ಪಡುಬಿದ್ರಿ –
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಯೊಂದಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳೊಂ ದಿಗೆ ಸಮಸ್ಯೆ ಆಲಿಸಿದರು ಹೌದು ಸರ್… ಮೇಡಂ… ಆಚೆ ತರಗತಿ ಸೋರುತ್ತಿದೆ ಕುಳಿತುಕೊಳ್ಳಲು ಆಗುತ್ತಿಲ್ಲ ಎಂದು ಎಲ್‌ಕೆಜಿ,ಯುಕೆಜಿ ಮಕ್ಕಳೆಲ್ಲಾ ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಾರೆ.ಬೆಂಚ್ ಇಲ್ಲದೇ ಮಕ್ಕಳೆಲ್ಲಾ ನೆಲ ದಲ್ಲೇ ಕುಳಿತುಕೊಳ್ಳುತ್ತಾರೆ.ಹೀಗೆ ಮೂಲಸೌಕರ್ಯವಿ ಲ್ಲದೇ ಪರದಾಡುತ್ತಿರುವುದು ಪಡುಬಿದ್ರಿಯ ಕೆಪಿಎಸ್ ಶಾಲೆಯ ಮಕ್ಕಳು ಜಿಲ್ಲಾಧಿಕಾರಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು
ಪಡುಬಿದ್ರಿ ಪರಿಸರದಲ್ಲಿ ಮಳೆ ಮುನ್ನೆಚ್ಚರಿಕೆಯ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ಶಿಕ್ಷಕಿಯರು ಶಾಲೆಯ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿದರು ಪಡುಬಿ ದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಕ್ಕಳೊಂದಿಗೆ ಕೂರ್ಮರಾವ್ ಸಮಯ ಕಳೆದರು.ಕೆಲಕಾಲ ಮಕ್ಕಳೊಂ ದಿಗೆ ಮಾತುಕತೆ ನಡೆಸಿ ಅವರಿಂದ ಹಾಡು ಕೇಳಿದರು. ಇಬ್ಬರು ಹುಡುಗರು ಜಿಲ್ಲಾಧಿಕಾರಿ ಮುಂದೆ ಬಂದು ಇಂಗ್ಲಿಷ್ ಪ್ರಾಸ ಹೇಳುವ ಮೂಲಕ ಗಮನ ಸೆಳೆದರು.
ಇನ್ನೂ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ ಗೊಂಡು ಮೂರು ವರ್ಷ ಕಳೆದಿದೆ.ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಆದರೆ ಶಾಲೆ ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿದೆ.ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.