ತುಮಕೂರು –
ಶಿಕ್ಷಣ ಕ್ಷೇತ್ರಕ್ಕೆ ಸಿದ್ಧಗಂಗಾ ಕ್ಷೇತ್ರದ ಕಾಯಕ ಯೋಗಿ ಲಿಂ. ಡಾ.ಶಿವಕುಮಾರ ಶ್ರೀಗಳ ಕೊಡುಗೆ ಅಗಾಧವಾಗಿದ್ದು ಮುಂದಿನ ಪೀಳಿಗೆಗೆ ಪೂಜ್ಯರ ನಡೆ-ನುಡಿಯನ್ನು ಪರಿಚ ಯಿಸಲು ಶಾಲಾ ಪಠ್ಯದಲ್ಲಿ ಅವರ ಜೀವನ ಚರಿತ್ರೆಯನ್ನು ಅಳವಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂ ತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಭಾಷಣ ಮಾಡಿದ ಯಡಿಯೂರಪ್ಪ, ಶಿವಕುಮಾರ ಶ್ರೀಗಳ ಜೀವನ ಚರಿತ್ರೆ ಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಪಠ್ಯವನ್ನಾಗಿ ಅಳವಡಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಮನವಿ ಮಾಡಿದರು.ಇನ್ನೂ ಇದಕ್ಕೂ ಮುನ್ನ ಮಾತನಾಡಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಬಸವಣ್ಣನವರ ಭಾತೃತ್ವ ಮತ್ತು ಸಮಾನತೆ ಪ್ರತಿಪಾದನೆ ಮಾಡುವ ಆ ಬಸವ ಭಾರತ ನಮಗೆ ಬೇಕಿದೆ. ಇಡೀ ಭಾರತ ಬಸವ ಭಾರತ ಆಗಬೇಕು.ಬಸವ ತತ್ವಾದ ರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಸಮಾನ ತೆಯ ಬಾತೃತ್ವದ ಭಾರತ ನಮಗೆ ಬೇಕಿದೆ ಎಂದು ಸೂಚ್ಯವಾಗಿ ಹೇಳಿದರು.ಈ ಒಂದು ಸಮಯದಲ್ಲಿ ಕೇಂದ್ರ ಸಚಿವ ರಾದ ಅಮಿತ್ ಶಾ,ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ,ಸೇರಿದಂತೆ ಹಲವು ಗಣ್ಯರು ಉಪಸ್ಥಿ ತರಿದ್ದರು