ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ವಿಚಾರ ಕುರಿತು ಈಗಾಗಲೇ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ ಈ ಒಂದು ಯೋಜನೆ ಜಾರಿಗೆ ಕುರಿತು ಈಗಾಗಲೇ ಸಮಿತಿಗೆ ರಾಜ್ಯ ಸರ್ಕಾರ ಮತ್ತೆ 6 ತಿಂಗಳುಗಳ ಸಮಯಾವಕಾಶವನ್ನು ನೀಡಿದೆ
ಇನ್ನೂ ಏಳನೇ ವೇತನ ಆಯೋಗವನ್ನು ಜಾರಿಗೆ ತರೋದು ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿಗಳಿಗೆ ಆದಾಯ ವನ್ನು ವ್ಯವಸ್ಥೆ ಮಾಡಲು ಹೆಣಗಾಡುತ್ತಿರುವಾಗ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಮತ್ತೊಂದು ಸವಾಲನ್ನು ಎದುರಿಸಬಹುದು.
ಆಯೋಗವು ಮುಂದಿನ ಕೆಲವು ವಾರಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.ಇದು ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವನ್ನು ಶಿಫಾರಸು ಮಾಡುತ್ತದೆ.ಇದು ರಾಜ್ಯದ ಬೊಕ್ಕ ಸಕ್ಕೆ 12,000 ಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆಯನ್ನು ಉಂಟುಮಾಡಬಹುದಾಗಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..