ನವದೆಹಲಿ –
ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನೀಡಲು ಮುಂದಾಗಿದ್ದು ಈ ಒಟ್ಟೊಟ್ಟಿಗೆ ಎರಡೆರೆಡು ಸುದ್ದಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ.ಹೌದು ನೌಕರರ ನಿವೃತ್ತಿ ವಯಸ್ಸು ಮತ್ತು ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಸರ್ಕಾರ ಮುಂದಾ ಗಿದೆ.ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಪರವಾಗಿ ಈ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ.

ಈ ಪ್ರಸ್ತಾವನೆಯಲ್ಲಿ ದೇಶದಲ್ಲಿ ಕೆಲಸ ಮಾಡಲು ವಯೋ ಮಿತಿಯನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ. ಪ್ರಧಾನಿ ಯವರ ಆರ್ಥಿಕ ಸಲಹಾ ಸಮಿತಿಯು ದೇಶದಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರ ಜೊತೆಗೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆಯನ್ನು ಪ್ರಾರಂಭಿಸಬೇಕು ಎಂದು ಹೇಳಿದೆ. ಸಮಿತಿ ಯ ವರದಿಯ ಪ್ರಕಾರ ಈ ಸಲಹೆಯ ಅಡಿಯಲ್ಲಿ, ಪ್ರತಿ ತಿಂಗಳು ನೌಕರರಿಗೆ ಕನಿಷ್ಠ 2000 ರೂ.ಪಿಂಚಣಿ ನೀಡ ಬೇಕು ಎಂದು ಆರ್ಥಿಕ ಸಲಹಾ ಸಮಿತಿಯು ದೇಶದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಉತ್ತಮ ವ್ಯವಸ್ಥೆಗಳನ್ನು ಶಿಫಾರಸ್ಸು ಮಾಡಿದ್ದು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.