ಬೆಂಗಳೂರು –
ಸಿಡಿ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ SIT ಅಧಿಕಾರಿಗಳಿಗೆ ಬೇರೆ ಬೇರೆ ಸ್ಪೋಟಕ ವಿಚಾರಗಳು ಹೊರಗೆ ಬರುತ್ತಿವೆ. ಆದರೆ ಈವರೆಗೆ ಮಾತ್ರ ಸಿಡಿ ಗ್ಯಾಂಗ್ ಕುರಿತು ಅಧಿಕಾರಿಗಳಿಗೆ ಯಾವುದೇ ಸುಳಿವು ಸಿಗುತ್ತಿಲ್ಲ.ಹೌದು SIT ವಿಚಾರಣೆ ಸಂದರ್ಭ ದಲ್ಲಿ ಸಿಡಿ ಲೇಡಿ ಸಿಡಿ ಗ್ಯಾಂಗ್ ನ ಕಿಂಗ್ ಪಿನ್ ಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ ನೀಡುತ್ತಿಲ್ಲ.

ಬೆಂಗಳೂರು ನಗರವನ್ನು ಸಿಡಿ ಗ್ಯಾಂಗ್ ಸದಸ್ಯರೆಲ್ಲ ಒಟ್ಟಾಗಿ ತೊರೆದ ನಂತರ ಬೇರೆ ಬೇರೆ ರಾಜ್ಯಗಳನ್ನು ಸುತ್ತಿದ್ದರು. ನರೇಶ್ ಗೌಡ ಮತ್ತು ಶ್ರವಣ್ ಜೊತೆ ಯುವತಿ ಕೂಡ ತೆರಳಿದ್ದಾರೆ ಎಂಬ ಮಾಹಿತಿ ಎಸ್ ಐಟಿಗೆ ಸಿಕ್ಕಿತ್ತು ಎನ್ನಲಾಗಿದೆ.ಆದರೆ ಈವರೆಗೆ ಅವರ ಸುಳಿವು ಸಿಗುತ್ತಿಲ್ಲ.

ಖಚಿತ ಮಾಹಿತಿ ಮೇಲೆ ಪೊಲೀಸರು ಆ ಸ್ಥಳಕ್ಕೆ ತೆರಳುತ್ತಿದ್ದಂತೆ ಸಿಡಿ ಗ್ಯಾಂಗ್ ಅಲ್ಲಿಂದ ಪರಾರಿಯಾ ಗುತ್ತಿದ್ದರು. ಯುವತಿ, ಕಿಂಗ್ ಪಿನ್ ಗಳ ಮೊಬೈಲ್ ಟವರ್ ಸ್ಥಳಗಳು ಹಲವು ಸಂದರ್ಭದಲ್ಲಿ ಒಂದೇ ಕಡೆ ಇದ್ದ ಹಿನ್ನೆಲೆಯಲ್ಲಿ ಯುವತಿಗೆ ಪೊಲೀಸರು ಪ್ರಶ್ನಿಸಿದ್ದಾರೆ.ವಿಚಾರಣೆಯಲ್ಲಿ ಯುವತಿಯು ಈ ಒಂದು ಸಂದರ್ಭದಲ್ಲಿ ಶ್ರವಣ್, ನರೇಶ್ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ

ಇನ್ನೂ ಕೆಲವು ಪ್ರಶ್ನೆಗಳಿಗೆ ಯುವತಿ ಜಾಗೃತಿಯ ಹೆಜ್ಜೆ ಹಾಕಿದ್ದಾರೆ. ಈ ಹಿಂದೆ ವಿಡಿಯೋ ಮಾಡಿ ಹರಿ ಬಿಟ್ಟಿದ್ದ ನರೇಶ್ ಗೌಡ,ಯುವತಿಗೆ ನ್ಯಾಯ ಕೊಡಿಸು ವ ನಿಟ್ಟಿನಲ್ಲಿ ನಾನು ಆಕೆಯ ಜೊತೆ ಸಂಪರ್ಕದಲ್ಲಿ ದ್ದೆ. ಅಲ್ಲದೇ ವಿಚಾರಣೆಗೆ ಈಗ ಹಾಜರಾದರೆ ನನ್ನನ್ನು ಏನು ಮಾಡುತ್ತಾರೆ ಎನ್ನುವುದು ಗೊತ್ತು ಎಂದಿದ್ದು ಈವರೆಗೆ ಸುಳಿವಿಲ್ಲ

ನಾನೇ ಕೆಲವು ದಿನಗಳ ನಂತರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಒಟ್ಟಾರೆ ಬಿಡುವಿಲ್ಲದೆ ವಿಚಾರಣೆ ಮಾಡುತ್ತಿರುವ ಸಿಡಿ ಲೇಡಿ ಮಾತ್ರ ಈವರೆಗೆ ಸಿಡಿ ಗ್ಯಾಂಗ್ ಕುರಿತು ಮಾಹಿತಿ ನೀಡುತ್ತಿಲ್ಲ ಇದರಿಂದ SIT ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.