ಹುಬ್ಬಳ್ಳಿ ಧಾರವಾಡ –
3ನೇ ಸ್ಥಾನ ಪಡೆದು ಹೊಸದೊಂದು ಸಾಧನೆ ಮಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ – ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಅಧಿಕಾರ ವಹಿಸಿಕೊಂಡ ಮೇಲೆ 3ನೇ ಸ್ಥಾನ ಪಡೆದುಕೊಂಡು ಗುರುತಿಸಿಕೊಂಡು ಪಾಲಿಕೆ ಹೌದು
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದು ಗುರುತಿಸಿಕೊಂ ಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ಸಾಧನೆಯನ್ನು ಮಾಡಿದೆ. ಹೌದು ಕೆಎಂಎಫ್(ಕರ್ನಾಟಕ ಮುನ್ಸಿಪಲ್ ಫೈನಾನ್ಸ್)-24 ಆನ್‌ಲೈನ್ ಅಪ್ಲಿಕೇಷನ್ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾ ನಗರ ಪಾಲಿಕೆಯು ರಾಜ್ಯದಲ್ಲಿ 3ನೇ ಸ್ಥಾನ ಪಡೆದುಕೊಂಡು ಐತಿಹಾಸಿಕ ಸಾಧನೆಯನ್ನು ಮಾಡಿದ ಕೀರ್ತಿಗೆ ಪಾತ್ರವಾಗಿದೆ.
ಈ ನಿಟ್ಟಿನಲ್ಲಿ ಕೆಎಂಎಫ್-24ರಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡು ಉತ್ತಮ ಸಾಧನೆ ಮಾಡಿದೆ ಅವಳಿ ನಗರದ ಎಲ್ಲಾ ಸ್ಥಿರಾಸ್ತಿಗಳನ್ನು ಡಿಜಿಟ ಲೀಕರಣಗೊಳಿಸುವ ಕೆಎಂಎಫ್ (ಕರ್ನಾಟಕ ಮುನ್ಸಿಪಲ್ ಫೈನಾನ್ಸ್)-24 ಆನ್‌ಲೈನ್ ಅಪ್ಲಿಕೇ ಷನ್ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ರಾಜ್ಯದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.ಅದರಲ್ಲೂ ಇತ್ತೀಚಿಗಷ್ಟೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಡಾ ಈಶ್ವರ ಉಳ್ಳಾಗಡ್ಡಿ ಅವರು ಬಂದ ಮೇಲಂತೂ ಸಾಕಷ್ಟು ಪ್ರಮಾಣದಲ್ಲಿ ಈ ಒಂದು ಕಾರ್ಯವೂ ವೇಗವನ್ನು ಪಡೆದುಕೊಂಡಿದ್ದು ಹೀಗಾಗಿ ಸಾಧ ನೆಗೆ ಮತ್ತಷ್ಟು ಪ್ರೇರಣೆಯಾದಂತಾಗಿದೆ.
ಎಲ್ಲಾ ಸ್ಥಿರಾಸ್ತಿಗಳನ್ನು ತೆರಿಗೆ (ಆಸ್ತಿ ಕರ) ವ್ಯಾಪ್ತಿಗೆ ತರುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯವು ಕೆಎಂಎಫ್ 24 ಆನ್‌ಲೈನ್ ಅಪ್ಲಿಕೇಷನ್ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ.ಈ ಪ್ರಕ್ರಿಯೆಯು ಡಿಜಿಟೈಸ್ಡ್ ಎಣಿಕೆ ಹಾಗೂ ಪರಿಶೀಲಿಸಲಾದ ಸಂಚಿತ ಎಣಿಕೆ ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ. 3,52,459 ಸ್ಥಿರಾಸ್ತಿಗಳ ಡಿಜಿಟಲೀಕರಣವು ಈಗಾಗಲೇ ಮೊದಲ ಹಂತದಲ್ಲಿ ಮಾಡಲಾಗಿದೆ.
