ಬೆಂಗಳೂರು –
ಸಧ್ಯ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಆರಂಭಗೊಂಡಿದ್ದು ಈ ಒಂದು ವಿಚಾರವಾದರೆ ಈ ಒಂದು ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನ್ಯಾಯವಾಗು ತ್ತಿದೆ ಅನ್ಯಾಯವಾಗಿದೆ ಎಂದು ಸಾವಿರಾರು ಶಿಕ್ಷಕರು ನೊಂದುಕೊಂಡಿದ್ದಾರೆ ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ಬೇಸತ್ತಿದ್ದು ವರ್ಗಾವಣೆಯಿಂದ ವಂಚಿತ ಗೊಂಡ ಜಿಪಿಟಿ ಶಿಕ್ಷಕರು ತೆರೆ ಮರೆಯಲ್ಲಿ ಕಾನೂನು ಹೋರಾಟಕ್ಕೆ ಸಿದ್ದರಾಗಿದ್ದು ಇವತ್ತು ಧಾರವಾಡದ ಹೈಕೊರ್ಟ್ ನಲ್ಲಿ ಮತ್ತು ಬೆಂಗಳೂರಿನ ಕೆಎಟಿ ನಲ್ಲಿ ಪ್ರತ್ಯೇಕವಾಗಿ ಎರಡು ಅರ್ಜಿಯನ್ನು GPT ಶಿಕ್ಷಕರು ಸಲ್ಲಿಸಲಿದ್ದಾರೆ.
ಹೌದು ಪ್ರಮುಖವಾಗಿ ಈ ಒಂದು ಜಿಪಿಟಿ ಶಿಕ್ಷಕರು ತಮಗೆ ಆಗಿರುವ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಹೈಕೊರ್ಟ್ ನಲ್ಲಿ ಇಂದು ಅರ್ಜಿ ಸಲ್ಲಿಸಲಿದ್ದಾರೆ.ಸಧ್ಯ ರಾಜ್ಯದಲ್ಲಿ 10 ಸಾವಿರ ಜಿಪಿಟಿ ಶಿಕ್ಷಕರಿದ್ದು ಇನ್ನೂ PST ಶಿಕ್ಷಕರು ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ಇದ್ದಾರೆ. ಜಿಪಿಟಿ ಶಿಕ್ಷಕರ ಎಲ್ಲಾ ಹುದ್ದೆಗಳನ್ನು ಪಿಎಸ್ ಟಿ ಶಿಕ್ಷಕರಿಗೆ ಈ ಒಂದು ವರ್ಗಾವಣೆಯಲ್ಲಿ ನೀಡಿದ್ದಾರೆ.ಇದು ಒಂದು ವಿಚಾರವಾದರೆ ಇನ್ನೂ ಇದರೊಂದಿಗೆ ವೇತನ ಶ್ರೇಣಿ,ವೃಂದ ಸ್ಥಾನಮಾನ,ವರ್ಗಾವಣೆಯಲ್ಲಿ ಅನ್ಯಾಯ ವಿದ್ಯಾರ್ಹತೆ ಹೀಗೆ ನಾಲ್ಕೈದು ವಿಚಾರದಲ್ಲಿ ಜಿಪಿಟಿ ಶಿಕ್ಷಕರಿಗೆ ಅನ್ಯಾಯ ವಾಗಿದೆಯಂತೆ ಇದೇಲ್ಲವನ್ನು ಮುಂದಿಟ್ಟುಕೊಂಡು ಇಂದು ಸಾಮೂಹಿಕವಾಗಿ ಧಾರವಾಡದ ಹೈಕೊರ್ಟ್ ಮತ್ತು ಬೆಂಗಳೂರಿನ ಕೆಎಟಿ ನಲ್ಲಿ ಅರ್ಜಿಯನ್ನು ಸಲ್ಲಸಿದ್ದಾರೆ ಶಿಕ್ಷಣ ಇಲಾಖೆ ಈ ಒಂದು ವಿಚಾರದಲ್ಲಿ ದೊಡ್ಡ ತಪ್ಪನ್ನು ಮಾಡಿದ್ದು ಹೀಗಾಗಿ ಸಧ್ಯ ತಮಗೆ ಆಗಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಜಿಪಿಟಿ ಶಿಕ್ಷಕರು ಪಿಎಸ್ ಟಿ ಶಿಕ್ಷಕರಿಗೆ ವರ್ಗಾವಣೆಯಲ್ಲಿನ ಅವಕಾಶವನ್ನು ಹಾಗೇ ಇನ್ನಿತರ ವಿಚಾರಗಳ ಕುರಿತಂತೆ ನ್ಯಾಯಾಲಯದಲ್ಲಿ ಪ್ರಶ್ನೆಯನ್ನು ಮಾಡಿ ಅರ್ಜಿಯನ್ನು ಸಲ್ಲಿಸಲಿದ್ದು ಸಧ್ಯ ಅರ್ಜಿಯನ್ನು ದಾಖಲು ಮಾಡಿಕೊಂಡಿರುವ ನ್ಯಾಯಾ ಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡ ಬೇಕು. ಈಗಾಗಲೇ ವರ್ಗಾವಣೆಗೊಂಡ ಪಿಎಸ್ ಟಿ ಶಿಕ್ಷಕರ ಪಾಡೇನು ಏನಾಗುತ್ತದೆ ಎನೋ ಎಂಬ ಆತಂಕವನ್ನು ಮನೆ ಮಾಡಿದೆ.