ಮೈಸೂರು –
ಮೈಸೂರಿನಲ್ಲಿ ನಡೆದ ಸಂಚಾರಿ ಪೊಲೀಸರ ಮೇಲಿನ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಬೈಕ್ ಸವಾರನೊಬ್ಬನ ಸಾವಿಗೆ ಸಂಚಾರಿ ಪೊಲೀಸರೇ ಕಾರಣ ಎಂದುಕೊಂಡು ಸಂಚಾರಿ ಪೊಲೀಸರ ಮೇಲೆ ಸಿಕ್ಕ ಸಿಕ್ಕ ಹಾಗೇ ಹಲ್ಲೆಯನ್ನು ಸಾರ್ವಜನಿಕರು ಮಾಡಿದ್ದರು ಅಲ್ಲದೇ ಪೊಲೀಸ್ ವಾಹನಗಳನ್ನು ಕೂಡಾ ಜಖಂ ಮಾಡಿದ್ದರು.ಈಗ ಈ ಒಂದು ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.ಹೌದು ನಾವಿಬ್ಬರೂ ಕಂಟ್ರ್ಯಾಕ್ಟರ್ ಮಾಡಿಸುತ್ತೇವೆ ಬೈಕ್ ದೇವರಾಜದ್ದು ಅವರದ್ದು. ಅವರೇ ಚಾಲನೆ ಮಾಡ್ತಾ ಇದ್ರು. ಹೆಲ್ಮೆಟ್ ಹಾಕಿದ್ದೆವು. ಏಕಾಏಕಿ ವಾಹನ ಬಂದು ಡಿಕ್ಕಿಯಾಗಿ ಈ ಘಟನೆ ನಡೆದು ಹೋಯ್ತು ಎಂದು ಬೈಕ್ ಹಿಂದೆ ಇದ್ದ ಹಿಂಬದಿಯ ಸವಾರ ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯು ತ್ತಿರುವ ಸುರೇಶ್ ಹೇಳಿದರು. ನಾವು ಯಾವತ್ತು ಬೈಕ್‌ನಲ್ಲಿ ಓಡಾಡಿದವರಲ್ಲ. ಇವತ್ತು ಕಾರು ಇಲ್ಲದ ಕಾರಣ, ಸಿಟಿಯಲ್ಲಿ ಕೆಲಸ ಮುಗಿಸಿ ಕೊಂಡು ಹೂಟಗಳ್ಳಿಯಲ್ಲಿರುವ ನಮ್ಮ ಮನೆಗೆ ಬಿಡಲು ಬರುತ್ತಿದ್ದರು. ಈ ವೇಳೆ 250 ಮೀಟರ್ ದೂರದಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಅವರಿಗೂ ನಮಗೂ ಸಂಬಂಧ ವಿಲ್ಲ. ನಾವಿಬ್ಬರೂ ಹೆಲ್ಮೆಟ್ ಹಾಕಿದ್ದವು ಎನ್ನುತ್ತಾ ಅಚ್ಚರಿ ಮೂಡಿಸಿದ್ದಾರೆ.
ಹಿಂದಿ ನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದದ್ದು ನಾವು ಬಿದ್ದಿದ್ದು ಅಷ್ಟೆ ನನಗೆ ಗೊತ್ತು. ಮುಂದೆ ಏನಾಯ್ತು ಎಂಬುದು ಗೊತ್ತಿಲ್ಲ ಎಂದು ಘಟನೆ ವಿವರಿಸಿದರು.

ಪ್ರಜ್ಞೆ ಬಂದ ನಂತರ ನನ್ನ ಸ್ನೇಹಿತ ಎಲ್ಲಿ ಎಂದು ಕೇಳಿದಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಿಮ್ಮನ್ನು ಆಸ್ಪತ್ರೆಗೆ ಸೇರಿಸುತ್ತೇವೆ ಎಂದು ಪೊಲೀಸರು ಮತ್ತು ಗರುಡದವರು ಬಂದು ಕರೆದುಕೊಂಡು ಹೋದರು. ಪೊಲೀಸರಿಂದ ತೊಂದರೆಯಾಗಿಲ್ಲ. ಅವರು ಕೈಯೊಡ್ಡುವುದನ್ನು ಮಾಡಿಲ್ಲ. ದಾಖಲೆಗಳು ಇದ್ದವು ಎಂದು ಸುರೇಶ್ ಹೇಳಿಕೊಂಡಿರುವ ವಿಡಿಯೋ ಹರಿದಾಡುತ್ತಿದೆ.

ಇನ್ನೂ ಈ ಒಂದು ಪ್ರಕರಣ ಕುರಿತು ಹಲ್ಲೆಗೊಳಗಾದ ಮೂವರು ಸಿಬ್ಬಂದಿ ಗಳಿಂದ ದೂರನ್ನು ದಾಖಲು ಮಾಡಿಕೊಂಡು ಈಗಾಗಲೇ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ.