ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿನ ಆರೋಪಿಗಳ ಜಾಮೀನು ಅರ್ಜಿಯನ್ನು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಕೊಲೆ ನಡೆದು ಮೊದಲು ಬಂಧನವಾದ ನಂತರ ಸಿಬಿಐ ತನಿಖೆಗೆ ಕೊಟ್ಟ ನಂತರ ಸಿಬಿಐ ಅದಿಕಾರಿಗಳಿಂದ ಬಂಧವಾಗಿರುವ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಂಧನವಾಗಿರುವ ಎಂಟು ಜನ ಆರೋಪಿಗಳಲ್ಲಿ ಐದು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಆರೋಪಿಗಳಾದ ಅಶ್ವತ ಶಿವನಗೌಡ, ನಜೀರ್ ಅಹಮ್ಮದ್ ,ಶಾನವಾಜ್ ನೂತನ್,ಮತ್ತು ಹರ್ಷಿತ ಹೀಗೆ ನಾಲ್ಕು ಜನ ಆರೋಪಿಗಳು ಜಾಮೀನಿಗಾಗಿ ಅರ್ಜಿಯನ್ನು ಹಾಕಿಕೊಂಡಿದ್ದರು.

ಈ ಕುರಿತಂತೆ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ಮಾಡಿ ಯಾವುದೇ ಕಾರಣಕ್ಕೂ ಈ ಒಂದು ಪ್ರಕರಣದಲ್ಲಿ ನಿಮಗೆ ಜಾಮೀನು ನೀಡಲು ಸಾಧ್ಯವಿಲ್ಲವೆಂದು ಎಂದು ಜಾಮೀನು ನೀಡಲು ತಿರಸ್ಕಾರ ಮಾಡಿ ಅರ್ಜಿಯನ್ನು ವಜಾಗೊಳಿಸಿದೆ.ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಐದು ಜನ ಆರೋಪಿಗಳ ಅರ್ಜಿಯನ್ನು ಕೂಡಾ ನ್ಯಾಯಾಲಯ ವಜಾಗೊಳಿಸಿದೆ.