ಬೆಂಗಳೂರು –
ಕೇಂದ್ರ ಸರ್ಕಾರದ ಮಾದರಿ ವೇತನದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಶಾಕ್ ನೀಡಿದ್ದಾರೆ.ಹೌದು ಈಗಾಗಲೇ ಬಜೆಟ್ ನಲ್ಲಿ 7ನೇ ವೇತನ ಹಾಗೇ OPS ಕುರಿತಂತೆ ಬೇಡಿಕೆಗಳು ಈಡೇ ರುತ್ತವೆ ಇವುಗಳನ್ನು ಘೋಷಣೆ ಮಾಡುತ್ತಾರೆ ಎಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು ಇದಾದ ನಂತರವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ತಾವೇ ಮಾತನಾಡಿ ಈ ಕುರಿತಂತೆ ರಾಜ್ಯದ ಯಾವುದೇ ಸರ್ಕಾರಿ ನೌಕರರು ಆತಂಕ ಪಡಬಾರದು ಶೀಘ್ರದಲ್ಲೆ ಇಧನ್ನು ಜಾರಿ ಮಾಡಲಾಗುತ್ತದೆ ಎಂದಿದ್ದರು.ಇದರ ನಡುವೆ ಈಗ ಮುಖ್ಯಮಂತ್ರಿ ಮತ್ತೆ ಶಾಕ್ ನೀಡಿದ್ದಾರೆ.

ವಿಧಾನಸೌಧ ದಲ್ಲಿ ಕೈ ಪಕ್ಷದ ಶಾಸಕ ಡಾ ಅಜಯ ಧರ್ಮಸಿಂಗ್ ಅವರು ಕೇಂದ್ರ ಸರ್ಕಾರದ ಮಾದರಿಯ ವೇತನ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯ ಆಗುತ್ತದೆ ನಾ ಯಾವಾಗ ಜಾರಿಗೆ ಬರುತ್ತದೆ ಎಂದು ಕೇಳಿದರು ಆದರೆ ಮುಖ್ಯಮಂತ್ರಿ ಇದ್ಯಾವುದು ಅನ್ವಯಿಸುವುದಿಲ್ಲ ಎಂದು ಹೇಳಿ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ ನೀಡಿದರು. ಮೊನ್ನೆ ಮೊನ್ನೆ ಯಷ್ಟೇ ಶಿವಮೊಗ್ಗ ದಲ್ಲಿ ಬೆಂಗಳೂರಿನಲ್ಲಿ ಒಂದು ಮಾತು ಹೇಳಿದ್ದ ಅವರು ಈಗ ಮತ್ತೆ ಬೇರೆ ಹೇಳಿ ಶಾಕ್ ನೀಡಿದ್ದಾರೆ.

