ಬೆಂಗಳೂರು –
ಸರ್ಕಾರಿ ನೌಕರರಿಗೆ ಬಂಪರ್ ಹೋಳಿಗೂ ಮುನ್ನ ಸಿಗಲಿದೆ ಸಿಹಿ ಸುದ್ದಿ ಹೌದು

ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಸಿಗಲಿದೆ 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಸ್ವಲ್ಪ ಹೆಚ್ಚುವರಿ ವೇತನವನ್ನು ಪಡೆಯಲಿದ್ದಾರೆ.
ಮಾರ್ಚ್ ತಿಂಗಳ ಸಂಬಳದ ಜೊತೆಗೆ ಕಳೆದ ಎರಡು ತಿಂಗಳಿ ನಿಂದ ಹೆಚ್ಚಿದ ಡಿಎ ಹೆಚ್ಚಳ ಮತ್ತು ಬಾಕಿ ಹಣ ವನ್ನು ಸರ್ಕಾರ ವರ್ಗಾಯಿಸಲಿದೆ.ಶೇ.3 ರಷ್ಟು ಡಿಎ ಹೆಚ್ಚಳ ಎಂದರೆ ಕೇಂದ್ರ ಸರ್ಕಾರಿ ನೌಕರರ ಒಟ್ಟು ಡಿಎ 34% ಆಗಿರುತ್ತದೆ.ಇದರರ್ಥ ರೂ.18,000 ಮೂಲ ವೇತನ ಹೊಂದಿರುವ ಕೇಂದ್ರ ಸರ್ಕಾರಿ ಉದ್ಯೋಗಿ ವಾರ್ಷಿಕ 73,440 ರೂ. ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ.ಇನ್ನೂ ಡಿಎ ಹೆಚ್ಚಳದ ವಿಚಾರವಾಗಿ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರ ಮಾರ್ಚ್ 16 ರಂದು ಸಭೆ ನಡೆಸಲಿದೆ.ಈ ಸಂಬಂಧ ಹೋಳಿಗೆ ಮೊದಲು ಯಾವುದೇ ಸಮಯದಲ್ಲಿ ಕೇಂದ್ರ ಸರ್ಕಾರ ಅಧಿಕೃತ ಹೇಳಿಕೆಯನ್ನು ನೀಡಬಹುದು ಆದರೆ ಮಾರ್ಚ್ 16 ರಂದು ಅಂದರೆ ಹೋಳಿಗೆ ಮುಂಚೆಯೇ ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರವು ಹೊರ ಬರಬಹುದು ಎನ್ನಲಾಗು ತ್ತಿದೆ.ಡಿಎ ಹೆಚ್ಚಳದ ಜೊತೆಗೆ ಕೇಂದ್ರ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಇಂಗಿತ ವ್ಯಕ್ತಪಡಿ ಸಿದ್ದಾರೆ.ಒಂದು ವೇಳೆ ಮೋದಿ ಸರ್ಕಾರ ನೌಕರರ ಫಿಟ್ ಮೆಂಟ್ ಅಂಶವನ್ನು ಹೆಚ್ಚಿಸುವ ಬಗ್ಗೆ ಘೋಷಣೆ ಮಾಡಿ ದರೆ ಅದರ ಭಾಗವಾಗಿ ಅವರ ಸಂಬಳ ಹೆಚ್ಚಾಗುತ್ತದೆ. ಅಷ್ಟು ಮಾತ್ರವಲ್ಲ ಫಿಟ್ಮೆಂಟ್ ಅಂಶದ ಹೆಚ್ಚಳದೊಂದಿಗೆ, ಕನಿಷ್ಠ ವೇತನವೂ ಹೆಚ್ಚಾಗುತ್ತದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.