ಕಾರವಾರ –
ಅಂದು ಕೊಂಡಂತೆ ಆಗಿದ್ದರೆ ಆ ಯುವಕ ಇವತ್ತು ಮದುವೆಯಾಗಬೇಕಾಗಿತ್ತು.ಆದರೆ ಆಗಿದ್ದೇ ಬೇರೆ ಹೌದು ಹಸೆಮಣೆ ಏರಬೇಕಿದ್ದ ವರ ಕೋವಿಡ್ ಸೋಂಕಿನಿಂದಾಗಿ ಇಂದು ಮೃತಪಟ್ಟಿದ್ದಾರೆ ಸಂಭ್ರ ಮದಲ್ಲಿದ್ದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ
ನಗರದ ತೆಲೆಂಗಾರಸ್ತೆಯ ನಿವಾಸಿ ಮದುಮಗ ರೋಷನ್ ಪಡವಲಕರ್(30) ಮೃತಪಟ್ಟ ಯುವಕ ನಾಗಿದ್ದಾನೆ ಪೂನಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರೋಷನ್ ವಿವಾಹ ಮೇ 4 ರಂದು ನಿಶ್ಚಯವಾಗಿತ್ತು.ಈ ಹಿನ್ನೆಲೆಯಲ್ಲಿ ಕೆಲವು ದಿನದ ಹಿಂದೆ ಪೂನಾದಿಂದ ರೋಷನ್ ಊರಿಗೆ ಆಗಮಿಸಿದ್ದರು.
ವಾರದ ಹಿಂದೆ ಅನಾರೋಗ್ಯಕ್ಕೊಳಗಾಗಿ ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ರೋಷನ್ ಅವರನ್ನು ಕರೆತರಲಾಗಿದೆ.
ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿದ್ದು ನಂತರ ಕೋವಿಡ್ ಪರೀಕ್ಷೆ ನಡೆಸಿ ದಾಗ ಸೋಂಕು ದೃಢಪ ಟ್ಟಿದೆ.ವಿವಾಹದ ಸಂಭ್ರಮ ದಲ್ಲಿದ್ದ ಮನೆಯವರಿಗೆ ವರನ ಅಕಾಲಿಕ ನಿಧನ ಬರಸಿಡಿಲಿನಂತೆ ಬಡಿದಿದ್ದು, ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