ಆ ಸರ್ಕಾರಿ ಶಾಲೆಯ ಮಕ್ಕಳು ಅಸ್ವಸ್ಥ – ಆತಂಕದಲ್ಲಿ ಶಾಲೆಯ ಮಕ್ಕಳು ಶಿಕ್ಷಕರು ಏನಾಗಿದೋ ಏನೋ…..

Suddi Sante Desk

ರಾಮನಗರ –

ಸರ್ಕಾರಿ ಶಾಲೆಯ ಹತ್ತಕ್ಕೂ ಹೆಚ್ಚು ಮಕ್ಖಳು ಅಸ್ವಸ್ಥ ಗೊಂಡ ಘಟನೆ ರಾಮನಗರ ದಲ್ಲಿ ನಡೆದಿದೆ.ಜಿಲ್ಲೆಯ ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಅಸ್ವಸ್ಥ ರಾಗಿದ್ದಾರೆ.ಕೆಮ್ಮು,ಹೊಟ್ಟೆನೋವು,ನೆಗಡಿಯಿಂದ ಮಕ್ಕಳು ಬಳಲುತ್ತಿದ್ದಾರೆ

ಸಧ್ಯ 8 ಮಕ್ಕಳು ಅಸ್ವಸ್ಥರಾಗಿದ್ದಾರೆ.ಇದು ಪೋಷಕರಲ್ಲಿ ಸಹಜವಾಗಿಯೇ ಆತಂಕ ಉಂಟಾಗಿದೆ.ಇನ್ನೂ ಅಸ್ವಸ್ಥ ಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಶಾಲೆಯ ಶಿಕ್ಷಕ ಬಂಧುಗಳು. ಚಿಕಿತ್ಸೆ ನೀಡುತ್ತಿದ್ದಾರೆ ಸದ್ಯ ಮಕ್ಕಳು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ.ಮಕ್ಕಳ ಅಸ್ವಸ್ಥತೆಗೆ ನಿಖರ ಕಾರಣ ಏನು ಎಂಬ ಕುರಿತು ಇಲಾಖೆಯ ಅಧಿಕಾರಿಗಳು ತನಿಖೆ ಮಾಡತಾ ಇದ್ದಾರೆ. ಈವರೆಗೆ ಈ ಒಂದು ವಿಚಾರ ಕುರಿತು ಇನ್ನು ತಿಳಿದು ಬಂದಿಲ್ಲ.ಆದ್ರೆ ಮಕ್ಕಳ ಊಟದ ಲ್ಲೋ ಅಥವಾ ಹಾಲಿನ ಪೌಡರ್ ನಿಂದಲೋ ಹೀಗೆ ಫುಡ್ ಪಾಯಿಸನ್ ಆಗಿರಬಹುದು ಎನ್ನಲಾಗಿದೆ.

ನಿನ್ನೆಯಷ್ಟೆ ದಾವಣಗೆರೆಯ ಜಗಳೂರು ವಸತಿ ವಸತಿ ಶಾಲೆಯಲ್ಲೂ 95 ಮಕ್ಕಳು ಅಸ್ವಸ್ಥರಾಗಿದ್ದರು.ರಾತ್ರಿ ಊಟ,ಬೆಳಗ್ಗೆ ಚಿತ್ರಾನ್ನ ತಿಂದಿದ್ದ ಮಕ್ಕಳು ವಾಂತಿ, ಬೇಧಿ ಮಾಡಿಕೊಂಡು ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದವು‌. ಇದೀಗ ರಾಮನಗರದ ಸರ್ಕಾರಿ ಶಾಲೆಯಲ್ಲಿ ಇಂಥದ್ದೇ ಘಟನೆ ಸಂಭವಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.