ಉಡುಪಿ –
ರಸ್ತೆಯಲ್ಲಿ ಬಿದ್ದಿದ್ದ 10 ಸಾವಿರ ನಗದನ್ನು ಮುಖ್ಯೋಪಾ ಧ್ಯಾಯರ ಮೂಲಕ ಉಡುಪಿ ಸರ್ಕಾರಿ ಶಾಲಾ ವಿದ್ಯಾರ್ಥಿ ಗಳು ವಾರಸುದಾರರಿಗೆ ಹಿಂದಿರುಗಿಸಿದ ಘಟನೆ ಉಡುಪಿ ಯಲ್ಲಿ ನಡೆದಿದೆ.ಹೌದು ಈ ಮೂಲಕ ಮಕ್ಕಳ ಕಾರ್ಯಕ್ಕೆ ಮುಖ್ಯೋಪಾಧ್ಯಾಯರು,ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ.ರಸ್ತೆಯಲ್ಲಿ ಹಣ ಸಿಕ್ಕರೆ ಅದನ್ನು ಜೇಬಿಗಿಳಿಸಿ ಯಾರಿಗೂ ವಿಷಯ ಗೊತ್ತಾಗದಂತೆ ನೋಡಿಕೊಳ್ಳುವವರೇ ಹೆಚ್ಚು.ಆದ್ರೆ ಇಲ್ಲಿನ ವಿದ್ಯಾರ್ಥಿಗಳು ಈ ಮಾತಿಗೆ ಅಪವಾದ ಎಂಬಂತಹ ಕೆಲಸವನ್ನು ಮಾಡಿದ್ದಾರೆ.ತಮಗೆ ಸಿಕ್ಕಿದ್ದ 10 ಸಾವಿರ ನಗದನ್ನು ಮುಖ್ಯೋಪಾಧ್ಯಾಯರಿಗೆ ಒಪ್ಪಿಸಿ ಬಳಿಕ ಅದನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮಾನವೀಯತೆ ಜೊತೆಗೆ ಪ್ರಾಮಾಣಿಕತೆಗೂ ಸಾಕ್ಷಿಯಾಗಿದ್ದಾರೆ.

ಇದರೊಂದಿಗೆ ಹಣ ಹಿಂದಿರುಗಿಸಿ ಮಾನವೀಯತೆ ಮೆರೆದಿ ದ್ದಾರೆ ಉಡುಪಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಪ್ರೌಢಶಾಲಾ ವಿದ್ಯಾರ್ಥಿ ಗಳು ತರಗತಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು.ಈ ವೇಳೆ ರಸ್ತೆಯಲ್ಲಿ 10 ಸಾವಿರ ನಗದು ಸಿಕ್ಕಿದೆ.ಕೂಡಲೇ ವಿದ್ಯಾರ್ಥಿನಿಯರು ತಮ್ಮ ಶಾಲೆಯ ಮುಖ್ಯೋಪಾಧ್ಯಾ ಯರಿಗೆ ಇದನ್ನು ನೀಡಿದ್ದಾರೆ.ಬಳಿಕ ಮುಖ್ಯೋಪಾಧ್ಯಾ ಯರು ವಾಟ್ಸಪ್ ಮೂಲಕ ಹಣ ಸಿಕ್ಕಿರುವ ಕುರಿತಾಗಿ ಮಾಹಿತಿ ನೀಡಿದ್ದರು.ಇದನ್ನು ತಿಳಿದ ಹಣ ಕಳೆದುಕೊಂಡಿದ್ದ ಅದೇ ಗ್ರಾಮದ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಸುರೇಖಾ ಅವರು ಶಾಲೆಗೆ ಬಂದು ಸೂಕ್ತ ದಾಖಲೆ ಗಳನ್ನು ನೀಡಿ ಹಣ ಪಡೆದಿದ್ದಾರೆ.ಇನ್ನೂ ಹಣವನ್ನು ತಗೆದು ಕೊಂಡ ಹಾಗೇ ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳಿಗೆ ಸುರೇಖಾ ಧನ್ಯವಾದ ಅರ್ಪಿಸಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು.ಇದೇ ವೇಳೆ ಮಕ್ಕಳ ಕಾರ್ಯಕ್ಕೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.