ಬೆಂಗಳೂರು –
ಬೆಟ್ಟದಷ್ಟು ನಿರೀಕ್ಷೆಯನ್ನು ಹುಸಿಗೊಳಿಸಿದ ಮಹಾ ಸಮ್ಮೇಳನ – ಮೂರರಲ್ಲಿ ಏನಾದರೂ ಸಿಗುತ್ತದೆ ಎಂದುಕೊಂಡಿದ್ದ ನೌಕರರಿಗೆ ನಿರಾಶೆ ಮಾಡಿದ ಮುಖ್ಯಮಂತ್ರಿ ಹೌದು
ಹೌದು ಏಳು ವರ್ಷಗಳ ನಂತರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನು ರಾಜ್ಯದ ಮೂಲೆ ಮೂಲೆಗ ಳಿಂದ ತೆರಳಿದ್ದ ನೌಕರರು ಯಶಸ್ವಿ ಮಾಡಿದ್ದಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ದೂರದ ಊರುಗಳಿಂದ ನಿದ್ದೆಯಿಲ್ಲದೇ ಎಲ್ಲೇಂದರದಲ್ಲಿ ಸ್ನಾನ ಮಾಡಿ ಸಿಕ್ಕಿದ್ದನ್ನು ತಿಂದುಕೊಂಡು ಸರಿಯಾದ ಸಮಯಕ್ಕೆ ಹೋಗಿ ಮಹಾ ಸಮ್ಮೇಳನಕ್ಕೆ ಹಾಜರಾಗಿದ್ದಾರೆ.
ಏನೇನು ಕಷ್ಟವನ್ನು ಅನುಭವಿಸಿ ತಮ್ಮದೆಯಾದ ಮಹಾ ಸಮ್ಮೇಳನವನ್ನು ರಾಜ್ಯ ಸರ್ಕಾರಿ ನೌಕರರು ಸಕ್ಸಸ್ ಮಾಡಿದ್ದು ಒಂದು ವಿಚಾರ ವಾದರೆ ಇನ್ನೂ ಬೆಟ್ಟದಷ್ಟು ಆಸೆ ಇಟ್ಟುಕೊಂಡು ದೂರದ ಬೆಂಗಳೂರಿಗೆ ಹೋಗಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಈ ಒಂದು ಸಮ್ಮೇಳನ ನಿಜಕ್ಕೂ ಕೂಡಾ ದೊಡ್ಡ ನಿರಾಶೆಯನ್ನುಂಟು ಮಾಡಿದೆ. ಹೌದು ನೌಕರರ ಸಂಘದ ರಾಜ್ಯ ಅಧ್ಯಕ್ಷರೇ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಭಾಗವಹಿಸಿ ರಾಜ್ಯ ಸರ್ಕಾರಿ ನೌಕರರು ತಮಗೆ ಬೆಂಬಲ ನೀಡಿದ್ದಾರೆ.ಆದರೆ ಇವತ್ತಿನ ಸಮ್ಮೇಳನ ದಲ್ಲಿ ಮುಖ್ಯಮಂತ್ರಿಗಳು ಏಳನೇ ವೇತನ ಆಯೋಗದ ವರದಿಯ ಜಾರಿಯ ಕುರಿತು ಚಕಾರ ಎತ್ತಲಿಲ್ಲ
ಈ ಹಿಂದೆ ಹೇಳಿರುವ ವಿಚಾರವನ್ನೇ ಮತ್ತೆ ಇವತ್ತು ವೇದಿಕೆಯ ಮೇಲೆ ಅದನ್ನು ಹೇಳಿದ್ದಾರೆ.7ನೇ ವೇತನ ಆಯೋಗದ ವಿಚಾರದಲ್ಲಿ ಯಾವುದು ಹೊಸ ವಿಚಾರ ಕಂಡು ಬರಲಿಲ್ಲ ಕೇಳಿ ಬರಲಿಲ್ಲ ನೌಕರರು ಈ ಒಂದು ಕುರಿತಂತೆ ಸಮಾರಂಭದಲ್ಲಿ ಒಂದಿಷ್ಟು ಜೋರಾಗಿ ಧ್ವನಿ ಎತ್ತಿದಾಗ ಸ್ಪಂದಿಸಿ ಆಯಿತಪಾ ನಮಗೂ ಗೊತ್ತಿದೆ ನಿಮ್ಮ ಸಮಸ್ಯೆ ಅರ್ಥವಾಗುತ್ತದೆ ಕೂಡಲೇ ಕೂಡಲೇ ವೇತನ ಆಯೋಗದ ಅಧ್ಯಕ್ಷರಿಗೆ ವರದಿಯನ್ನ ನೀಡು ವಂತೆ ಹೇಳುತ್ತೇನೆ ವರದಿ ಬಂದ ಕೂಡಲೇ ನಿಮ್ಮೊಂದಿಗೆ ಕುಳಿತುಕೊಂಡು ಚರ್ಚೆಯನ್ನು ಮಾಡುತ್ತೇನೆ ಎಂದು ಹೇಳಿದರು.
ಹೀಗಾಗಿ ಇವತ್ತು ಈ ಒಂದು ಮಹಾ ಸಮ್ಮೇಳ ನದಲ್ಲಿ 7 ನೇ ವೇತನ ಆಯೋಗವನ್ನು ಮುಖ್ಯ ಮಂತ್ರಿ ಘೋಷಣೆ ಮಾಡುತ್ತಾರೆ ಎಂದುಕೊಂಡಿ ದ್ದರು ಆದರೆ ಘೋಷಣೆ ಯನ್ನು ಮಾಡಲಿಲ್ಲ ಆ ಕುರಿತಂತೆ ಯಾವುದೇ ಸ್ಪಷ್ಟವಾದ ಭರವಸೆ ಯನ್ನು ಕೂಡಾ ನೀಡಲಿಲ್ಲ ಈ ಹಿಂದೆ ಹೇಳಿರುವ ವಿಚಾರವನ್ನೇ ಮತ್ತೆ ಇವತ್ತು ಹೇಳಿ ದೂರದ ಊರುಗಳಿಂದ ಬೆಟ್ಟದಷ್ಟು 7ನೇ ವೇತನ ಆಯೋಗದ ಬಗ್ಗೆ ಇಟ್ಟುಕೊಂಡಿದ್ದ ಆಸೆಯನ್ನು ಮುಖ್ಯಮಂತ್ರಿಗಳು ಹುಸಿಗೊಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯದ ಸರ್ಕಾರಿ ನೌಕರರು ಮುಖ್ಯಮಂತ್ರಿ ವಿರುದ್ದ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ನಾಯಕರ ವಿರುದ್ದ ಅಸಮಾ ಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..