ಹುಬ್ಬಳ್ಳಿ ಧಾರವಾಡ –
15 ನಿಮಿಷ ತಡವಾಗಿ ಬಂದ ಬಸ್ ಗಳ ಮಾಹಿತಿ ಯನ್ನು DC ಯವರಿಗೆ ನೀಡಿದ ಕಂಟ್ರೋಲರ್ Toilet ಗೆ ಹೋಗಲಾರದ ಟೈಮ್ ಇಲ್ಲದ ಟೈಟ್ ಶೆಡ್ಯೂಲ್ ನಲ್ಲಿ ಹೇಗೆ ಡೂಟಿ ಮಾಡಬೇಕು DC ಸಾಹೇಬ್ರ…..ಚಾಲಕರೇ ಎಚ್ಚೇತ್ತುಕೊಳ್ಳಿ…..
ಅವಳಿ ನಗರದ ಮಧ್ಯೆ ಜನರ ನಾಡಿ ಮಿಡಿತ ವಾಗಿರುವ ಚಿಗರಿ ಬಸ್ ನಲ್ಲಿ ಒಂದಲ್ಲಾ ಹಲವು ಎಡವಟ್ಟುಗಳು ಬೆಳಕಿಗೆ ಬರುತ್ತಿವೆ. ಎಲ್ಲವೂ ಸರಿಯಾಗಿದೆ ಎಂಬಂತಹ ಪರಿಸ್ಥಿತಿ ಯಲ್ಲಿ ಸಧ್ಯ ಬಸ್ ಗಳ ನಿರ್ವಹಣೆ ಸರಿಯಾಗಿಲ್ಲ ಆರಂಭ ಗೊಂಡು ಐದಾರು ವರ್ಷ ಕಳೆದರು ಕೂಡಾ ಬಸ್ ಗಳ ನಿರ್ವಹಣೆ ಸರಿಯಾಗಿಲ್ಲ
ಆರಂಭದಲ್ಲಿ ಕಾಣಿಸಿಕೊಂಡ ಒಂದೊಂದು ಸಮಸ್ಯೆಗಳನ್ನು ಪರಿಹರಿಸಿದ್ದರೆ ಸಧ್ಯ ಇಪ್ಪತ್ತಕ್ಕೂ ಹೆಚ್ಚು ಬಸ್ ಗಳು ಡಿಪೋ ದಲ್ಲಿ ನಿಲ್ಲುವ ಮತ್ತು ರಸ್ತೆ ಮಧ್ಯ ದಲ್ಲಿ ಎಲ್ಲೆಂದರಲ್ಲಿ ನಿಂತುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.ಇದು ಒಂದೆಡೆಯಾದರೆ ಇನ್ನೂ ಹುಬ್ಬಳ್ಳಿಯ ರೇಲ್ವೆ ನಿಲ್ದಾಣ ದಿಂದ ಧಾರವಾಡ ಹೊಸ ಬಸ್ ನಿಲ್ದಾಣಕ್ಕೆ ಹೋಗಲು 50 ನಿಮಿಷಗಳ ಕಾಲಾವಧಿಯನ್ನು ನೀಡಿದ್ದಾರೆ ಆದರೆ ಹುಬ್ಬಳ್ಳಿಯ ಸಿಟಿ ಹೊಸೂರು ಕ್ರಾಸ್ ತಲುಪಲು ಕನಿಷ್ಠ 15 ರಿಂದ 20 ನಿಮಿಷ ಸಮಯ ಬೇಕು
ಅದರಲ್ಲಿ ಏನಾದರೂ ಪ್ರತಿಭಟನೆ ಇದ್ದರಂತೂ ಕಥೆ ಮುಗಿತು ನಂತರ ಹೀಗಿರುವಾಗ Toilet ಹೋಗಲಾರದೆ ಬಿಟ್ಟು ಬಿಡದೇ ಟೈಟ್ ಶೆಡ್ಯೂಲ್ ನಲ್ಲಿಯೇ ತಿರುಗಾಡುತ್ತಿದ್ದು 33 ನಿಲ್ದಾಣ ನಿಂತು ಕೊಂಡು ಹೊಸ ಬಸ್ ನಿಲ್ದಾಣಕ್ಕೆ ಬರಬೇಕು ಹೀಗಿರುವಾಗ ಸಧ್ಯ ಹುಬ್ಬಳ್ಳಿಯ ಕೆಲ ಬಸ್ ಗಳು ಹದಿನೈದು ನಿಮಿಷ ತಡವಾಗಿ ಧಾರವಾಡ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದು ಯಾಕೆ ತಡವಾಯಿತು ಕಾರಣ ಏನು ಎಂದು ವಿಚಾರ ಮಾಡದ ಡಿಸಿ ಯವರು ತಡವಾಗಿ ಬಂದ ಬಸ್ ಗಳ ಮಾಹಿತಿ ಯನ್ನು ಕೇಳಿದ್ದಾರೆ.
ಮಾಹಿತಿ ಕೇಳುವ ಮುಂಚೆ ಎಲ್ಲವನ್ನೂ ವಿಚಾರ ಕೇಳಬೇಕು ಆದರೆ ಏನು ಮಾಡೊದು ಎಲ್ಲಾ ಮಾಹಿತಿ ತಿಳಿದುಕೊಂಡಿದ್ದರೆ ಕೇಳುತ್ತಿರಲಿಲ್ಲ ಕಂಟ್ರೋಲರ್ ಕೊಡುತ್ತಿರಲಿಲ್ಲ ಡಿಸಿ ಸಾಹೇಬ್ರ ಕೇಳಿದರು ಕಂಟ್ರೋಲರ್ ಧಾರವಾಡ ಹೊಸ ಬಸ್ ನಿಲ್ದಾಣ ದಲ್ಲಿ ಡೂಟಿ ಇದ್ದರೂ ಕೂಡಾ ಮಾರ್ಶಲ್ ಗೆ ಡೂಟಿ ಮಾಡಲು ಹೋಗಿ ಕಂಟ್ರೋಲರ್ ಓಡುತ್ತಲೆ ಹೋಗಿ ತಡವಾಗಿ ಬಸ್ ಗಳ ಮಾಹಿತಿ ನೀಡಿದ್ದು ಸರಿನಾ
ಇದನ್ನು ಬಿಡಿ ಬಸ್ ಗಳ ನಿರ್ವಹಣೆ ಯೊಂದಿಗೆ ಅಮಾನತು ಎನ್ನುತ್ತಾ ಭಯದಲ್ಲಿರುವ ಡ್ರೈವರ್ ಗೆ ನೆಮ್ಮದಿಯ ವಾತಾವರಣ ನೀಡಿ ಡಿಸಿ ಸಾಹೇಬ್ರ ಅದು ನಿಜವಾದ ಕೆಲಸ ಇನ್ಮೂ ಇಲ್ಲಿ ಏನು ನಡೆಯುತ್ತಿದೆ ಎಂಬೊಂದನ್ನು ಒಮ್ಮೆ ನೋಡಿ MD ಯವರೇ…… ಎಂಬೊದನ್ನು ಚಾಲಕರಿಂದ ಸಮಸ್ಯೆ ಆಲಿಸಿ ನೆಮ್ಮದಿಯ ವಾತಾವರಣನ್ನುಂಟು ಮಾಡುತ್ತಾರಾ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..