ಬೆಂಗಳೂರು –
ಇತ್ತೀಚೆಗೆ ಉಕ್ರೇನ್ ನಲ್ಲಿ ರಷ್ಯಾ ಸೇನೆಯ ಶೆಲ್ ದಾಳಿಗೆ ಮೃತಪಟ್ಟ ಹಾವೇರಿ ಮೂಲದ ಯುವಕ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ ಆಗಮಿಸಲಿದೆ.ಹೌದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಉಕ್ರೇನ್ ನಲ್ಲಿ ನಲ್ಲಿ ರಷ್ಯಾ ದಾಳಿಗೆ ಸಿಲುಕಿ ಮೃತಪಟ್ಟ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಪಾರ್ಥಿವ ಶರೀರ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಬರಲಿದೆ.

ಅಲ್ಲಿಂದ ಅವರ ಕುಟುಂಬದವರಿಗೆ ಹಸ್ತಾಂತರ ಮಾಡಲಾ ಗುತ್ತದೆ ಎಂದರು.ಇನ್ನೂ ಖಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ಮಾರ್ಚ್ 1 ರಂದು ಬೆಳಗ್ಗೆ ತಿಂಡಿ ತರಲೆಂದು ಹೊರಗೆ ಬಂದಿದ್ದ ಆ ವೇಳೆ ರಷ್ಯಾದ ಶೆಲ್ ದಾಳಿಗೆ ಕಟ್ಟಡ ಧ್ವಂಸಗೊಂಡು ಕಟ್ಟಡದ ಬಳಿಯಿದ್ದ ನವೀನ್ ಮೃತಪಟ್ಟಿದ್ದ ಮೃತನಾದ ನವೀನ್ ನ ಪಾರ್ಥಿವ ಶರೀರವನ್ನು ಈವರೆಗೆ ಅಲ್ಲಿಯೇ ಇಡಲಾಗಿತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯದ ನಿರಂತರವಾದ ಮಾತುಕ ತೆಯಿಂದಾಗಿ ಸಧ್ಯ ನವೀನ್ ಮೃತ ಪಾರ್ಥಿವ ಶರೀರವನ್ನು ನಾಡಿಗೆ ತರಲಾಗುತ್ತಿದ್ದು ಬೆಂಗಳೂರಿಗೆ ಬಂದ ನಂತರ ಅಂದೇ ಹಾವೇರಿಗೆ ಬರಲಿದೆ.