂದ ಹಿಂಡಲಗಾ ಕಾರಾಗೃಹದಲ್ಲಿ ಸೇರವಾಸದಲ್ಲಿದ್ದರು ಮಾಜಿ ಸಚಿವ ವಿನಯ ಕುಲಕರ್ಣಿ.ಇವತ್ತು ಏನೋ ಜಾಮೀನು ಸಿಕ್ಕಿದ್ದು ಬಿಡುಗಡೆಯಾಗುತ್ತಾರೆ ಎನ್ನಲಾಗಿತ್ತು ಆದರೆ ಜಾಮೀನು ಪ್ರತಿ ಬಾರದ ಹಿನ್ನೆಲೆಯಲ್ಲಿ ನಾಳೆಯೂ ಬಿಡುಗಡೆ ವಿಳಂಬ ಆಗಲಿದ್ದು ಹೀಗಾಗಿ ಶನಿವಾರ ಹೊರಗೆ ಬರಲಿದ್ದಾರೆ ಎನ್ನಲಾಗಿದೆ.ಇನ್ನೂ ಇವರನ್ನು ಸ್ವಾಗತ ಮಾಡಿಕೊಳ್ಳಲು ನಾಳೆ ಧಾರವಾಡ ದಿಂದ ಬೆಳಗಾವಿ ಗೆ ಹೊರಡಲು ಸಿದ್ದರಾಗಿದ್ದ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ನಿರಾಸೆ ಗೊಂಡಿ ದ್ದಾರೆ.