ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ಒಂದೇ ವಾರದಲ್ಲಿ ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾ ದಗಿದ್ದಾರೆ. ಶಾಲೆಗಳಿಗೆ ರಜೆಗಳನ್ನು ಘೋಷಣೆ ಮಾಡಿದ್ದರು ಕೂಡಾ ಮನೆಯಲ್ಲಿದ್ದ ಶಿಕ್ಷಕರಿಗೆ ಈಗ ಸೋಂಕು ಕಾಣಿಸಿಕೊಳ್ಳುತ್ತಿದೆ.ಕರ್ತವ್ಯ ಮಾಡಿದ ನಂತರ ಈಗ ಶಿಕ್ಷಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿ ದ್ದಾರೆ ಹೀಗಾಗಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಸಾವಿಗೀಡಾಗುತ್ತಿದ್ದಾರೆ.

ಹೌದು ಒಂದು ವಾರದಲ್ಲಿ ರಾಜ್ಯದಲ್ಲಿ ಶಿಕ್ಷಕರು ಹೆಚ್ಚಿ ನ ಸಂಖ್ಯೆಯಲ್ಲಿ ಸಾವಿಗೀಡಾದ ಆಘಾತಕಾರಿ ಅಂಶ ವೊಂದು ಸಧ್ಯ ಬೆಳಕಿಗೆ ಬಂದಿದ್ದು ಇನ್ನೂ ಕೂಡಾ ಈ ಒಂದು ಸಂಖ್ಯೆ ಹೆಚ್ಚುತ್ತಲೆ ಇದೆ.ಹೀಗೆ ದೊಡ್ಡ ಸಂಖ್ಯೆಯಲ್ಲಿ ನಾಡಿನಲ್ಲಿ ಶಿಕ್ಷಕರು ಸಾವಗೀಡಾಗು ತ್ತಿದ್ದರು ಕೂಡಾ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ಇಲಾಖೆ ಯಾಕೇ ಒಂದು ಮಾತನ್ನು ಮಾತನಾಡು ತ್ತಿಲ್ಲ ಈ ಕುರಿತಂತೆ ಗಂಭೀರವಾಗಿ ಇದನ್ನು ತಗೆದು ಕೊಳ್ಳುತ್ತಿಲ್ಲ ಹೀಗಾಗಿ ಇದೊಂದು ದೊಡ್ಡ ಆಘಾತಕಾ ರಿ ವಿಚಾರದಿಂದ ನಾಡಿನ ಶಿಕ್ಷಕ ಸಮುದಾಯದ ವರು ಭಯಗೊಂಡಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಮತ್ತು ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ಇದರಲ್ಲಿ ಹೆಚ್ಚಿ ನ ಪ್ರಮಾಣದಲ್ಲಿ ಶಿಕ್ಷಕರು ಕೂಡಾ ಸಾವಿಗೀಡಾಗು ತ್ತಿದ್ದರೂ ಕೂಡಾ ಈವರೆಗೆ ಈ ಕುರಿತಂತೆ ಯಾರು ಕೂಡಾ ನೋಡುತ್ತಿಲ್ಲ ಕೇಳುತ್ತಿಲ್ಲ ಹೀಗಾಗಿ ಸರಣಿ ಸಾವಿನ ಸುದ್ದಿಯಿಂದ ನಾಡಿನ ಶಿಕ್ಷಕ ಸಮುದಾಯ ದವರು ಭಯದಲ್ಲಿದ್ದು ಇನ್ನಾದರೂ ಇದರಿಂದ ಎಚ್ಚೇತ್ತುಕೊಂಡು ಈಕುರಿತಂತೆ ಸೂಕ್ತವಾದ ನಿರ್ಧಾ ರವನ್ನು ತಗೆದುಕೊಂಡು ಕೂಡಲೇ ಸಾವಿನ ಸುದ್ದಿ ಯಿಂದ ಕಂಗಾಲಾಗಿರುವ ನಾಡಿನ ಶಿಕ್ಷಕರಿಗೆ ಇನ್ನಾದ ರೂ ಮಹಾಮಾರಿಯಿಂದ ಆಶಾಧಾಯಕ ವಾದ ಸಂದೇಶವನ್ನು ನೀಡುತ್ತಾರೆನಾ ಎಂಬುದನ್ನು ಕಾದು ನೋಡಬೇಕು.

ಇನ್ನೂ ರಾಜ್ಯದಲ್ಲಿ ಸಾಲು ಸಾಲಾಗಿ ನಿಧನರಾಗುತ್ತಿರುವ ಶಿಕ್ಷಕ ಬಂಧುಗಳಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾ ಪವನ್ನು ಸೂಚಿಸಿದ್ದಾರೆ.ಅದರಲ್ಲೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣ ನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಹನಮಂತಪ್ಪ ಬೂದಿಹಾಳ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದೆ.ಇನ್ನೂ ಇದರೊಂದಿಗೆ ಮನೆಯಲ್ಲಿ ಇರಿ ಸುರಕ್ಷಿತವಾಗಿರು ಕಾಳಜಿ ಇರಲಿ ಭಯ ಬೇಡ ಎನ್ನುವ ಸಂದೇಶವನ್ನು ಸಂಘದ ಸರ್ವಸದಸ್ಯರುನೀಡಿದ್ದಾರೆ