ಧಾರವಾಡ –
ಧಾರವಾಡ ಜಿಲ್ಲೆಯಲ್ಲಿ ಆರಂಭಗೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಸಂವಿಧಾನ ದಿನಾಚರಣೆ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿದೆ ಅರ್ಥ ಪೂರ್ಣ ಕಾರ್ಯಕ್ರಮ ಹೌದು…..
ರಾಜ್ಯ ಸರ್ಕಾರದ ಸೂಚನೆಯಂತೆ ಸಂವಿಧಾನ ದಿನಾಚರಣೆ ಪ್ರಯುಕ್ತವಾದ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯು ತ್ತಿದೆ.ಹೌದು ಈ ಒಂದು ವಿಚಾರ ಕುರಿತಂತೆ ರಾಜ್ಯ ಸರ್ಕಾರ ಸೂಚನೆ ನೀಡುತ್ತಿದ್ದಂತೆ ರಾಜ್ಯದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತವಾಗಿ ಸಂವಿಧಾನ ಕುರಿತಂತೆ ಅರ್ಥಪೂರ್ಣವಾದ ಕಾರ್ಯಕ್ರಗಳು ನಡೆಯುತ್ತಿದ್ದು
ಧಾರವಾಡ ಜಿಲ್ಲೆಯಲ್ಲೂ ಕೂಡಾ ಸಮಾಜ ಕಲ್ಯಾಣ ಇಲಾಖೆಯಿಂದ ಈ ಒಂದು ಕಾರ್ಯ ಕ್ರಮಗಳನ್ನು ಮಾಡಲಾಗುತ್ತಿದ್ದು ಜಿಲ್ಲೆಯ ಹಲವೆಡೆ ರಾಜ್ಯ ಸರ್ಕಾರದ ಸೂಚನೆಯಂತೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಧಾರವಾಡ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್ ,ಸಮಾಜ ಕಲ್ಯಾಣ ಇಲಾಖೆಯಿಂದ ಹಳ್ಳಿಗೇರಿ, ನಿಗದಿ, ಮನಗುಂಡಿ, ಮನ್ಸೂರ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಲ್ಲಾಬಕಾಷ್ ಎಮ್ ಎಸ್ ಇವರ ಮಾರ್ಗದರ್ಶನದಲ್ಲಿ ಸಹಾಯಕ ನಿರ್ದೇ ಶಕರಾದ ಶ್ರೀಮತಿ ಎಂ.ಬಿಸಣ್ಣೇರ ಇವರ ಉಪಸ್ಥಿ ತಿಯಲ್ಲಿ ಹಲವಾರು ಕಲಾತಂಡ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಮೆರವಣಿಗೆ ಮೂಲಕ ಎಲ್ಲಾ ಬೀದಿ ಬೀದಿಗಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಸಂವಿಧಾನ ಪ್ರಸ್ತಾವನೆ ವಾಚಿಸುವ ಮೂಲಕ ಅರಿವು ಮೂಡಿಸಿದರು.
ಬೈಕ್ ರ‍್ಯಾಲಿ, ಬಲೂನ್ ಆಕಾಶಕ್ಕೆ ಬಿಡುವ ಮೂಲಕ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗ ಳೊಂದಿಗೆ ಸಂವಿಧಾನ ಕುರಿತಂತೆ ಜಾಗೃತಿಯನ್ನು ಮಾಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾ ಯಿತು,ಅರ್ಥಪೂರ್ಣವಾದ ಈ ಒಂದು ಕಾರ್ಯ. ಕ್ರಮವನ್ನು ಆಯೋಜನೆ ಮಾಡಿರುವ ಕುರಿತಂತೆ ಎಲ್ಲಾ ಗ್ರಾಮಸ್ಥರು ಪ್ರಶಂಸೆಯನ್ನು ವ್ಯಕ್ತಪಡಿಸಿ ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..






















