ಕಲಬುರಗಿ –
ಸಾಮಾನ್ಯವಾಗಿ ಎದುರಿಗೆ ಇಲ್ಲವೆ ನಮ್ಮ ಅಕ್ಕ ಪಕ್ಕದಲ್ಲಿ ಹಾವುಗಳು ಕಂಡು ಕಂಡರೆ ಕೊಲ್ಲುತ್ತೆವೆ ಇಲ್ಲಿವೆ ಬಡಿಯುತ್ತೆವೆ ಇದಕ್ಕಿಂತ ಮುಂಚೆ ನಾವು ಹೆದರುತ್ತೇವೆ ಆದರೆ ಇಲ್ಲೊಂದು ಕಡೆ ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಎತ್ತಿ ನಾಗರಹಾವು ಕುಳಿತು ಕೊಂಡಿದ್ದು ಇದನ್ನು ನೋಡಿ ಏನನ್ನೂ ಮಾಡದೇ ಮಹಿಳೆಯೊಬ್ಬಳು ದೇವರನ್ನು ನೆನೆದೊಡನೆ ಹಾವು ಅಲ್ಲಿಂದ ಹೋದ ಘಟನೆ ಕಲಬುರಗಿ ಜಿಲ್ಲೆಯ ಮಲ್ಲಾಬಾದ್ ಗ್ರಾಮದಲ್ಲಿ ಪವಾಡ ರೀತಿಯಲ್ಲಿ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದ ಭಾಗಮ್ಮ ಬಡದಾಳ್ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ.ತಮ್ಮ ಜಮೀನಿನಲ್ಲಿ ಭಾಗಮ್ಮ ಮಲಗಿದ್ದಾಗ ಮೈ ಮೇಲೆ ಹೆಡೆಎತ್ತಿ ನಾಗರಹಾವು ಕುಳಿತು ಕೊಂಡಿದೆ.ಈ ವೇಳೆ ಮಹಿಳೆ ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತಾ ಭಾಗಮ್ಮ ಪ್ರಾರ್ಥಿಸಿದ್ದಾಳೆ.ಕೆಲಹೊತ್ತು ಭಾಗಮ್ಮನ ಮೇಲೆ ಹಾವು ಹತ್ತಿ ಕುಳಿತು ನಂತರ ಸ್ಥಳದಿಂದ ನಾಗರ ಹಾವು ಕಾಲ್ಕಿತ್ತಿದ್ದಾಳೆ.ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.
ಜಮೀನಿನಲ್ಲಿ ಮಲಗಿದ್ದ ಮಹಿಳೆಯೊಬ್ಬರ ಮೇಲೆ ನಾಗರ ಹಾವು ಹೆಡೆ ಎತ್ತಿ ಕುಳಿತಿದೆ.ಕೆಲಸ ಮಾಡಿದ ಬಳಿಕ ವಿಶ್ರಾಂ ತಿಗಾಗಿ ಭಾಗಮ್ಮ ತಮ್ಮ ಜಮೀನಿನಲ್ಲಿ ಮಲಗಿದ್ದರು.ಈ ವೇಳೆ ಎಲ್ಲಿಂದಲೋ ಬಂದ ನಾಗರಹಾವು ಅವರ ಮೈಮೇಲೆ ಹರಿದಾಡಿದ್ದು ಬಳಿಕ ಹೆಡೆ ಎತ್ತಿ ಕುಳಿತುಕೊಂ ಡಿದೆ.ಇದನ್ನು ನೋಡಿ ಏನನ್ನೂ ಮಾಡದ ಭಾಗಮ್ಮ ದೇವರನ್ನು ನೆನೆದು ಪ್ರಾರ್ಥನೆ ಮಾಡಿದ್ದಾರೆ.
ಮೈಮೇಲೆ ನಾಗರಹಾವು ಇರುವುದನ್ನು ಕಂಡ ಭಾಗಮ್ಮ ನವರು ಬೆಚ್ಚಿಬಿದ್ದಿದ್ದಾರೆ.ಈ ವೇಳೆ ಅಲ್ಲಾಡದೆ ಮಲಗಿದ್ದ ಸ್ಥಳದಲ್ಲಿಯೇ ಮಲಗಿಕೊಂಡು ಕೈಮುಗಿದು ದೇವರಲ್ಲಿ ಪ್ರಾರ್ಥಿಸಿದ್ದಾರೆ.ನನ್ನನ್ನು ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತಾ ಪ್ರಾರ್ಥಿಸಿದ್ದಾರೆ.ಭಾಗಮ್ಮರ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.ವಿಡಿಯೋದಲ್ಲಿ ಮಹಿಳೆ ಕೈಮುಗಿದು ಪ್ರಾರ್ಥಿಸುತ್ತಿರುವುದನ್ನು ನೀವು ಕಾಣಬಹುದು.ನಾಗರಹಾವು ಸಹ ಮಹಿಳೆಗೆ ಏನೂ ಮಾಡದೆ ಹೆಡೆ ಎತ್ತಿ ಭುಸುಗುಟ್ಟಿದೆ.ಕೆಲಹೊತ್ತಿನ ನಂತರ ಭಾಗಮ್ಮರ ಮೈಮೇಲಿಂದ ಕೆಳಗೆ ಇಳಿದ ನಾಗರಹಾವು ಸ್ಥಳದಿಂದ ಮಾಯವಾಗಿದೆ.ಸದ್ಯ ಮಹಿಳೆ ಮೇಲೆ ನಾಗರ ಹಾವು ಹೆಡೆ ಎತ್ತಿ ಕುಳಿತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಭಾಗಮ್ಮನವರು ತಮ್ಮ ಹೋದ ಜೀವ ವಾಪಸ್ ಬಂದಂತಾಗಿದೆ.ಕೈಮುಗಿದ ಪ್ರಾರ್ಥಿಸಿದ್ದರಿಂದ ದೇವರೇ ನನ್ನನ್ನು ಕಾಪಾಡಿದ್ದಾನೆ ಎಂದು ಹೇಳಿದ್ದು ಇವರ ಪ್ರಾರ್ಥನೆ ಜೀವನವನ್ನು ಉಳಿಸಿದೆ.























