ಹುಬ್ಬಳ್ಳಿ –
ಸಾಮಾನ್ಯವಾಗಿ ಯಾವುದೇ ಒಂದು ಸಮಸ್ಯೆ ಅಧಿಕಾರಿ ಗಳ ಗಮನಕ್ಕೆ ಬರುತ್ತಿದ್ದಂತೆ ಆ ಒಂದು ಸಮಸ್ಯೆ ಗಳನ್ನು ನೋಡಿ ತಿಳಿದುಕೊಂಡು ಪರಿಹಾರ ಮಾಡಲು ಸಾಕಷ್ಟು ಪ್ರಮಾಣದಲ್ಲಿ ಸಮಯ ತೆಗೆದುಕೊಳ್ಳುತ್ತಾರೆ ಆದರೂ ಕೆಲ ವೊಮ್ಮೆ ಗಮನಕ್ಕೆ ಬಂದರು ಕೂಡಾ ಏನು ಆಗೊದಿಲ್ಲ ಹೀಗಿರುವಾಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು 30 ವರ್ಷ ಗಳ ಸಮಸ್ಯೆ ಯೊಂದನ್ನು ಒಂದೇ ಬಾರಿ ಇತ್ಯರ್ಥ ಮಾಡಿದ್ದಾರೆ
ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಕರ್ಜಗಿ ಓಣಿಯ ಸಾರ್ವಜನಿಕರ ಬಹುದಿನದ ಬೇಡಿಕೆಗೆ ಸ್ಪಂದಿಸಿದ್ದಾರೆ ಪಾಲಿಕೆ ಆಯುಕ್ತರು ಸಾಥ್ ನೀಡಿದ್ದಾರೆ ಪಾಲಿಕೆ ಸದಸ್ಯರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಳೇ ಹುಬ್ಬಳ್ಳಿಯ ಕರ್ಜಗಿ ಓಣಿಯಲ್ಲಿ ಬಹುದಿನದ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿ,ಯುಜಿಡಿ ಹಾಗೂ ಡ್ರೈನೇಜ್ ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಶೀಲಿಸುವ ಕುರಿತು ಪಾಲಿಕೆಯ ಆಯುಕ್ತ ರಾದ ಡಾ ಈಶ್ವರ ಉಳ್ಳಾಗಡ್ಡಿ ರವರು ಪಾಲಿಕೆ ಸದಸ್ಯರಾದ ಶ್ರೀಮತಿ ಸುಮಿತ್ರ ಗುಂಜಾಳ ರವರು ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದರು
ಸುಮಾರು 30ವರ್ಷಗಳ. ಸಾರ್ವಜನಿಕರ ಬೇಡಿಕೆಯಾಗಿದ್ದ ಕರ್ಜಗಿ ಓಣಿಯ ರಸ್ತೆ ನಿರ್ಮಾಣ ಕುರಿತು ಬೇಡಿಕೆಗೆ ಸ್ಪಂದಿಸಿದ ಆಯುಕ್ತರು ವಲಯ ಕಚೇರಿ 10ರ ಸಹಾಯಕ ಅಭಿಯಂತರರಾದ ಬೊಮ್ಮಲಿಂಗೇಶ್ವರ ಇವರನ್ನು ಸ್ಥಳಕ್ಕೆ ಕರೆದು ಕರ್ಜಗಿ ಓಣಿಯ ಸಾರ್ವಜನಿಕರ ಬಹುದಿನದ ಬೇಡಿಕೆಗೆ ತಕ್ಷಣ ಸ್ಪಂದಿಸುವಂತೆ ನಿರ್ದೇಶನ ನೀಡಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..