ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ವಾಹನಗಳಲ್ಲಿಯೇ ಶೈಕ್ಷಣಿಕ ಪ್ರವಾಸ – ಖಾಸಗಿ ವಾಹನ,ಮಿನಿ ಬಸ್ ಗಳಲ್ಲಿ ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಿದ ಆಯುಕ್ತರು…..

Suddi Sante Desk
ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ವಾಹನಗಳಲ್ಲಿಯೇ ಶೈಕ್ಷಣಿಕ ಪ್ರವಾಸ – ಖಾಸಗಿ ವಾಹನ,ಮಿನಿ ಬಸ್ ಗಳಲ್ಲಿ ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಿದ ಆಯುಕ್ತರು…..

ಬೆಂಗಳೂರು

ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ವಾಹನಗಳಲ್ಲಿಯೇ ಶೈಕ್ಷಣಿಕ ಪ್ರವಾಸ – ಖಾಸಗಿ ವಾಹನ,ಮಿನಿ ಬಸ್ ಗಳಲ್ಲಿ ಪ್ರವಾಸ ಕೈಗೊಳ್ಳ ದಂತೆ ಸೂಚನೆ ನೀಡಿದ ಆಯುಕ್ತರು ಹೌದು

ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ಇಲಾಖೆಯ ವಾಹನ ಗಳಲ್ಲಿಯೇ ಕರೆದುಕೊಂಡು ಹೋಗುವಂತೆ ಇಲಾಖೆಯ ಆಯುಕ್ತರು ಆದೇಶವನ್ನು ಮಾಡಿ ದ್ದಾರೆ.ಹೌದು ಈ ಒಂದು ವಿಚಾರ ಕುರಿತಂತೆ ಇತ್ತೀಚಿಗೆ ನಡೆದ ಕೆಲ ಘಟನೆಗಳು ಹಾಗೆ ಅವಘಡಗಳಿಂದ ಎಚ್ಚೇತ್ತುಕೊಂಡು ಆಯುಕ್ತರು ತುರ್ತಾಗಿ ಶೈಕ್ಷಣಿಕ ಪ್ರವಾಸಕ್ಕೆ ಹೊರಡುವ ರಾಜ್ಯದ ಸಮಸ್ತ ಶಿಕ್ಷಕರು ಮಕ್ಕಳನ್ನು ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲಿಯೇ ಕರೆದುಕೊಂಡು ಹೋಗು ವಂತೆ ಸೂಚನೆಯನ್ನು ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸ ವನ್ನು ಕೈಗೊಳ್ಳಬೇಕು.ಯಾವುದೇ ಕಾರಣಕ್ಕೂ ಅನಧೀಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗ ಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.

ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುಬೇಕೆಂದು ಆದೇಶದಲ್ಲಿ ಉಲ್ಲೇಖ ಮಾಡಿ ಪರಿಷ್ಕೃತ ವಾದ ಆದೇಶವನ್ನು ಮಾಡಿ ದ್ದಾರೆ ಅಲ್ಲದೇ ಇದನ್ನು ರಾಜ್ಯದ ಎಲ್ಲಾ ಶಾಲಾ ಕಾಲೇಜು ಗಳ ಶಿಕ್ಷಕರು ಪಾಲಿಸುವಂತೆ ಸೂಚನೆ ನೀಡಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.