ಜೂನ್ 15 ರಿಂದ ಶೈಕ್ಷಣಿಕ ವರ್ಷ ಆರಂಭ – ಮತ್ತೊಂದು ಆತಂಕದಲ್ಲಿ ನಾಡಿನ ಶಿಕ್ಷಕರು…..

Suddi Sante Desk

ಬೆಂಗಳೂರು – ಮಹಾಮಾರಿ ಕರೋನ ಕಳೆದ ವರುಷದಕ್ಕಿಂತ ಈ ವರುಷ ಸಾಕಷ್ಟು ಪ್ರಮಾಣ ದಲ್ಲಿ ಸಾವು ನೋವುಗಳನ್ನು ಉಂಟು ಮಾಡಿದೆ ಅದರಲ್ಲೂ ಶಿಕ್ಷಕರ ಪಾಲಿಗಂತೂ ಹೇಳೊದೊ ಬೇಡ ಅಷ್ಟೊಂದು ಹಾನಿಯನ್ನುಂಟು ಮಾಡಿದ್ದು ಇದೆಲ್ಲದ ರ ನಡುವೆ ಸರ್ಕಾರ ಹದಿನಾಲ್ಕು ದಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿ ಪ್ರಸ್ತುತ ಶೈಕ್ಷಣಿಕ ವಾರ್ಷಿಕ ಸಾಲಿನ ಸರಕಾರಿ,ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳ ಶೈಕ್ಷಣಿಕ ಅವಧಿಯನ್ನು ಶಿಕ್ಷಣ ಇಲಾಖೆ ಮತ್ತೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.

ಹೌದು ಶಾಲೆಗಳಿಗೆ ರಜೆ ಮುಗಿದು ಇನ್ನೇನು ಶಾಲೆಗ ಳು ಆರಂಭವಾಗುವಷ್ಟರಲ್ಲಿ ಮತ್ತೆ ಸರ್ಕಾರ ಜೂನ್ 14 ರವರೆಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಆದರೆ ಜೂನ್ 15 ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ.ಇನ್ನು,ಪ್ರಾಥಮಿಕ ಶಾಲೆಗ ಳ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ. ಅನ್ಬುಕುಮಾರ್ ಈ ಕುರಿತಂತೆ ಮಾತನಾಡಿ ಸರಕಾರಿ ಶಾಲೆಯ ಶೇ.70 ರಷ್ಟು ಮಕ್ಕಳಿಗೆ ಆನ್‌ಲೈನ್ ಪಾಠ ಗಳನ್ನು ಕೇಳಲು ಸಾಧ್ಯವಾಗಿಲ್ಲ ಎಂಬ ಅರಿವು ನಮ ಗಿದೆ.ಹಾಗಾಗಿ,ಕೆಲ ಕಂಪೆನಿಗಳ ಸಾಮಾಜಿಕ ಹೊಣೆ ಗಾರಿಕೆ ನಿಧಿಗಳಿಂದ ಮಕ್ಕಳಿಗೆ ಟ್ಯಾಬ್ ಕೊಡಿಸುವ ಪ್ರಯತ್ನ ನಡೆದಿದೆ.ಅದೇ ರೀತಿ, ಪ್ರತಿ ಮಗುವಿಗೂ ಗಮನ ನೀಡುವವರನ್ನು ಗುರುತಿಸಲು ಯೋಜನೆ ರೂಪಿಸುತ್ತೇವೆ.ಸಮಿತಿ ರೂಪುಗೊಂಡ ನಂತರ ನಮ್ಮ ಆಲೋಚನೆಗಳನ್ನು ಸಮಿತಿಯ ಸದಸ್ಯರೊಂ ದಿಗೆ ಹಂಚಿಕೊಳ್ಳುತ್ತೇವೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.