ಸರ್ಕಾರಿ ಶಾಲಾ ಕಟ್ಟಡ ಕುಸಿತ ಅಪಾಯದಿಂದ ಪಾರಾದ ಮಕ್ಕಳು ಕುಸಿತಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕರು…..

Suddi Sante Desk

ಕೋಲಾರ –

  • ನಿರಂತರವಾದ ಮಳೆಗೆ ಸರ್ಕಾರಿ ಶಾಲೆಯ ಕಟ್ಟಡವೊಂದು ಕುಸಿತಗೊಂಡ ಘಟನೆ ಕೋಲಾರ ದಲ್ಲಿ ನಡೆದಿದೆ.ಹೌದು ಬಿಟ್ಟು ಬಿಡಲಾರದ ಮಳೆಗೆ ಶಾಲಾ ಕಟ್ಟಡ ಕುಸಿತವಾಗಿದೆ.
  • ಕೋಲಾರ ಜಿಲ್ಲೆಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ದುರಂತದಲ್ಲಿ ವಿದ್ಯಾರ್ಥಿ ಗಳು ಅಪಾಯದಿಂದ ಪಾರಾಗಿದ್ದಾರೆ.
  • ತಿಪ್ಪೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿತವಾಗಿದೆ.ಇನ್ನೂ ಕಟ್ಟಡ ಕುಸಿತಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠವನ್ನು ಮಾಡುತ್ತಿದ್ದರು
  • ಕಟ್ಟಡ ಕುಸಿತ ನೋಡಿ ಮಕ್ಕಳನ್ನ ಕೂಡಲೇ ಎಚ್ಚೆತ್ತು ಕೊಂಡು ಶಾಲೆಯಿಂದ ಹೊರಗೆ ಕಳುಹಿಸಿದ್ದಾರೆ ಶಿಕ್ಷಕರು.ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಕಟ್ಟಡದಲ್ಲಿ ಪಾಠ ಕೇಳುತ್ತಿದ್ದರು.

ಇನ್ನೂ ಮುಖ್ಯವಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಶಿಥಿಲಗೊಂಡಿದ್ದ ಶಾಲಾ ಕಟ್ಟಡ ನಿರಂತರ ಮಳೆಗೆ ಬಿದ್ದಿದ್ದು ಅದೃಷ್ಟವಶಾತ್ ದೇವರು ಒಳಗಡೆ ಇದ್ದ ದೇವರಂತ ಮಕ್ಕಳನ್ನು ಶಿಕ್ಷಕರನ್ನು ಕಾಪಾಡಿದ್ದು ದೊಡ್ಡ ಅವಘಡ ತಪ್ಪಿದಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.