ಕೊನೆಗೂ ವಿಸ್ತರಣೆಯಾಯಿತು ಸಚಿವ ಸಂಪುಟ – ಸಚಿವರಾಗಿ 29 ಶಾಸಕರಿಂದ ಪ್ರಮಾಣ ವಚನ ಸ್ವೀಕಾರ – ಅಲ್ಲಲ್ಲಿ ಬುಗಿಲೆದ್ದ ಅಸಮಾಧಾನ ಪ್ರತಿಭಟನೆ…..

Suddi Sante Desk

ಬೆಂಗಳೂರು –

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿನ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ. ಎರಡು ದಿನಗಳ ಕಾಲದ ಹಗ್ಗ ಜಗ್ಗಾಟದ ಮಧ್ಯೆಯೂ ಕೂಡಾ ಕೊನೆಗೂ ಹೈಕಮಾಂಡ್ ವಿಸ್ತರಣೆಗೆ ಹಸಿರು ನಿಶಾನೆ ನೀಡಿದ್ದು 29 ಶಾಸಕರು ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 29 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು. ರಾಜ್ಯಪಾಲರಾದ ಗೆಹ್ಲೋಟ್ ಅವರು ಪ್ರಮಾಣ ವಚನವನ್ನು ಬೋಧಿಸಿದರು.

ಪ್ರಮಾಣ ವಚನ ಸ್ವೀಕಾರ ಮಾಡಿದ ಸಚಿವರುಗಳು

ಗೋವಿಂದ ಲಕ್ಕಪ್ಪ ಕಾರಜೋಳ
ಕೆ ಎಸ್ ಈಶ್ವರಪ್ಪ
ಆರ್ ಅಶೋಕ
ಬಿ ಶ್ರೀರಾಮಲು
ವಿ ಸೋಮಣ್ಣ
ಉಮೇಶ ವಿಶ್ವನಾಥ ಕತ್ತಿ
ಎಸ್ ಅಂಗಾರ
ಜೆ ಸಿ ಮಾಧುಸ್ವಾಮಿ
ಅರಗ ಜ್ಞಾನೇಂದ್ರ
ಸಿ ಎನ್ ಅಶ್ವಥ್ ನಾರಾಯಣ
ಸಿ ಸಿ ಪಾಟೀಲ್
ಆನಂದ್ ಸಿಂಗ್
ಕೋಟಾ ಶ್ರೀನಿವಾಸ್ ಪೂಜಾರಿ
ಪ್ರಭು ಚೌಹಾಣ್
ಮುರಗೇಶ ನಿರಾಣಿ
ಶಿವರಾಮ್ ಹೆಬ್ಬಾರ್
ಎಸ್ ಟಿ ಸೋಮಶೇಖರ್
ಬಿ ಸಿ ಪಾಟೀಲ್
ಬೈರತಿ ಬಸವರಾಜ್
ಡಾ ಕೆ ಸುಧಾಕರ್
ಕೆ ಗೋಪಾಲಯ್ಯ
ಶ್ರೀಮತಿ ಶಶಿಕಲಾ ಜೊಲ್ಲೆ
ಎಮ್ ಟಿ ಬಿ ನಾಗರಾಜು
ಕೆ ಸಿ ನಾರಾಯಣಗೌಡ
ಬಿ ಸಿ ನಾಗೇಶ್
ಸುನೀಲ ಕುಮಾರ
ಹಾಲಪ್ಪ ಆಚಾರ್ಯ
ಶಂಕರಪಾಟೀಲ ಮುನೇನಕೊಪ್ಪ
ಮುನಿರತ್ನ

ಇನ್ನೂ ನನಗೂ ನಮ್ಮ ನಾಯಕರಿಗೂ ಸಚಿವ ಸ್ಥಾನ ಸಿಗುತ್ತದೆ ಎಂದುಕೊಂಡಿದ್ದ ಹಲವರಿಗೆ ಈ ಒಂದು ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿದೆ ಈ ಒಂದು ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಲವೆಡೆ ಅವರ ಅಭಿಮಾನಿಗಳು ಪ್ರತಿಭಟನೆ ಮಾಡಿದರು. ಮುಖ್ಯಮಂತ್ರಿ ರೇಸ್ ನಲ್ಲಿದ್ದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರಿಗೆ ಸಚಿವ ಸ್ಥಾನ ಕೈತಪ್ಪಿದ್ದು ಇವರ ಅಭಿಮಾನಿಗಳು ಹುಬ್ಬಳ್ಳಿ ಧಾರವಾಡದಲ್ಲಿ ಪ್ರತಿಭಟನೆ ಮಾಡಿದರು. ಇತ್ತ ಹಾವೇರಿ ಜಿಲ್ಲೆಯ ಶಾಸಕ ನೆಹರು ಓಲೆಕಾರ ಮತ್ತು ರಾಜೂಗೌಡ ರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅವರ ಅಭಿಮಾನಿಗಳು ಪ್ರತಿಭಟನೆ ಮಾಡಿದರು.

ವಿಜಯೋತ್ಸವ ಆಚರಣೆ

ಅತ್ತ ಸಚಿವರಾಗುತ್ತಿದ್ದಂತೆ ಇತ್ತ ಅಲ್ಲಲ್ಲಿ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು. ಹುಬ್ಬಳ್ಳಿಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಸಚಿವರಾದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು
ಹುಬ್ಬಳ್ಳಿಯಲ್ಲಿ ವಿಜಯೋತ್ಸವವನ್ನು ಆಚರಣೆ ಮಾಡಿದರು. ಇದರೊಂದಿಗೆ ರಾಜ್ಯದ ಅಲ್ಲಲ್ಲಿ ನೂತನ ಸಚಿವರ ಅಭಿಮಾನಿಗಳು ಬೆಂಬಲಿಗರು ವಿಜಯೋತ್ಸವವನ್ನು ಮಾಡಿ ಸಂಭ್ರಮಿಸಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ,ಕೆಎಮ್ಎಫ್ ಅಧ್ಯಕ್ಷರಾದ ಶಂಕರ ಮುಗದ,ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.