ಬೆಂಗಳೂರು –
ಸಿಡಿ ಪ್ರಕರಣ ದಿನಕ್ಕೊಂದು ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ತನಿಖೆ ಮಾಡುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಈ ಒಂದು ಪ್ರಕರಣವು ದಿನಕ್ಕೊಂದು ವಿಚಿತ್ರ ತಿರುವು ಪಡೆಯುತ್ತಿರುವುದು ಕಂಡು ಬರುತ್ತಿದ್ದು ಈಗ ಸಿ.ಡಿ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಹೌದು ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‍ಐಟಿ ನಿರ್ಧರಿಸಿದೆ. ಸಿ.ಡಿ ಬಹಿರಂಗವಾದ ಬಳಿಕ ಚಿತ್ರ,ವಿಚಿತ್ರ ತಿರುವುಗಳು ಪಡೆಯುತ್ತಿದ್ದು ಒಂದಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಸುತ್ತಲೂ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಈಗ ಹೊಸದಾಗಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರ ಹೆಸರುಗಳು ತಳುಕು ಹಾಕಿಕೊಂಡಿವೆ. ಹೀಗಾಗಿ ಸಿ.ಡಿ ಪ್ರಕರಣ ಮತ್ತೊಂದು ರೀತಿಯ ತಿರುವು ಪಡೆಯುತ್ತಿದೆ.ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯಲ್ಲಿರುವ ಇಬ್ಬರು ಮಾಜಿ ಶಾಸಕರುಗಳಿಗೆ ನೋಟಿಸ್ ನೀಡಲು ಎಸ್‍ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿ.ಡಿ ಯ ಯುವತಿ ನ್ಯಾಯಾಧೀಶ ರ ಮುಂದೆ ಹಾಜರಾಗಿ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಿದ ಬಳಿಕ ಎಸ್‍ಐಟಿ ಅಧಿಕಾರಿಗಳು ಸತತ 5 ದಿನಗಳ ಕಾಲ ಆಕೆಯನ್ನು ವಿಚಾರಣೆಗೊಳ ಪಡಿಸಿದ್ದಾರೆ.ಯುವತಿಯ ಮೊಬೈಲ್‍ನ್ನು ವಶಕ್ಕೆ ಪಡೆದುಕೊಂಡು ಅಳಿಸಲಾಗಿದ್ದ ದತ್ತಾಂಶಗಳನ್ನು ರಿಟ್ರೈವ್ ಮಾಡಿದ ವೇಳೆ ಇಬ್ಬರು ಮಾಜಿ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆ ಇಬ್ಬರು ಶಾಸಕರಿಗೆ ನೋಟೀ ಸ್ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ. ಯುವತಿ ಜೊತೆಗಿ ನ ಸಂಪರ್ಕ ಯಾವ ಕಾರಣಕ್ಕಾಗಿ ಇತ್ತು.

ಯಾವೆಲ್ಲ ಮಾಹಿತಿಗಳು ಹಂಚಿಕೆಯಾಗಿವೆ ಈ ಮಾಜಿ ಶಾಸಕರುಗಳ ಜೊತೆ ಬೇರೆ ಯಾರೆಲ್ಲ ಸಂಪರ್ಕ ಹೊಂದಿದ್ದರು ಎಂಬ ವಿಷಯಗಳನ್ನು ಕಲೆ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಯುವತಿಯ ನಡುವೆ ಲಾಕ್‍ಡೌನ್ ಬಳಿಕ ಸಂಪರ್ಕ ತೀವ್ರವಾಗಿ ತ್ತು. ಆ ಸಂದರ್ಭದಲ್ಲೇ ವಿಡಿಯೋ ಚಿತ್ರೀಕರಣ ವಾಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಅದೇ ವೇಳೆಗೆ ಈ ಮಾಜಿ ಶಾಸಕರ ನಡುವೆ ಕೂಡ ಸಂಪ ರ್ಕ ಇರುವುದು ಮೊಬೈಲ್‍ನಲ್ಲಿನ ದತ್ತಾಂಶ ಗಳಿಂದ ಸ್ಪಷ್ಟವಾಗಿದೆ ಎಂದು ಉನ್ನತ ಮೂಲಗಳು ತಿಳಿದು ಬಂದಿದೆ. ಹೀಗಾಗಿ ಅಧಿಕಾರಿಗಳು ಮತ್ತಷ್ಟು ಸ್ಪಷ್ಟೀಕ ರಣಕ್ಕಾಗಿ ಈ ಮಾಜಿ ಶಾಸಕರುಗಳಿಗೆ ನೋಟಿಸ್ ನೀಡಲು ಮುಂದಾಗಿದ್ದು ವಿಚಾರಣೆಯ ನಂತರ ಮತ್ತೇನು ಬೆಳವಣಿಗಳು ಆಗುತ್ತವೆ ಎಂಬುದನ್ನು ಕಾದು ನೊಡಬೇಕಿದೆ