ತುಮಕೂರು –
ಕಾಂಗ್ರೇಸ್ ಪಕ್ಷದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ತಡರಾತ್ರಿ ಅಪಘಾತಕ್ಕೀ ಡಾಗಿದ್ದು ಜಯಚಂದ್ರ ಗಾಯಗೊಂಡಿದ್ದಾರೆ.ಹೌದು ನಿನ್ನೆ ರಾತ್ರಿ ಫಾರ್ಚುನರ್ ಕಾರಿನಲ್ಲಿ ಟಿ.ಬಿ.ಜಯಚಂದ್ರ ಪ್ರಯಾ ಣಿಸುತ್ತಿದ್ದರು.ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತುಮಕೂರು ತಾಲೂಕಿನ ಸಿಬಿ ಕ್ರಾಸ್ ಬಳಿ ಚಾಲಕ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ಪಲ್ಟಿಯಾಗಿದೆ.

ಪ್ರಾಣಾಪಾಯದಿಂದ ಜಯಚಂದ್ರ,ಕಾರು ಚಾಲಕ ಮತ್ತು ಗನ್ ಮ್ಯಾನ್ ಪಾರಾಗಿದ್ದಾರೆ.ಮಾಜಿ ಸಚಿವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖ ಲಾಗಿದ್ದಾರೆ.ಇನ್ನೂ ಇತ್ತ ಪ್ರಕರಣ ದಾಖಲು ಮಾಡಿಕೊಂಡಿ ರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿ ದ್ದಾರೆ.