ಹು-ಧಾ ಮಹಾನಗರ ಪಾಲಿಕೆಯು ಅಕ್ಟೋಬರ್ 3ರ ವರೆಗೆ 3,52,459 ಸ್ಥಿರಾಸ್ತಿಗಳನ್ನು ಡಿಜಿಟಲೀ ಕರಣಗೊಳಿಸಿದೆ. ಇದಕ್ಕೂ ಮೊದಲು ಪಾಲಿಕೆಯ ಲೆಕ್ಕದಲ್ಲಿ(ತೆರಿಗೆ ಜಾಲದಲ್ಲಿ)3,15,425 ಸ್ಥಿರಾಸ್ತಿಗ ಳಿದ್ದವು ಇದರಿಂದ ಡಿಜಿಟೈಸ್ಡ್ ಎಣಿಕೆಯಲ್ಲಿ ಪಾಲಿಕೆಯು ಶೇ. 111.74 ರಷ್ಟು ಪ್ರಗತಿಯೊಂ ದಿಗೆ ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.
ಇನ್ನೂಳಿದಂತೆ ಕೊಡಗು- ಪ್ರಥಮ, ರಾಮನಗರ- ದ್ವಿತೀಯ: ಕೊಡಗು (ಶೇ. 120.7) ಪ್ರಥಮ ಹಾಗೂ ರಾಮನಗರ (ಶೇ. 112. 84) ದ್ವಿತೀಯ ಸ್ಥಾನದಲ್ಲಿದೆ.ಈ ಎರಡು ನಗರಗಳಲ್ಲಿ ಸ್ಥಿರಾಸ್ತಿಗಳ ಸಂಖ್ಯೆ ಬಹಳ ಕಡಿಮೆಯಿವೆ. ಕೆಎಂಎಫ್-24 ಆನ್‌ಲೈನ್ ಅಪ್ಲಿಕೇಷನ್ ಬಳಿಕ ಇಲ್ಲಿಯವರೆಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ 37 ಸಾವಿರಕ್ಕೂ ಅಧಿಕ ಸ್ಥಿರಾಸ್ತಿಗಳು ತೆರಿಗೆ ಜಾಲದ ವ್ಯಾಪ್ತಿಗೆ ಬಂದಿರುವುದು ಪಾಲಿಕೆಯ ಗಮನಾರ್ಹ ಸಾಧನೆಯಾಗಿದೆ ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುತ್ತಾ ಹೋಗಲಿದೆ ಬಹಳಷ್ಟು ಅಕ್ರಮ- ಸಕ್ರಮ ಮನೆಗಳು ತೆರಿಗೆ ವ್ಯಾಪ್ತಿಗೆ ಬಂದಿವೆ.
ಇದರಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿಯವರು ಮಾಹಿತಿ ನೀಡಿದ್ದು ಇದರೊಂ ದಿಗೆ ಇನ್ನಷ್ಟು ಬೇರೆ ಬೇರೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಜನಪರ ಕಾಳಜಿಯೊಂದಿಗೆ ಸಾಕಷ್ಟು ಮಹತ್ವಪೂರ್ಣ ಕಾರ್ಯಗಳನ್ನು ಪಾಲಿಕೆಯಿಂದ ಬರುವ ದಿನಗ ಳಿಂದ ಮಾಡಲು ಪ್ಲಾನ್ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನೂ ಇಲ್ಲಿಯವರೆಗೆ ಪಾಲಿಕೆಯು ಹಿಂದಿನ ವರ್ಷಕ್ಕೆ ತುಲನೆ ಮಾಡಿ ನೋಡಿದರೆ ಆಸ್ತಿ ತೆರಿಗೆ ದರ ಏರಿಕೆ ಪ್ರಮಾಣಕ್ಕೆ ಅನುಗುಣವಾಗಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ನಿಗದಿ ಪಡಿಸುತ್ತಿತ್ತು ಕೆಎಂಎಫ್-24 ಆನ್ ಲೈನ್ ಅಪ್ಲಿಕೇಷನ್ ಪೂರ್ಣಗೊಂಡ ಬಳಿಕ ಆಸ್ತಿ ತೆರಿಗೆ ವಸೂಲಾತಿಯ ನಿಖರ ಲೆಕ್ಕ ಸಿಗಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..