ಬೆಂಗಳೂರು –
ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿಕೊಂಡು ಬೇರೆ ಬೇರೆ ಕಡೆಗಳಲ್ಲಿ ಅವರಿವರ ಶಿಫಾರಸ್ತಿನ ಮೇಲೆ ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳದೇ ಹಲವೆಡೆ ನಿಯೋಜನೆ ಗೊಂಡು ಕಾರ್ಯವನ್ನು ಮಾಡುತ್ತಿರುವ ನಿಯೋಜನೆಗೊಂಡ ಶಿಕ್ಷಕ ರನ್ನು ಈ ಕೂಡಲೇ ರದ್ದು ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್ ವಿಶಾಲ್ ಆದೇಶವನ್ನು ಮಾಡಿದ್ದಾರೆ.ಹೌದು ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿ ಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನಿಯೋಜನೆಯನ್ನು ರದ್ದುಪಡಿಸುವಂತೆ ಇಲಾಖೆಯ ಆಯುಕ್ತರು ಆದೇಶವನ್ನು ಮಾಡಿದ್ದಾರೆ.
ಹೌದು ಏಪ್ರಿಲ್ 14 ರ ಒಳಗಾಗಿ ಸಮಗ್ರವಾದ ಮಾಹಿತಿ ಯನ್ನು ನೀಡುವಂತೆ ಆಯುಕ್ತರು ರಾಜ್ಯದ ಎಲ್ಲಾ ಉಪ ನಿರ್ದೇಶಕರುಗಳಿಗೆ ಸೂಚನೆಯನ್ನು ಮಾಡಿದ್ದಾರೆ.ಇನ್ನೂ ಈ ಹಿಂದೆ ಕೂಡಾ ಎರಡು ಮೂರು ಬಾರಿ ಆಯುಕ್ತರು ಆದೇಶವನ್ನು ಮಾಡಿದ್ದು ಮತ್ತೆ ಸುಮ್ಮನಾಗೊದು ಈಗ ಮತ್ತೆ ಇಂತಹ ಆದೇಶವನ್ನು ಮಾಡಿದ್ದು ಈಗಲಾದರೂ ಅಧಿಕಾರಿಗಳು ಸಮಗ್ರವಾದ ಮಾಹಿತಿಯೊಂದಿಗೆ ಆಯು ಕ್ತರ ಆದೇಶಕ್ಕೆ ಬೆಲೆ ಕೊಟ್ಟು ನಿಯೋಜನೆಗೊಂಡಿರುವ ಶಿಕ್ಷಕರನ್ನು ರದ್ದು ಮಾಡುತ್ತಾರೆನಾ ಎಂಬುದನ್ನು ಕಾದು ನೋಡಬೇಕಿದೆ.