ಹೊಸಪೇಟೆ –
ಹಾಡುಹಗಲೇ ನ್ಯಾಯಾಲಯದಲ್ಲಿ ನ್ಯಾಯವಾದಿ ಯೊಬ್ಬರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಬಳ್ಳಾರಿಯಲ್ಲಿ ಮತ್ತೊಂದು ಕಲೆಯಾಗಿದೆ. ಹೌದು ವಕೀಲರೊಬ್ಬರ ಕೊಲೆ ಪ್ರಕರಣ ಮಾಸುವ ಮುನ್ನವೇ ಸಮೀಪದ ಟಿ.ಬಿ.ಡ್ಯಾಂನಲ್ಲಿ ಕೇಬಲ್ ಆಪರೇಟರ್ ಒಬ್ಬರನ್ನು ಶನಿವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಟಿ.ಬಿ.ಡ್ಯಾಂ ನಿವಾಸಿ ಮೈಕಲ್ ಜಾನ್( 40) ಕೊಲೆಯಾದ ಕೇಬಲ್ ಆಪರೇಟರ್ ಎಂದು ಗುರುತಿಸಲಾಗಿದೆ. ಟಿ.ಬಿ ಡ್ಯಾಂ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಕೆಳಭಾಗದಲ್ಲಿ ದುಷ್ಕರ್ಮಿಗಳು ಮೈಕಲ್ ಜಾನ್ ಅವರನ್ನು ಕೊಲೆ ಮಾಡಿದ್ದಾರೆ.

ಟಿ.ಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, CPI ವಿ.ನಾರಾಯಣ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇನ್ನೂ ಹತ್ಯೆ ಮಾಡುವ ಮುನ್ನ ಮೃತ ವ್ಯಕ್ತಿಯನ್ನು ಅಟ್ಟಾಡಿಸಿ, ಮಾರಕಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲಿನಿಂದ ಮುಖಕ್ಕೆ ಜಜ್ಜಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದ್ದು ಏನೇ ಆಗಲಿ ಎಲ್ಲವೂ ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.