ಹೃದಯಾಘಾತಕ್ಕೂ ಮುನ್ನ ಶರೀರ ನೀಡುತ್ತದೆ ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಪ್ರಾಣಕ್ಕೇ ಆಪತ್ತು ಈಗಲೇ ಈ ಕೆಲಸ ಮಾಡಿ

Suddi Sante Desk

ಬೆಂಗಳೂರು –

ಬದಲಾದ ಜೀವನ ಶೈಲಿಯ ನಡುವೆ ಇತ್ತೀಚಿಗೆ ಸಾವು ಯಾವ ಸಮಯದಲ್ಲಿ ಹೇಗೆ ಅದರಲ್ಲೂ ಹೃದಯಾಘಾತ ಬರುತ್ತದೆ ಎಂಬೊದೆ ಗೊತ್ತಾಗೊದಿಲ್ಲ ಹೀಗೆ ಇದ್ದ ವ್ಯಕ್ತಿ ನೋಡು ನೋಡುತ್ತಲೆ ಸಾವಿನ ಸುದ್ದಿ ಕೇಳುತ್ತೆವೆ ಇದಕ್ಕೆ ಇತ್ತೀಚಿಗೆ ನಡೆದ ಸಾಕಷ್ಟು ಸಾವಿನ ಪ್ರಕರಣಗಳಾಗಿದ್ದು ಹೀಗಾಗಿ ನಾವುಗಳು ಇತ್ತೀಚಿಗೆ ಹೆಚ್ಚಾಗಿರುವ ಹೃದಯಾ ಘಾತದಿಂದ ಸ್ವಲ್ಪು ಮಟ್ಟಿಗೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳೊದು ತುಂಬಾ ಅವಶ್ಯಕವಿದೆ.

ಹೌದು ಹೃದಯವು ನಮ್ಮ ದೇಹದ ಪ್ರಮುಖ ಅಂಗವಾ ಗಿದೆ.ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟು ಕೊಳ್ಳು ವುದು ಬಹಳ ಮುಖ್ಯ ಹೃದಯ ಬಡಿತದಲ್ಲಿ ಸ್ವಲ್ಪ ಏರಿಳಿತ ವಾದರೂ ಅನೇಕ ತೊಂದರೆಗಳನ್ನು ಎದುರಿಸಬೇಕಾ ಗುತ್ತದೆ.ಆರಂಭದಲ್ಲಿ,ರೋಗಿಯು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರು ತ್ತಾನೆ.ನಂತರ ಈ ಸಮಸ್ಯೆಗಳು ಹೃದಯಾಘಾತದ ಅಪಾ ಯವನ್ನು ಹೆಚ್ಚಿಸುತ್ತವೆ.ನೀವು ಕೂಡಾ ಹೃದ್ರೋಗದಿಂದ ಬಳಲುತ್ತಿದ್ದರೆ ಹೃದಯಾಘಾತದ ಈ ಲಕ್ಷಣಗಳ ಬಗ್ಗೆ ತಿಳಿದುಕೊಂಡಿರಬೇಕು.

ಹೃದಯಾಘಾತ ಎಂದರೇನು…..

ಹೃದಯಕ್ಕೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ನಿರ್ಬಂಧಿಸಿದಾಗ ವ್ಯಕ್ತಿಗೆ ಹೃದಯಾಘಾತವಾಗುತ್ತದೆ. ಪರಿಧಮನಿಯ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ಮತ್ತು ಕೊಬ್ಬಿನ ಶೇಖರಣೆಯಿಂದಾಗಿ ಕೆಲವೊಮ್ಮೆ ಹೀಗಾಗುತ್ತದೆ ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳನ್ನು ಪರಿಧಮ ನಿಯ ಅಪಧಮನಿಗಳು ಎಂದು ಕರೆಯಲಾಗುತ್ತದೆ. ಹೃದ ಯಾಘಾತದ ಯಾವುದೇ ಲಕ್ಷಣಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸದೆ, ತಕ್ಷಣ ವೈದ್ಯರನ್ನು ಸಂಪರ್ಕಿ ಸಬೇಕು.

ಹೃದಯಾಘಾತದ ಲಕ್ಷಣಗಳೇನು?

ಹೃದಯಾಘಾತಕ್ಕೂಮೊದಲು, ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ.ಈ ಚಿಹ್ನೆಗಳು ಕಂಡು ಬಂದ ತಕ್ಷಣ ಎಚ್ಚರವಹಿಸಬೇಕು.ವೈದ್ಯರನ್ನು ಸಂಪರ್ಕಿಸ ಬೇಕು.ಹೃದಯಾಘಾತದ ಮೊದಲು,ಎದೆ ನೋವು ಕಾಣಿಸಿ ಕೊಳ್ಳುವುದು ದವಡೆ ಅಥವಾ ಹಲ್ಲುಗಳಲ್ಲಿ ನೋವು, ಉಸಿ ರಾಟದ ತೊಂದರೆ,ಬೆವರುವುದು,ಗ್ಯಾಸ್ ಆಗುವುದು, ತಲೆ ಸುತ್ತುವುದು ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ.

ಯಾವ ವಯಸ್ಸಿನಲ್ಲಿ ಜನರು ಹೃದಯಾಘಾತ

ಹೃದಯಾಘಾತವು ಯಾವುದೇ ವಯಸ್ಸಿನ ವ್ಯಕ್ತಿಗೆ ಬರಬಹುದು ಎಂಬೊದನ್ನು ನೋಡಿದರೆ 45 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 55 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು

ಸೂಚನೆ ಇಲ್ಲಿ ನೀಡಲಾದ ಮಾಹಿತಿಯು ಮನೆ ಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು,ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ ಮೇಲಿಂದ ಮೇಲೆ ವೈಧ್ಯರ ಸಲಹೆ ಸಂಪರ್ಕ ಆರೋಗ್ಯ ಪರೀಕ್ಷೆ ಇರಲಿ ವಾಯು ವಿಹಾರ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮವನ್ನು ಅನುಸರಿಸಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.