ಸದಸ್ಯತ್ವ ಶುಲ್ಕ ನಿಲ್ಲಿಸಿ ಆರಂಭ ಗೊಂಡ ಅಭಿಯಾನ ನಮಗೆ ಇಂತಹ ಸಂಘಟನೆ ಬೇಕೆ ಒಮ್ಮೆ ಯೋಚನೆ ಮಾಡಿ ಸಿಡಿದೆದ್ದ ಶಿಕ್ಷಕರ ಅಸಮಾಧಾನ…..

Suddi Sante Desk

ಬೆಂಗಳೂರು –

ವರ್ಗಾವಣೆ ಸಿಗದೇ ಹಲವಾರು ಶಿಕ್ಷಕರು ಸಿಡಿದೆದ್ದಿದ್ದಾರೆ‌ ಹೌದು ಸಂಘಟನೆಯ ವಿರುದ್ದ ಅಸಮಾಧಾನ ವನ್ನು ಹೊರಹಾಕಿದ್ದು 10,15,20 ವರ್ಷಗಳ ಕಾಲ ನಿರಂತರವಾಗಿ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಾ ಪ್ರತಿಬಾರಿಯೂ ವರ್ಗಾವಣೆ ಅರ್ಜಿ ಸಲ್ಲಿಸಿ ಯಾವುದಾದರೂ ಒಂದು ಕಾರಣದಿಂದ ಹಾಟ್ ಸೀಟ್ ಸಿಗದೇ, ಕೆಲವರಿಗೆ ಸಿಕ್ಕರೂ ಲಾಕ್ ಲಾಕ್ ಎಂಬ ಪದವನ್ನು ಓದಿ ಸಹಿ ಮಾಡಿ ಬರುತ್ತಿ ರುವುದು ಸಾಮಾನ್ಯವಾಗಿ ಬಿಟ್ಟಿದೆ ಈ ವರ್ಷ ಸಾಮಾನ್ಯ ಶಿಕ್ಷಕನಾದ ನಾನೇ ಸ್ವತಃ ಪ್ರತಿ ಶಾಲೆಗೆ ಹೋಗಿ ಸದಸ್ಯತ್ವ ಶುಲ್ಕ ಕಟಾವಣೆ ಮಾಡದಂತೆ ಲಿಖಿತ ಅರ್ಜಿ ಸಂಗ್ರಹಿಸಿ ಸಂಬಂಧಿಸಿದ DDO ರವರಿಗೆ ನೀಡಿ ಸ್ವೀಕೃತಿ ಪಡೆದೇ ಪಡೆಯುತ್ತೇನೆ ಎರಡು ನೂರು ರೂಪಾಯಿ ಪಡೆದವರಿಂದ ನಮಗೇನೂ ಉಪಯೋಗವಿಲ್ಲ ಎಂದು ಕಿಡಿಕಾರಿ, ನೋವಿ ನಿಂದ ಇದೇ ನನ್ನ ಮುಂದಿನ ಗುರಿ ಎಂದು ಸ್ಪಷ್ಟವಾಗಿ ಹೇಳಿದ್ದು ಕೇಳಿ ತುಂಬಾ ಬೇಸರವಾಯಿತು ಬಂಧುಗಳೇ

ಪಾಪ ಅವರ ನೋವು ನಮ್ಮ ನೋವು ಆಗಿದೆ ಯೋಚಿಸಿ ಬಂಧುಗಳೇ ಇವರಿಗೆ ಎರಡು ನೂರು ರೂಪಾಯಿ ಕೊಡುವುದು ಸರಿಯೇ ತಪ್ಪೇ, ಹೋಗಲಿ ಎಷ್ಟು ಜನ ಪ್ರತಿನಿಧಿಗಳು ರಾಜೀನಾಮೆ ಪತ್ರ ಬಿಸಾಕಿ ನಿಮ್ಮ ಪರ ನಿಂತಿದ್ದಾರೆ ಯೋಚಿಸಿ ಇಂತಹವರಿಂದ ನಮಗೆ ಏನೂ ಪ್ರಯೋಜನ ಆರಂಭಿಸಿ ಸದಸ್ಯತ್ವ ಶುಲ್ಕ ನಿಲ್ಲಿಸಿ ಅಭಿ ಯಾನ ಇಲ್ಲದಿದ್ದರೆ ಬದಲಾವಣೆ ಗಗನಕುಸುಮ ಬರೆದಿ ಟ್ಟುಕೊಳ್ಳಿ ಯಾವುದೇ ರೀತಿಯ ಆಸೆ, ಆಮಿಷ, ನಮ್ಮ ವರು ಜಾತಿ, ಮತ, ಪಂಥ, ಕಲೀಗ್,ಬ್ಯಾಚ್ ಮೇಟ್, ಆತ್ಮೀಯ, ಎಂಬ ಗೀಳಿಗೆ ಬಲಿಯಾಗಿ ಎಷ್ಟು ವರ್ಷಗಳ ಕಾಲ ನೋವಿನಿಂದ ಬಳಲುವಿರಿ ಯೋಚಿಸಿ ನಮಗೆ ಇಂತಹ ಸಂಘಟನೆ ಬೇಕೇ ಯೋಚಿಸಿ.ಇದು ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿದ್ದು ಯಥಾವತ್ತಾಗಿ ಪ್ರಕಟ ಮಾಡಲಾಗಿದೆ – ನೊಂದುಕೊಂಡಿರುವ ನಾಡಿನ ಶಿಕ್ಷಕರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.