ಬೆಂಗಳೂರು –
ಈ ಬಾರಿಯ ಸದನದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊನೆಗೂ ಜಾರಿಗೆ ತಂದಿದ್ದಾರೆ. ಇಂದು ವಿಧಾನಸಭೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾನ್ ಮಸೂದನೆಯನ್ನು ಮಂಡಿಸಿದರು.ಮಸೂದೆ ಮಂಡನೆಗೆ ಪ್ರತಿಪಕ್ಷಗಳಾದಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಇದರ ಮಧ್ಯೆಯೂ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಇಂದು ಅಂಗೀಕಾರಗೊಂಡಿದೆ.

ರಾಜ್ಯ ವಿಧಾನಸಭೆಯಲ್ಲಿ ಕೊನೆಗೂ ಪ್ರಾಣಿಗಳ ಹತ್ಯೆ ಹೆಸರಿನಲ್ಲಿ ನಿಷೇಧ ಹೇರುವ ಹೆಸರಿನಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಲ್ಪಟ್ಟಿದೆ. ಪಶು ಸಂಗೋಪಾನಾ ಸಚಿವ ಪ್ರಭು ಚೌವ್ಹಾಣ್ ಅವರು ಸದನದಲ್ಲಿ ಮಂಡಿಸಿದರು. ಆದ್ರೇ ಗೋ ಹತ್ಯೆ ವಿಷೇಧ ವಿಧೇಯಕ ಮಂಡನೆಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಅಲ್ಲದೇ ಸದನದ ಭಾವಿಗೆ ಇಳಿದು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.ಈ ವೇಳೆ ಮಧ್ಯ ಪ್ರವೇಶಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಾವು ನಾಳೆ ಹೊಸ ಬಿಲ್ ಗಳನ್ನು ಪಾಸ್ ಮಾಡಿಕೊಡೋದಿಲ್ಲ ಎಂಬುದಾಗಿ ಹೇಳಿದ್ವಿ. ಹೊಸ ಬಿಲ್ ಗಳನ್ನು ಹೊರತಾಗಿ ಬೇರೆ ಬಿಲ್ ಗಳನ್ನು ತಿದ್ದುಪಡಿ ಮಾಡಿಕೊಡುತ್ತೇವೆ ಎಂಬುದಾಗಿ ತಿಳಿಸಿದ್ವಿ. ನಾನು ಈ ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ವಿರೋಧ ವ್ಯಕ್ತ ಪಡಿಸಿದರು.

ಆದ್ರೇ ಇಂತಹ ತೀವ್ರ ವಿರೋಧ, ಗದ್ದಲದ ನಡುವೆಯೂ ಗೋಹತ್ಯೆ ನಿಷೇಧ ವಿಧೇಯ ವಿಧಾನಸಭೆಯಲ್ಲಿ ಮಂಡನೆಯಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತಕ್ಕೆ ಹಾಕಿದರು. ಈ ವೇಳೆ ಪ್ರತಿಪಕ್ಷಗಳು ಸದನದ ಭಾವಿಗಿಳಿದು ವಿರೋಧ ವ್ಯಕ್ತಪಡಿಸಿದವು. ಇದರ ಮಧ್ಯೆಯೂ ಗೋ ಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ತೀವ್ರ ವಿರೋಧದ ನಡುವೆಯೂ ಅಂಗೀಕಾರವಾಗಿದೆ.