ಬೆಂಗಳೂರು –
ಏಪ್ರಿಲ್ 23ರಿಂದ ಪ್ರಾರಂಭವಾಗಿರುವ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿ ಸಲಾಗಿರುವ ಶಿಕ್ಷಕರಲ್ಲಿ ಕೆಲವರು ಗೈರು ಹಾಜರಾಗಿದ್ದು ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಉತ್ತರ ಪತ್ರಿಕೆಗಳ ಮೌಲ್ಯಮಾ ಪನ ಕಾರ್ಯವು ಶೈಕ್ಷಣಿಕ ಚಟುವಟಿಕೆಗಳ ಒಂದು ಭಾಗ ವಾಗಿದೆ.ಯಾವುದೇ ಸಮಯದಲ್ಲಿ ಮಂಡಳಿಯು ನಡೆಸು ವ ಎಸ್‍ಎಸ್‍ಎಲ್‍ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಯಾವುದೇ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನಾಗಲಿ ಅಥವಾ ಸಹಶಿಕ್ಷಕರ ನ್ನಾಗಲೀ ನಿಯೋಜನೆ ಮಾಡಿದಾಗ ಅಂತಹ ಕಾರ್ಯಕ್ಕೆ ತಪ್ಪದೇ ಹಾಜರಾಗುವುದು ಅವರ ಕರ್ತವ್ಯವಾಗಿದೆ.

ಒಂದು ವೇಳೆ ಅನಿವಾರ್ಯ ಕಾರಣಕ್ಕಾಗಿ ಗೈರಾಗುವ ಮೌಲ್ಯಮಾಪಕರು ಜಿಲ್ಲಾ ಉಪನಿರ್ದೇಶಕರು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯ ಬೇಕು.ಆದರೆ ಕೆಲವು ಶಿಕ್ಷಕರು ಪೂರ್ವಾನುಮತಿ ಪಡೆ ಯದೇ ಮೌಲ್ಯಮಾಪನ ಕಾರ್ಯಕ್ಕೆ ಗೈರು ಹಾಜರಾಗಿದ್ದಾರೆ
ಇದರಿಂದ ಮೌಲ್ಯಮಾಪನ ಕಾರ್ಯವು ವಿಳಂಬವಾಗಿ ಸಾಗುತ್ತಿದೆ.ಫಲಿತಾಂಶವನ್ನು ಪ್ರಕಟಿಸಲು ಸಹ ಅನಾನು ಕೂಲವಾಗುತ್ತಿದೆ ಎಂದು ಮಂಡಳಿ ಅಸಮಾಧಾನ ವ್ಯಕ್ತಪ ಡಿಸಿದೆ.ಮೌಲ್ಯಮಾಪನ ಕಾರ್ಯ ಕಡ್ಡಾಯವಾಗಿದ್ದರೂ ಕೆಲವು ಶಿಕ್ಷಕರು ಹಾಜರಾಗದೇ ಇರುವುದು ಕರ್ತವ್ಯ ನಿರ್ಲಕ್ಷ್ಯವಾಗಿದೆ.ಹೀಗಾಗಿ ಗೈರಾದ ಶಿಕ್ಷಕರ ವಿರುದ್ಧ ಕೈಗೊಂಡ ಕ್ರಮದ ಕುರಿತು ಮಂಡಳಿಗೆ ಮಾಹಿತಿ ನೀಡಲು ಆಯಾ ಜಿಲ್ಲಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.