ಬೆಂಗಳೂರು –
ಶಾಸಕರ ಅವರಿವರ ಅನುಕಂಪದ ಪಡೆದುಕೊಂಡು ವರ್ಗಾವಣೆ ಸಿಗದೇ ಪರದಾಡುತ್ತಿದ್ದ ರಾಜ್ಯದ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.ಹೌದು ವರ್ಗಾವಣೆ ನೀತಿಯಲ್ಲಿ ಮುಖ್ಯಮಂತ್ರಿ ಕೊಂಚ ಬದಲಾವಣೆಯನ್ನು ಮಾಡಿದ್ದಾರೆ. ಹೀಗಾಗಿ ಹೊಸ ಬದಲಾವಣೆಯನ್ನು ಮಾಡಿ ರುವ ಸಿಎಂ ಇನ್ನೂ ಮುಂದೆ ಸಚಿವರೇ ವರ್ಗಾವಣೆ ಮಾಡಬಹುದು ಎಂದು ಆದೇಶ ಮಾಡಿ ಸೂಚನೆ ನೀಡಿದ್ದಾರೆ.

ಹೌದು ಬಿ, ಸಿ ಮತ್ತು ಡಿ ವೃಂದದ ಖಾಲಿ ಇರುವ ಹುದ್ದೆ ಗಳಿಗೆ ಇಲಾಖೆ ಸಚಿವರೇ ತಮ್ಮ ಹಂತದಲ್ಲಿ ವರ್ಗಾವಣೆ ಆದೇಶ ಹೊರಡಿಸಬೇಕು. ತೆರವಾಗುವ ಹುದ್ದೆಗಳಿಗೆ ಯಾವುದೇ ವರ್ಗಾವಣೆ ಆದೇಶ ಹೊರಡಿಸಬಾರದೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯ ದರ್ಶಿ ಪಿ.ರವಿಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.ಎ ವೃಂದದ ಖಾಲಿ ಹುದ್ದೆಗಳಲ್ಲಿನ ಸ್ಥಳ ನಿಯುಕ್ತಿಗೆ ಸಂಬಂಧಿ ಸಿದ ಪ್ರಸ್ತಾವಗಳನ್ನು ಮಾತ್ರ ಸಿಎಂ ಕಚೇರಿಗೆ ಸಲ್ಲಿಸಬೇಕು ಎಂದು ಸಿಎಂ ತಿಳಿಸಿದ್ದಾರೆ.ನಿಯಮಿತ ಸ್ವರೂಪದ ವರ್ಗಾವಣೆ ಕೋರಿಕೆ ಫೈಲ್ ಗಳನ್ನು ಸಿಎಂ ಕಚೇರಿಗೆ ಕಳುಹಿಸುತ್ತಿರುವುದಕ್ಕಾಗಿ ಆಕ್ಷೇಪಿಸಿ ಟಿಪ್ಪಣಿ ಹೊರಡಿಸಿ ರುವ ಸಿಎಂ ಇಂತಹ ಬೆಳವಣಿಗೆ ನಿಲ್ಲದಿದ್ದರೆ ಇಲಾಖೆಗಳಲ್ಲಿ ಕೆಲಸ ಕುಂಠಿತವಾಗುತ್ತದೆ ಎಂದಿದ್ದಾರೆ.
ಇನ್ನೂ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ವರ್ಗಾವಣೆ ನೀತಿಯಲ್ಲಿ ಕೆಲವು ಬದಲಾವಣೆ ತರುವಂತೆ ಅವರು ಮುಖ್ಯ ಕಾರ್ಯ ದರ್ಶಿಗೆ ಸೂಚಿಸಿದ್ದಾರೆ. ಇಲಾಖೆ ಸಚಿವರ ಹಂತದಲ್ಲಿ ಬಿ,ಸಿ,ಡಿ ವೃಂದದ ವರ್ಗಾವಣೆ ಆದೇಶ ಹೊರಡಿಸಬೇಕು ಎಂದು ಹೇಳಲಾಗಿದೆ.ಇನ್ನೂ ಇದು ಒಂದು ವಿಚಾರದ ವಾದರೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಸರ್ಕಾರಿ ನೌಕರರಾಗುತ್ತಿದ್ದು ಇವರಿಗೆ ಮಾತ್ರ ವರ್ಗಾವಣೆಯ ನೀತಿ ಬೇರೆಯಾಗಿದೆ. ಒಂದು ಕಡೆಗೆ ಇವರು ಕೂಡಾ ಸರ್ಕಾರಿ ನೌಕರರಾದರು ಕೂಡಾ ಇವರಿಗೊಂದು ಕಾನೂನು ಇನ್ನೂಳಿದ ಸರ್ಕಾರಿ ನೌಕರರಿಗೊಂದು ಕಾನೂನು ಹೀಗಾಗಿ ಈ ಕುರಿತಂತೆ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಈ ಕುರಿತಂತೆ ಮಾರ್ಪಾಡನ್ನು ಮಾಡಿ ಏಕರೂಪದ ವರ್ಗಾವಣೆಯ ನೀತಿ ಜಾರಿಗೆ ತರಲು ಮುಂದಾಗಿ ವರ್ಗಾವಣೆ ಸಿಗದೇ ಪರದಾಡುತ್ತಿರುವ ನಾಡಿನ ಶಿಕ್ಷಕರುಗಳಿಗೆ ಈ ಮೂಲಕ ನೆಮ್ಮದಿಯನ್ನು ನೀಡಬೇಕು ಕೇವಲ ಸರ್ಕಾರಿ ನೌಕರರಾದರೆ ಸಾಲದು ಕಾರ್ಯರೂಪ ದಲ್ಲಿ ಬರಲಿ ಎಂಬೊದು ನಮ್ಮ ಆಶಯವಾಗಿದ್ದು ಆ ಕೆಲಸವನ್ನು ಮಾಡಿದರೆ ಷಡಾಕ್ಷರಿ ಅವರನ್ನು ಈಗಾಗಲೇ ನಮ್ಮ ನಾಯಕರು ಎನ್ನುತ್ತಿರುವ ನಾಡಿನ ಶಿಕ್ಷಕರು ಅವರ ಬಗ್ಗೆ ಇನ್ನಷ್ಟು ಹೆಮ್ಮೆ ಪಡತಾರೆ